ಕೋಲಾರ ತಾಲೂಕಿನ ಶಾಪೂರು ಗ್ರಾಮ ಪಂಚಾತಿಯಲ್ಲಿನ ಆಡಳಿತ ವ್ಯವಸ್ಥೆಯನ್ನು ಖಂಡಿಸಿ, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ವಂದಿಸುವಂತೆ ವಿವಿಧ ಗ್ರಾಮಗಳ ಸಾರ್ವಜನಿಕರು ನೇತೃತ್ವದಲ್ಲಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಹೊಲ್ಲಂಬಳ್ಳಿ ಗ್ರಾಮದ ವೆಂಕಟೇಶಪ್ಪ ಮಾತನಾಡಿ, “ಶಾಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಇದರ ಬಗ್ಗೆ ತನಿಖೆಯಾಗಬೇಕು. ಪಂಚಾಯತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತ್ತು ಅವರ ಸಂಬಂಧಿಕರಿಗೆ ಕೆಲಸಗಳನ್ನು ಬಹುಬೇಗನೆ ಮಾಡಿಕೊಡುತ್ತಾರೆ, ಆದರೆ ಸಾಮಾನ್ಯ ಜನರನ್ನು ತಿಂಗಳಾನುಘಟ್ಟಲೇ ಅಲೆಯುವಂತೆ ಮಾಡಿತ್ತಾರೆ. ಇದರ ಬಗ್ಗೆ ಸಾಕಷ್ಟು ಬಾರಿ ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ನಹಳ್ಳಿ ಗ್ರಾಮದ ಅಂಜಿನಮ್ಮ ಮಾತನಾಡಿ, “ರೈತರು ಮತ್ತು ಸಾರ್ವಜನಿಕರು ಪ್ಯಾಕೇಜ್ ಕೆಲಸಗಳು, ಶೆಡ್‌ಗಳು, ನಿರ್ಮಾಣ ಸೇರಿದಂತೆ ಇತರೆ ವೈಯುಕ್ತಿಕ ಕೆಲಸಗಳನ್ನು ಮಾಡಿಸಲು ಸುಮಾರು ವರ್ಷಗಳು ಬೇಕಾಗಿದೆ. ಕೂಲಿ ಕಾರ್ಮಿಕರು ಮಾಡಿದ ಕೆಲಸಗಳಿಗೆ ಎನ್.ಎಂ.ಆರ್ ಸಹ ಕೊಡುತ್ತಿಲ್ಲ. ಆದರೆ ಯಂತ್ರಗಳಲ್ಲಿ ಮಾಡಿಸಿದ ಕೆಲಸಗಳಿಗೆ ಬಿಲ್ಲುಗಳು ಮಾಡುತ್ತಿದ್ದಾರೆ. ಪಂಚಾಯತಿ ವತಿಯಿಂದ ನಡೆದಿರುವ ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿ ತುಂಬಾ ಕಳಪೆಯಾಗಿದೆ. ಎಲ್ಲಾ ಕಾಮಗಾರಿಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು ಅವುಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕರು ಮಾಡಿರುವ ಎಲ್ಲಾ ವೈಯುಕ್ತಿಕ ಕಾಮಗಾರಿಗಳಿಗೆ ಈ ಕೂಡಲೇ ಬಿಲ್ಲುಗಳನ್ನು ಪಾವತಿ ಮಾಡಬೇಕು. ಪಂಚಾಯಿತಿ ಸದಸ್ಯರು ಸಾರ್ವಜನಿಕರಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಈ ಕೂಡಲೇ ತಾಪಂ ಇಒ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಪೂರು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಾದ ವೆಂಕಟರಾಮಪ್ಪ, ಶ್ರೀನಿವಾಸ್,ಚೌಡಪ್ಪ, ವಿಜಯಕೃಷ್ಣ, ನಾರಾಯಣರೆಡ್ಡಿ, ಮುನಿರಾಜು, ನಾರಾಯಣಸ್ವಾಮಿ, ಶ್ರೀನಾಥ್, ರಮೇಶ್ ಮುಂತಾದವರು ಇದ್ದರು.
ಇದನ್ನೂ ಓದಿ: ಕೋಲಾರ ಜಿಲ್ಲೆಯ ಆರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ: ಅಭ್ಯರ್ಥಿಗಳಲ್ಲಿ ಗರಿಗೆದರಿದ ಉತ್ಸಾಹ, ಬೆಂಬಲಿಗರ ಹರ್ಷ