PLACE YOUR AD HERE AT LOWEST PRICE
ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಕೋಲಾರ ಜಿಲ್ಲಾ ಸಂಘದ ನೂತನ ಅಧ್ಯಕ್ಷರಾಗಿ ಸಂಪರಾಜ್ ೭೫ ಮತಗಳನ್ನು ಪಡೆದು ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ೪೮ ಮತ ಪಡೆದರು.
ಶುಕ್ರವಾರ ಕೋಲಾರ ನಗರದ ತಾಪಂ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸೇರಿದಂತೆ ವಿವಿಧ ಸ್ಥಾನಗಳಿಗೆ ಚುನಾವಣೆ ನಡೆಯಿತು. ಆದರೆ ಉಳಿದ ೬ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೃಷ್ಣಪ್ಪ ೬೮ ಮತಗಳನ್ನು ಪಡೆದು ಜಯಗಳಿಸಿದರೆ ಮಂಜುನಾಥ್ ಪ್ರಸಾದ್ ೫೫ ಮತಗಳನ್ನು ಪಡೆದು ಪರಾಭವಗೊಂಡರು. ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುರೇಶ್‌ಬಾಬು ೬೩ ಮತಗಳನ್ನು ಪಡೆದು ಜಯಗಳಿಸಿದರೆ ಸುರೇಶ್‌ಕುಮಾರ್ ೬೦ ಮತಗಳನ್ನು ಪಡೆದು ಸೋಲನುಭವಿಸಿದರು.
ಉಳಿದಂತೆ ೬ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿ, ಜಿಲ್ಲಾ ಪಿಡಿಒಗಳ ಸಂಘದ ಮಹಿಳಾ ಉಪಾಧ್ಯಕ್ಷರಾಗಿ ದೀಪಾ, ಖಜಾಂಚಿಯಾಗಿ ರಾಮಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ಮಧುಚಂದ್ರ, ಮೆಹರ್‌ತಾಜ್, ಕ್ರೀಡಾ ಕಾರ್ಯದರ್ಶಿಯಾಗಿ ಸೋಮಶೇಖರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಧುಮತಿ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿಡಿಒಗಳ ಸಂಘದ ನೂತನ ಜಿಲ್ಲಾಧ್ಯಕ್ಷ ಎನ್.ಸಂಪರಾಜ್, ಪಿಡಿಒಗಳು ಗ್ರಾಪಂಗಳಲ್ಲಿ ಸಾಕಷ್ಟು ಒತ್ತಡಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಗಳನ್ನು ಒತ್ತಡರಹಿತವಾಗಿಸುವುದೇ ನನ್ನ ಮೊದಲ ಗುರಿಯಾಗಿದ್ದು, ಎಲ್ಲರ ಸಲಹೆಗಳನ್ನು ಪಡೆದು ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವುದಾಗಿ ಭರವಸೆ ನೀಡಿದರು.
ನಾರಾಯಣರೆಡ್ಡಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ರಾಜ್ಯ ಕಾರ್ಯದರ್ಶಿ, ಮಾಜಿ ಜಿಲ್ಲಾಧ್ಯಕ್ಷ ಮಹೇಶ್‌ಕುಮಾರ್, ಮಾಜಿ ರಾಜ್ಯ ಪರಿಷತ್ ಸದಸ್ಯ ಕಾಶಿನಾಥ್, ಮಾಜಿ ರಾಜ್ಯ ಕಾರ್ಯದರ್ಶಿ ಸುರೇಶ್‌ಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಮಾಜಿ ಉಪಾಧ್ಯಕ್ಷ ಡಿ.ಆರ್.ಮಂಜುನಾಥ್ ಸೇರಿದಂತೆ ಪಿಡಿಒಗಳು ಉಪಸ್ಥಿತರಿದ್ದರು.