• Thu. Mar 28th, 2024

ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಕಾರ್ಮಿಕರು ನೊಂದಣಿ ಮಾಡಿಸಿಕೊಳ್ಳಿ-ಕೆ.ವಿ.ಸುರೇಶ್‌ಕುಮಾರ್

PLACE YOUR AD HERE AT LOWEST PRICE

ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರು, ಎಲೆಕ್ಟ್ರಿಷಿಯನ್  ವೃತ್ತಿಗೆ ಸಾಮಾಜಿಕ ಭದ್ರತಾ ಯೋಜನೆ ಕಲ್ಪಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ತಿನ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಕರೆ ನೀಡಿದರು.

ಕೋಲಾರ ಕೆ.ಪಿ.ಟಿ.ಸಿ.ಎಲ್ ನೌಕರರ ಸಂಘ ಮತ್ತು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಹಾಗೂ ಕೋಲಾರ ಜಿಲ್ಲಾ ಕಟ್ಟಡ ಕಾರ್ಮಿಕರ ಕಲ್ಯಾಣ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಬೆಸ್ಕಾಂ ಕಚೇರಿ ಆವರಣದಲ್ಲಿ ನೊಂದಾಯಿತ ವಿದ್ಯುತ್ ಕಾರ್ಮಿಕರಿಗೆ ಗುರುತಿನ ಚೀಟಿ.  ಪ್ರತಿರಕ್ಷಣಾ ಸಾಮಾಗ್ರಿ, ಹಿರಿಯ ಅನುಭವಿ ಕಾರ್ಮಿಕರಿಗೆ ವೃತ್ತಿ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅತಿ ಅಪಾಯಕಾರಿ ವೃತ್ತಿ ಎಲೆಕ್ಟ್ರಿಷಿಯನ್  ಕೆಲಸ ಮಾಡುವ ಕಾರ್ಮಿಕರು ನೊಂದಣಿಯಲ್ಲಿ ನಿರ್ಲಕ್ಷö್ಯ ವಹಿಸಿದರೆ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಸಿಗುವುದಿಲ್ಲವಾದ್ದರಿಂದ ಕಡ್ಡಾಯವಾಗಿ ನೊಂದಣಿ ಮಾಡಿಸಿಕೊಂಡು ಮಕ್ಕಳ ಶಿಕ್ಷಣಕ್ಕೆ ಪ್ರಾಥಮಿಕ ಶಾಲೆಯಿಂದ ಹಿಡಿದು ಉನ್ನತ ಶಿಕ್ಷಣಕ್ಕೆ ಅದರಲ್ಲೂ ವೈದ್ಯಕೀಯ, ಇಂಜಿನೀಯರಿ0ಗ್ ಮತ್ತು ಸ್ನಾತಕೋತ್ತರ ಪದವಿಯೊಂದಿಗೆ ಐ.ಐ.ಟಿ, ಐ.ಐ.ಎಂ, ಎನ್.ಐ.ಟಿ, ಐ.ಐ.ಎಸ್.ಸಿ.ಆರ್, ಎಸ್.ಇ.ಆರ್, ಎ.ಐ.ಐ.ಎಂ.ಎಸ್, ಎನ್.ಎಲ್.ಯು ಹಾಗೂ ಕೆಂದ್ರ ಸರ್ಕಾರದ ಪಟ್ಟಿಯಲ್ಲಿರುವ ಸಂಪೂರ್ಣ ಶಿಕ್ಷಣಕ್ಕೆ ಬೋಧನಾ ಶುಲ್ಕವನ್ನು ಇದರ ಮುಖಾಂತರ ಪಡೆದುಕೊಳ್ಳಬಹುದಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎಂ.ವಿ.ಸ್ವಾಮಿ ಮಾತನಾಡಿ, ವಿದ್ಯುತ್ ಗುತ್ತಿಗೆದಾರರ ಬಳಿ ಕಾರ್ಯನೀರ್ವಹಿಸುವ ವೈರ್‌ಮೆನ್, ಲೈನ್‌ಮೆನ್, ವಿದ್ಯುತ್ ತಂತಿ ಅಳಡಿಸುವ ಮತ್ತು ಖಾಸಗಿ ಎಲೆಕ್ಟ್ರಿಷಿಯನ್  ವೃತ್ತಿ ಮಾಡುವ ಕಾರ್ಮಿಕರಿಗೆ ಸರ್ಕಾರದಿಂದ ಸೌಲಭ್ಯಗಳು ದೊರೆಯುತ್ತಿದ್ದು, ಈ ರೀತಿಯ ಅಸಂಘಟಿತ ಕಾರ್ಮಿಕರು ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಂಡು ಸೌಲಭ್ಯ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬೆಸ್ಕಾಂನ ಸಿ.ಇ.ಸಿ ಎನ್.ಶ್ರೀನಿವಾಸ್, ಎಸ್.ಓಗಳಾದ ಮಲ್ಲಯ್ಯ, ಶ್ರೀನಾಥ್, ಎಂ.ಸಿ.ರಾಜ್ಯ ಸಮಿತಿ ಸದಸ್ಯ ಟಿ.ಎ.ಚಂದ್ರಪ್ಪ, ಗುತ್ತಿಗೆದಾರರ ಸಂಘದ ರಮೇಶ್, ಯಳಚಪ್ಪ, ದ್ವಾರಕನಾಥ್, ಇನ್ನಿತರರು ಉಪಸ್ಥಿತರಿದ್ದರು. ಖರ್ಗೆಯವರು ಸ್ವಾಗತಿಸಿ ನಿರೂಪಿಸಿದರು.

ಇದನ್ನೂ ಓದಿ: ಕೋಲಾರ ಜಿಲ್ಲೆಯ ಆರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ: ಅಭ್ಯರ್ಥಿಗಳಲ್ಲಿ ಗರಿಗೆದರಿದ ಉತ್ಸಾಹ, ಬೆಂಬಲಿಗರ ಹರ್ಷ

Leave a Reply

Your email address will not be published. Required fields are marked *

You missed

error: Content is protected !!