• Fri. Apr 19th, 2024

ರೇಣುಕಾ ಎಲ್ಲಮ್ಮ ಬಳಗ ಯಾವುದೇ ಪಕ್ಷಕ್ಕೆ ಸೀಮಿತ ಅಲ್ಲ:  ಗೋವಿಂದರಾಜು.

PLACE YOUR AD HERE AT LOWEST PRICE

ರೇಣುಕಾಯಲ್ಲಮ್ಮ ಬಳಗ ಸಮುದಾಯದ ಒಳತಿಗಾಗಿ, ಅಭಿವೃದ್ಧಿಗಾಗಿ ಸ್ಥಾಪಿತವಾಗಿದೆಯೇ ಹೊರತು ರಾಜಕೀಯ ಉದ್ದೇಶದಿಂದ ಅಲ್ಲ, ನಮ್ಮ ಸಮುದಾಯದ ಜನರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಒಳಗೊಂಡಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು ತಿಳಿಸಿದರು.
ಬಂಗಾರಪೇಟೆ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತೊರೆದು ತಮ್ಮ ಹೊಟ್ಟೆಪಾಡಿಗಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಬೆಂಗನೂರು ರಾಜಪ್ಪ, ಕೀಲುಕೊಪ್ಪ, ಯಲ್ಲಪ್ಪ, ಹಾಗೂ ಸಿದ್ದಾರ್ಥ ಅವರು ವಿನಾಕಾರಣ ರೇಣುಕಾಯಲ್ಲಮ್ಮ ಬಳಗ ಜೆಡಿಎಸ್ ಪಕ್ಷವನ್ನು ಬೆಂಬಲಿಸುವುದಾಗಿ, ಸ್ಥಳೀಯ ಶಾಸಕರಿಗೆ ಭಯ ಉಂಟಾಗಿರುವುದಾಗಿ,  ರಾಜಕೀಯವಾಗಿ ನಮ್ಮ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ನಿರಾಧಾರ ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ ಎಂದರು.
ಶಾಸಕರ ನೇತೃತ್ವದಲ್ಲಿ ಇತಿಹಾಸ ನಿರ್ಮಾಣ:
ಸ್ಥಳೀಯ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರು ಜಾತಿ,  ಮತ, ಭೇದಭಾವದ ತಾರತಮ್ಯ ಇಲ್ಲದೆ ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಎಲ್ಲರ ಶ್ರೇಯೋಭಿವೃದ್ಧಿಗೆ ದುಡಿಯುತ್ತಾರೆ. ಬಂಗಾರಪೇಟೆಯ ಸುಧೀರ್ಘ ರಾಜಕೀಯ ಇತಿಹಾಸವನ್ನು ಅವಲೋಕಿಸಿ ನೋಡಿದಾಗ ಶಾಸಕ ಎಸ್ ಎನ್ ನಾರಾಯಣಸ್ವಾಮಿಯವರ ನೇತೃತ್ವದಲ್ಲಿ ರೇಣುಕಾಯಲ್ಲಮ್ಮ ಬಳಗದ ಸಮುದಾಯದವರನ್ನು 8ಜನ ಗ್ರಾಮಪಂಚಾಯಿತಿ ಅಧ್ಯಕ್ಷರನ್ನಾಗಿ, ಪುರಸಭಾ ಉಪಾಧ್ಯಕ್ಷರನ್ನಾಗಿ, ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿ ಆಯ್ಕೆಯಾಗಿರುವುದು ಐತಿಹಾಸಿಕ ಮೈಲುಗಲ್ಲಾಗಿದೆ, ಇದನ್ನು ಒಳಗೊಂಡಂತೆ ನನ್ನನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ ಮಾಡಿ ಜಿಲ್ಲಾದ್ಯಂತ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಕೀರ್ತಿ ಶಾಸಕರಿಗೆ ಸಲ್ಲುತ್ತದೆ ಎಂದರು.
ಸ್ಥಳೀಯ ಶಾಸಕರು ಕೊಟ್ಟ ಮಾತಿನಂತೆ ನಡೆದುಕೊಳ್ಳುವವರಾಗಿದ್ದು ಈ ಹಿಂದೆ 20 ಗುಂಟೆ ಸ್ಥಳ ನೀಡುವ ಭರವಸೆ ನೀಡಿದ್ದರು, ಅದಕ್ಕೆ ಪೂರಕ ಎಂಬಂತೆ ದೇಶಹಳ್ಳಿ ಬಳಿಯ ಸರ್ವೆ ನಂಬರ್ 15ರಲ್ಲಿ 20 ಗುಂಟೆ ಸ್ಥಳವನ್ನು ರೇಣುಕಾಯಲ್ಲಮ್ಮ ಬಳಗ ಸೇವಾ ಟ್ರಸ್ಟ್ ಗೆ ವಿನಿಯೋಗಿಸಲಾಗಿದ್ದು ಕಲ್ಯಾಣ ಮಂಟಪವನ್ನು ಆದಷ್ಟು ಬೇಗ  ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಮುದಾಯದ ಮುಖಂಡ ರಾಮಚಂದ್ರಪ್ಪ ಹಾಗೂ ಶಾಸಕರ ನಡುವೆ ಯಾವುದೇ ವೈಮನಸ್ಸು ಇಲ್ಲ,  ರಾಮಚಂದ್ರಪ್ಪನವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎಂದರು.
ರೇಣುಕಾ ಯಲ್ಲಮ್ಮ ಬಳಗ ಮಾರಾಟಕ್ಕಿಲ್ಲ:
ಕಾಂಗ್ರೆಸ್ ಮುಖಂಡ ಹ,ನಾ, ಹರೀಶ್ ಮಾತನಾಡಿ ರೇಣುಕಾಯಲ್ಲಮ್ಮ ಬಳಗದ ಸಮುದಾಯ ಯಾವುದೇ ರಾಜಕೀಯ ಪಕ್ಷಕ್ಕೆ ಮಾರಾಟಕ್ಕಿಲ್ಲ 40ಸಾವಿರ  ಜನಸಂಖ್ಯೆಯನ್ನು ಹೊಂದಿದ್ದು ಎಲ್ಲಾ ರಾಜಕೀಯ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಮ್ಮ ಸಮುದಾಯವನ್ನು ಭೋವಿ ಸಮುದಾಯದ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಲ್ಲೇಶ್ ಬಾಬುರವರಿಗೆ ಅಡಮಾನವಿಟ್ಟಿಲ್ಲ.
ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರಿದಬೆಂಗನೂರು ರಾಜಪ್ಪ, ಸಿದ್ದಾರ್ಥ್, ಯಲ್ಲಪ್ಪನವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದು ರಾಜಕೀಯವಾಗಿ, ಆರ್ಥಿಕವಾಗಿ, ಸಬಲರಾಗಿ ಈಗ ಪಕ್ಷ ತೊರೆದು ಮಲ್ಲೇಶ್ ಬಾಬು ಪರ ಬ್ಯಾಟ್ ಬೀಸುತ್ತಿದ್ದಾರೆ.
ಬೆಂಗನೂರು ರಾಜಪ್ಪ ನವರು ಶಾಸಕ ಎಸ್ಎನ್ ನಾರಾಯಣಸ್ವಾಮಿಯವರಿಂದ ಅನೇಕ ಸೌಲಭ್ಯಗಳನ್ನು ಪಡೆದುಕೊಂಡು ದ್ರೋಹ ಮಾಡಿದ್ದಾರೆ. ಉಂಡ ಮನೆಗೆ ಕನ್ನ ಹೊಡೆದಂತೆ ಪಕ್ಷದ್ರೋಹ ಮಾಡಿದ್ದಾರೆ ಇಂದು ನಮಗೆ ಮಾಡಿದ ದ್ರೋಹ ಮುಂದೆ ಮಲ್ಲೇಶ್ ಬಾಬುರವರಿಗೂ ಮಾಡಲಿದ್ದಾರೆ ಎಂದರು.
ರೈತ ಮುಖಂಡ ಮರಗಳ್ ಶ್ರೀನಿವಾಸ ರೇಣುಕಾಯಲ್ಲಮ್ಮ ಬಳಗದ ಮುಖಂಡರಾದ ವೆಂಕಟರಾಮಪ್ಪ , ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಯಲ್ಲಪ್ಪ, ಎಚ್ ಎಂ ರವಿ.  ಉಪಾಧ್ಯಕ್ಷರಾದ ಕುಪೇಂದ್ರ, ಪುರಸಭಾ ಉಪಾಧ್ಯಕ್ಷರಾದ ಶಾರದಾ ನಂದಕುಮಾರ್.  ಮುಖಂಡರಾದ ಲಕ್ಷ್ಮೀನಾರಾಯಣ, ಸುಬ್ರಮಣಿ, ಪ್ರಕಾಶ್, ಭೀಮಣ್ಣ, ಗೋವಿಂದರಾಜು, ನಾರಾಯಣಪ್ಪ, ದಯಾನಂದ, ಕಲಾವಿದ ಯಲ್ಲಪ್ಪ, ಶ್ರೀನಿವಾಸ್, ರಾಜಣ್ಣ, ನಾರಾಯಣಸ್ವಾಮಿ, ಡಿ,ಸಿ,ಮಂಜುನಾಥ್ ಇತರರು ಉಪಸ್ಥಿತರಿದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!