ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅಲ್ಲ ಅವರ ಲೀಡರ್ ರಾಹುಲ್ ಗಾಂಧಿನೇ ಬಂದರೂ ಭಯವಿಲ್ಲ, ಅವರನ್ನು ಹೀನಾಯವಾಗಿ ಸೋಲಿಸಿ ಮನೆಗೆ ಕಳುಹಿಸುತ್ತೇವೆ ಎಂದು ಸಂಸದ ಎಸ್.ಮುನಿಸ್ವಾಮಿ ಗುಡುಗಿದರು.
ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ನೇತೃತ್ವದಲ್ಲಿ ನಡೆದ ಬೃಹತ್ ಸೇರ್ಪಡೆ ಕಾರ್ಯಕ್ರಮದಲ್ಲಿ ಸಾವಿರಾರು ಜನರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸಲು ಶಪಥ ಮಾಡಿದ್ದಾರೆ, ಕೋಲಾರದಲ್ಲಿ ವರ್ತೂರು ಪ್ರಕಾಶ್ ಸೇರಿದಂತೆ ಜಿಲ್ಲೆಯಲ್ಲಿ ಕನಿಷ್ಟ 4 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಶತಸಿದ್ದ ಎಂದು ಸಂಸದ ಎಸ್.ಮುನಿಸ್ವಾಮಿ ಘೋಷಿಸಿದರು.
ಸಿದ್ದರಾಮಯ್ಯ ಮತ್ತವರ ಕಾಂಗ್ರೆಸ್ ಪಕ್ಷ ಕುರುಬರು, ಒಕ್ಕಲಿಗರು,ದಲಿತರು,ಅಲ್ಪಸಂಖ್ಯಾತರ ವಿರೋಧಿಯಾಗಿದೆ, ಇವರೆಲ್ಲರೂ ಸಿದ್ದರಾಮಯ್ಯ ಕೋಲಾರಕ್ಕೆ ಬರಲಿ ಎಂದು ಕಾಯುತ್ತಿದ್ದಾರೆ, ಜನರೊಂದಿಗೆ ಮಿಳಿತವಾಗಿರುವ ವರ್ತೂರು ಪ್ರಕಾಶ್ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕಲ್ಲು,ಮಣ್ಣು, ಹಾಲು,ಮೊಸರಿನಲ್ಲೂ ಜನರನ್ನು ವಂಚಿಸಿದ್ದಾರೆ, ಅವರ ಅಧ್ಯಕ್ಷತೆಯ ಕೋಲಾರ ಹಾಲು ಒಕ್ಕೂಟದಲ್ಲಿ ಅವರ ಮನೆಯ ಮೂರು ಕಾರುಗಳಿಗೆ ಡೀಸೆಲ್ ಹಾಕಿಸ್ತಾರೆ, ಈ ಹಣ ರೈತರದ್ದು, ಈ ವಂಚನೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ವಕ್ಕಲೇರಿ ಹೋಬಳಿಯ ಜನತೆ ಬುದ್ದಿವಂತರು, ಈ ಕ್ಷೇತ್ರದಲ್ಲಿ ಎರಡು ಚುನಾವಣೆಯಲ್ಲಿ ನನಗೆ ಲೀಡ್ ನೀಡಿದ್ದಾರೆ, ಗ್ರಾ.ಪಂ ಸದಸ್ಯ ಮಂಜುನಾಥ್, ಮುಖಂಡರಾದ ಅಬ್ಬಣ್ಣ, ಶ್ರೀಪತಿ, ಪ್ರಕಾಶ್,ನಾರಾಯಣಗೌಡ, ಎಲ್ಲರೂ ಇಂದು ಸೇರ್ಪಡೆಯಾಗುತ್ತಿದ್ದು, ಬಿಜೆಪಿ ಕಟ್ಟುವ ಕೆಲಸ ಮಾಡಿ ಎಂದು ಕರೆ ನೀಡಿದರು.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುವುದಾಗಿ ಪುನರುಚ್ಚರಿಸಿದ ಅವರು, ಗೆದ್ದ ಶಾಸಕರು ಜನರು,ಗ್ರಾಮಗಳನ್ನು ಮರೆತಿದ್ದಾರೆ, ಜನರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ, ಆದರೆ ನಾನು ಸುಮ್ಮನೇ ಕೂರುವುದಿಲ್ಲ, ನಿಮಗಾಗಿ ಕೆಲಸ ಮಾಡುತ್ತೇನೆ ಎಂದರು.
ಕುರಗಲ್‍ಗ್ರಾಮದ ಮುಖಂಡರಾದ ಮುನೇಶ್ವರಪ್ಪ, ನಾರಾಯಣಸ್ವಾಮಿ, ರಾಜಣ್ಣ, ಪ್ರಕಾಶ್, ಮುನಿನಾರಾಯಣಪ್ಪ, ಮುನೇಶ್, ವೆಂಕಟೇಶ್, ಪ್ರವೀಣ್, ರಾಮಪ್ಪ, ವಿಜಯಕುಮಾರ್, ಚಿಕ್ಕಮುನಿರಾಜು, ಆಂಜಿ ಮತ್ತಿತರರು ಬಿಜೆಪಿಗೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸಂಪಂಗಿ, ಮಂಜುನಾಥಗೌಡ, ಎಂ.ನಾರಾಯಣಸ್ವಾಮಿ, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರೇಗೌಡ, ಬಿಜೆಪಿ ಮುಖಂಡರಾದ ಬೆಗ್ಲಿ ಪ್ರಕಾಶ್, ಜಿಪಂ ಮಾಜಿ ಸದಸ್ಯರಾದ ಅರುಣ್ ಪ್ರಸಾದ್,ರೂಪಶ್ರೀ, ಬಂಕ್ ಮಂಜುನಾಥ್, ಸೂಲೂರು ಆಂಜಿನಪ್ಪ, ತಂಬಳ್ಳಿ ಮುನಿಯಪ್ಪ ಮತ್ತಿತರರು
ಉಪಸ್ಥಿತರಿದ್ದರು.
ಕೋಲಾರಮ್ಮ ದೇವಿಗೆ ಪೂಜೆ
ವಕ್ಕಲೇರಿ ಕಾರ್ಯಕ್ರಮಕ್ಕೂ ಮುನ್ನ ಸಂಸದ ಮುನಿಸ್ವಾಮಿ ಮತ್ತು ವರ್ತೂರು ಪ್ರಕಾಶ್ ಕೋಲಾರ ನಗರ ದೇವತೆ ಕೋಲಾರಮ್ಮ ದೇವೆ ದರ್ಶಿಸಿ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿಯಲ್ಲಿ ಗೊಂದಲದ ವಿಷಯ ಪ್ರಸ್ತಾಪವಾದಾಗ ವರ್ತೂರು ಪ್ರಕಾಶ್ ಎಂಪಿ ಮುನಿಸ್ವಾಮಿ ಅವರಿಗೆ ಮುತ್ತಿಟ್ಟು ನಾವೆಲ್ಲಾ ಒಂದೇ ಎಂದು ವರ್ತೂರು ಪ್ರಕಾಶ್ ಘೋಷಿಸಿದರು.
ಬಿಜೆಪಿಯಲ್ಲಿ ಯಾವುದೇ ಗೊಂದಗಳಿಲ್ಲ, ಮಾಲೂರಿನಲ್ಲಿ ಗೊಂದಲಗಳನ್ನು ಸೃಷ್ಠಿಸುತ್ತಿರುವವರು ಶಾಸಕ ಕೆ.ವೈ.ನಂಜೇಗೌಡರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡವರು ಏನೇನೋ ಮಾತನಾಡುತ್ತಿದ್ದಾರೆ ಎಂದು ಮಾಲೂರು ಕ್ಷೇತ್ರದ ಸಮಾಜ ಸೇವಕ ಹೂಡಿ ವಿಜಯ್‍ಕುಮಾರ್ ವಿರುದ್ಧ ಸಂಸದ ಎಸ್.ಮುನಿಸ್ವಾಮಿ ಗಂಭೀರ ಆರೋಪ ಮಾಡಿದರು.
ಬಿಜೆಪಿ ಪಕ್ಷಕ್ಕೆ ಜನರು ಮತ ಹಾಕಿ ಗೆಲ್ಲಿಸುತ್ತಾರೆ ಎನ್ನುವ ನಂಬಿಕೆಯಿಂದಾಗಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿದ್ದು, ಕೆಲಸ ಮಾಡುವವರನ್ನು ಗುರುತಿಸಲಾಗುತ್ತದೆ ಶೋ ಮ್ಯಾನ್‍ಗಳನ್ನು ಅಲ್ಲ ಎಂದು ಮತ್ತೊಮ್ಮೆ ಹೂಡಿ ವಿಜಯ್‍ಕುಮಾರ್ ಗೆ ತಿರುಗೇಟು ನೀಡಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಕೋಲಾರ, ಬಂಗಾರಪೇಟೆ, ಮಾಲೂರು, ಕೆಜಿಎಫ್‍ನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿ ಶಾಸಕರಾಗಲಿದ್ದಾರೆ. ನಮ್ಮದೇನಿದ್ದರೂ ಗಟ್ಟಿ ಬಂಧನ್, ಬಿಜೆಪಿ ಬಂಧನ್ ಅಷ್ಟೇ. ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಟೀಂಗಳು ಬೇರೆ ಇಲ್ಲ. ಎಲ್ಲರೂ ಒಂದೇ. ನಮ್ಮ ನಾಯಕರು ನರೇಂದ್ರ ಮೋದಿ, ಅವರ ಹಾದಿಯಲ್ಲೇ ಸಾಗುತ್ತೇವೆ ಎಂದರು.
ಸುದ್ದಿ ಓದಿ, ಹಂಚಿ, ಪ್ರೋತ್ಸಾಹಿಸಿ: