• Fri. Mar 29th, 2024

ಅರಣ್ಯ ಒತ್ತುವರಿ ತೆರವಿಗೆ ಮುಂದಾದ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನೂಕಾಟದಲ್ಲಿ ಮೂವರು ನೌಕರರಿಗೆ ಗಾಯ-ಪೊಲೀಸರಿಂದ ಪ್ರಕರಣ ದಾಖಲು

PLACE YOUR AD HERE AT LOWEST PRICE

ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲು ಮುಂದಾದ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಒತ್ತುವರಿದಾರರು ಹಲ್ಲೆಗೆ ಮುಂದಾಗಿದ್ದು, ಈ ವೇಳೆ ನಡೆದ ತಳ್ಳಾಟ-ನೂಕಾಟದಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಹಾಗೂ ಸ್ಥಳದಲ್ಲಿದ್ದ ಪೊಲೀಸರು ಹಲ್ಲೆಕೋರರನ್ನು ವಶಕ್ಕೆ ಪಡೆದಿರುವ ಘಟನೆ ಕೋಲಾರ ತಾಲ್ಲೂಕಿನ ಸೂಲೂರು,ನಾಗಲಾಪುರ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದಿದೆ.

ತಾಲೂಕಿನ ಸೂಲೂರು ಹಾಗೂ ನಾಗಲಾಪುರದ ಬಳಿಯ ರಾಜ್ಯ ಅರಣ್ಯ ಭೂಮಿಯನ್ನ ಐವತ್ತು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆಯ ವಶಕ್ಕೆ ಜಿಲ್ಲಾಡಳಿತ ನೀಡಿತ್ತು. ಅರಣ್ಯ ಇಲಾಖೆಯವರು ಈ ಪ್ರದೇಶದಲ್ಲಿ ಗಿಡ-ಮರಗಳನ್ನ ಬೆಳೆಸಿಕೊಂಡಿದ್ದರು. ಆದರೆ, ಕೆಲ ವರ್ಷಗಳಿಂದ ಅರಣ್ಯ ಇಲಾಖೆಯ ವಶದಲ್ಲಿರುವ ಭೂಮಿಯ ಮೇಲೆ ಕೆಲ ಬಲಾಢ್ಯರ ಕಣ್ಣು ಬಿದ್ದಿದೆ. ಈ ಹಿನ್ನಲೆಯಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹಲವು ಬಾರಿ ಎಚ್ಚರಿಕೆ ಹಾಗೂ ನೋಟೀಸ್ ಕೊಟ್ಟಿದ್ದರೂ ನಿರ್ಲಕ್ಷö್ಯ ಮಾಡಿದ್ದರು.

ಇತ್ತೀಚೆಗೆ ತಾಲೂಕಿನ ಸೂಲೂರಿನ ಸರ್ವೆ ನಂಬರ್ ೧೪೩ ಹಾಗೂ ನಾಗಲಾಪುರದ ಸರ್ವೆ ನಂಬರ್ ೫೫ ರಲ್ಲಿ ಅರಣ್ಯ ಇಲಾಖೆಯ ವಶದಲ್ಲಿರೋ ರಾಜ್ಯ ಅರಣ್ಯದಲ್ಲಿ ನಾಗರಾಜಪ್ಪ ಹಾಗೂ ಶಿವಕುಮಾರ್ ಹಾಗೂ ಇತರರು ೧೨ ಎಕರೆಯಷ್ಟು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು, ಇಲಾಖೆಯವರು ಬೆಳೆಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗಿಡ ಮರಗಳನ್ನ ಕಟಾವು ಮಾಡಿದ್ದರು. ಈ ಬಗ್ಗೆ ಅರಣ್ಯ ಇಲಾಖೆಯ ಅಧೀನ ಸಿಬ್ಬಂದಿ ಗ್ರಾಮದ ನಾಗರಾಜಪ್ಪ ಮತ್ತು ಶಿವಕುಮಾರ್ ಮೇಲೆ ಪ್ರಕರಣ ದಾಖಲಿಸಿ ಒತ್ತುವರಿ ತೆರವುಗೊಳಿಸುವಂತೆ ಎಚ್ಚರಿಕೆ ನೀಡಿದ್ದರು.

ಆದರೆ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷ÷್ಯದಿಂದ ನಾಗರಾಜಪ್ಪ ಮತ್ತು ಶಿವಕುಮಾರ್ ಒತ್ತುವರಿಯನ್ನು ತೆರವುಗೊಳಿಸದೆ ನಿರ್ಲಕ್ಷ÷್ಯವಹಿಸಿದ್ದರು. ಆದರೆ ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿ ಪೊಲೀಸರ ಬಂದೋಬಸ್ತ್ ತೆಗೆದುಕೊಂಡು ಇವತ್ತು ರಾಜ್ಯ ಅರಣ್ಯ ಭೂಮಿಯ ಗಡಿ ಗುರ್ತಿಸಿ, ಕಲ್ಲು ಕೂಚುಗಳನ್ನು ನೆಟ್ಟು ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾದರು.
ಈ ವೇಳೆ ಒತ್ತುವರಿದಾರರಾದ ನಾಗರಾಜಪ್ಪ ಮತ್ತು ಶಿವಕುಮಾರ್ ಕುಟುಂಬದವರು ಒತ್ತುವರಿ ತೆರವುಗೊಳಿಸಲು ಯತ್ನಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ದ ದಬ್ಬಾಳಿಕೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಕಾಂಪೌAಡ್ ನಿರ್ಮಿಸಲು ತಂದಿದ್ದ ಸಿಮೆಂಟ್ ಬ್ಲಾಕ್ ಗಳನ್ನು ಕಿತ್ತೆಸೆದು ಗಲಾಟೆ ಮಾಡಲು ಮುಂದಾದ ಒತ್ತುವರಿದಾರರು, ಅರಣ್ಯ ಭೂಮಿ ವಶಪಡಿಸಿಕೊಳ್ಳಲು ಮುಂದಾದ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲು ಮುಂದಾದರೂ. ಪೊಲೀಸರ ಬಿಗಿ ಬಂದೋಬಸ್ತ್‌ ನಲ್ಲಿ ಒತ್ತುವರಿ ನಡೆಯುತ್ತಿದ್ದರೂ, ಒತ್ತುವರಿದಾರರ ಕುಟುಂಬದ ಗುಂಪು ಏಕಾಏಕಿ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಮುಗಿಬಿದ್ದರು.

ಈ ವೇಳೆ ಎರಡು ಗುಂಪುಗಳ ನಡುವೆ ತಳ್ಳಾಟ-ನೂಕಾಟ ನಡೆಯಿತು. ತಳ್ಳಾಟ-ನೂಕಾಟದಲ್ಲಿ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಕೂಡಲೇ ಪೊಲೀಸರು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಒತ್ತುವರಿದಾರ ನಾಗರಾಜಪ್ಪ ಹಾಗೂ ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದರು.
ನಂತರ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರ ಬಂದೋಬಸ್ತಿನಲ್ಲಿ ಕಾಂಪೌAಡ್ ನಿರ್ಮಿಸಿ ಅರಣ್ಯ ಭೂಮಿ ವಶಕ್ಕೆ ಪಡೆದುಕೊಂಡರು.

ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ

 

Leave a Reply

Your email address will not be published. Required fields are marked *

You missed

error: Content is protected !!