• Wed. Apr 24th, 2024

ಬೀರಮಾನಹಳ್ಳಿಯಲ್ಲಿ ಶುದ್ಧ ನೀರಿನ ಘಟಕಕ್ಕೆ ಆರು ತಿಂಗಳಿನಿಂದ ಬೀಗ ಕುಡಿಯುವ ನೀರಿಗೆ ಪರದಾಡುತ್ತಿರುವ ಗ್ರಾಮಸ್ಥರು-ಗಮನಹರಿಸದ ಪಂಚಾಯ್ತಿ

PLACE YOUR AD HERE AT LOWEST PRICE

ಕೋಲಾರ ತಾಲೂಕಿನ ಕಸಬಾ ಹೋಬಳಿ ತೊರದೇವಂಡಹಳ್ಳಿ ಪಂಚಾಯ್ತಿ ಬೀರಮಾನಹಳ್ಳಿಯಲ್ಲಿದ್ದ ಏಕೈಕ ಕುಡಿಯುವ ನೀರಿನ ಶುದ್ದೀಕರಣ ಘಟಕ ಕೆಟ್ಟು ಆರು ತಿಂಗಳಾಗಿದ್ದರೂ, ದುರಸ್ಥಿಪಡಿಸಿಲ್ಲ.

 

ಕುಡಿಯುವ ನೀರಿಗಾಗಿ ಇದೇ ಶುದ್ದೀಕರಣ ಘಟಕದ ಮೇಲೆ ಅವಲಂಬಿತವಾಗಿದ್ದ ಬೀರಮಾನಹಳ್ಳಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಶುದ್ದೀಕರಣ ಘಟಕ ಕೆಟ್ಟಿರುವ ಕುರಿತು ಗ್ರಾಮ ಪಂಚಾಯ್ತಿ ಪಿಡಿಒ ಸೋಮಶೇಖರ್‌ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

 

ಬೀರಮಾನಹಳ್ಳಿ ಪಂಚಾಯ್ತಿ ಪ್ರತಿನಿದಿ, ಬೀರಮಾನಹಳ್ಳಿಯ ನಿವಾಸಿ ಮಾನವ ಬಂಧುತ್ವ ವೇದಿಕೆ ಮುಖಂಡ ಬೀರಮಾನಹಳ್ಳಿ ಆಂಜಿ ಲಿಖಿತವಾಗಿ ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ದರೂ ದುರಸ್ಥಿಗೆ ಯಾವುದೇ ಕ್ರಮಕೈಗೊಂಡಿಲ್ಲ.

 

ಬೀರಮಾನಹಳ್ಳಿ ಗ್ರಾಮದಲ್ಲಿ ಸುಮಾರು ೧೫೦ ಮನೆಗಳಿದ್ದು,ಈ ಪೈಕಿ ೪೦ ಕ್ಕೂ ಹೆಚ್ಚು ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿದವು. ಗ್ರಾಮದ ಎಲ್ಲಾ ಕುಟುಂಬಗಳು ಶುದ್ದ ಕುಡಿಯುವ ನೀರಿಗಾಗಿ ಇದೇ ಘಟಕವನ್ನು ಅವಲಂಬಿಸಿದ್ದವು. ಆದರೆ, ಈ ಘಟಕ ಕೆಟ್ಟಾಗಿನಿಂದಲೂ ನೀರಿಗೆ ಪರದಾಡುತ್ತಿದ್ದಾರೆ. ಅಶುದ್ಧ ನೀರು ಕುಡಿದು ಗ್ರಾಮಸ್ಥರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ.

 

ಬೀರಮಾನಹಳ್ಳಿ ಗ್ರಾಮಸ್ಥರು ಈಗ ಶುದ್ದ ಕುಡಿಯುವ ನೀರಿಗಾಗಿ ಬಿಂದಿಗೆಗಳನ್ನು ತೆಗೆದುಕೊಂಡು ಸುಮಾರು ಒಂದೂವರೆ ಕಿ.ಮೀ ದೂರದಲ್ಲಿರುವ ವೀರಾಪುರ ಹಾಗೂ ಯಡಹಳ್ಳಿ ಗ್ರಾಮಗಳಿಗೆ ತೆರಳಬೇಕಾಗಿದೆ.

 

೨೦೧೬ ರಲ್ಲಿ ಶಾಸಕರಾಗಿದ್ದ ವರ್ತೂರು ಪ್ರಕಾಶ್ ಈ ಶುದ್ದ ನೀರಿನ ಘಟಕವನ್ನು ಉದ್ಘಾಟಿಸಿದ್ದರು. ಆದರೆ, ಈಗ ಆರು ತಿಂಗಳಿನಿಂದಲೂ ಕೆಟ್ಟಿದ್ದರೂ ಯಾವುದೇ ಜನಪ್ರತಿನಿದಿ ಇತ್ತ ತಿರುಗಿ ನೋಡುತ್ತಿಲ್ಲ. ಪಂಚಾಯ್ತಿ ಪಿಡಿಒ ಗಮನಹರಿಸುತ್ತಿಲ್ಲ.

 

ಜಿಲ್ಲಾ ಪಂಚಾಯ್ತಿ ಅಽಕಾರಿಗಳು ಕೂಡಲೇ ಇತ್ತ ಗಮನಹರಿಸಿ ಶುದ್ಧ ನೀರಿನ ಘಟಕವನ್ನು ದುರಸ್ಥಿಪಡಿಸಿ ಬೀರಮಾನಹಳ್ಳಿಯ ೧೫೦ ಕುಟುಂಬಗಳಿಗೆ ಶುದ್ದ ನೀರು ಸರಬರಾಜು ಆಗುವಂತೆ ಮಾಡಬೇಕಿದೆ. ಗ್ರಾಮಸ್ಥರ ಆರೋಗ್ಯವನ್ನು ಕಾಪಾಡಬೇಕಿದೆ.

ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ

ಇದನ್ನೂ ಓದಿ: ಜ.೯ ಸಿದ್ದರಾಮಯ್ಯ ಕೋಲಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವೆ – ಕೆ.ಎಚ್.ಮುನಿಯಪ್ಪ

 

 

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!