PLACE YOUR AD HERE AT LOWEST PRICE
ರಾಜಕೀಯ ಉದ್ದೇಶಕ್ಕಾಗಿ ಓಂ ಶಕ್ತಿ ಮಾಲಾಧಾರಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಿಲ್ಲ, ದೇವರ ಮೇಲಿನ ಭಕ್ತಿಯಿಂದ ನಮ್ಮ ಫೌಂಡೇಶನ್ ವತಿಯಿಂದ ಕೈಲಾದ ಸಹಾಯವನ್ನು ಮಾಡುತ್ತಿದ್ದೇನೆ ಎಂದು ಓಂಶಕ್ತಿ ಫೌಂಡೇಶನ್ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.
ಕೋಲಾರ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಶುಕ್ರವಾರ ಓಂ ಶಕ್ತಿ ಮಾಲಾಧಾರೆಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಮಾತನಾಡಿದ ಅವರು ಚುನಾವಣೆ ಕೇವಲ ಎರಡು ದಿನ ಆವಾಗ ಬೇಕಾದರೆ ರಾಜಕೀಯ ಮಾಡೋಣ ಇವತ್ತು ರಾಜಕಾರಣ ಮಾಡುವುದಿಲ್ಲ ಯಾವುದೇ ಪಕ್ಷದವರು ಆದರೂ ಸರಿ ಕೋಲಾರ ವಿಧಾನಸಭಾ ಕ್ಷೇತ್ರದ ಜನತೆಗೆ ಈ ಸೇವೆಯನ್ನು ಒದಗಿಸುತ್ತಾ ಇದ್ದೇವೆ ಫೆಬ್ರವರಿ ೨೩ ರವರಗೆ ಪ್ರತಿದಿನ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದು ಇದರ ಸೇವೆಯನ್ನು ಕ್ಷೇತ್ರದ ಜನತೆ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಮಾಲಾಧಾರಿಗಳು ಓಂಶಕ್ತಿ ದೇವಾಲಯ ಸೇರಿದಂತೆ ಸುಮಾರು ಎಂಟು ಸ್ಥಳಗಳನ್ನು ನೋಡಬಹುದಾಗಿದೆ ಮಾಲಾದಾರಿಗಳು ನೆಮ್ಮದಿಯಾಗಿ ಜಾಗೃತಿಯಿಂದ ದರ್ಶನ ಮಾಡಿಕೊಂಡು ಬನ್ನಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಚಿನ್ನಾಪುರ ಗ್ರಾಪಂ ಸದಸ್ಯ ನಾಗರಾಜ್ ಮುಖಂಡರಾದ ಗೋವಿಂದರಾಜು, ರಮೇಶ್ ಮುಂತಾದವರು ಇದ್ದರು.