• Thu. Apr 25th, 2024

ಕ್ಷೇತ್ರದಲ್ಲಿ ಭೋವಿ ಅಭ್ಯರ್ಥಿ ಗೆದ್ದರೆ ಒಕ್ಕಲಿಗರು ದರ್ಬಾರ್  ಮಾಡುವರು:MLA SN

PLACE YOUR AD HERE AT LOWEST PRICE

 ಭೋವಿ ಸಮುದಾಯದ ಜೆಡಿಎಸ್‍ನ ಎಂ.ಮಲ್ಲೇಶಬಾಬು ಗೆದ್ದರೆ ಒಕ್ಕಲಿಗರು ಕ್ಷೇತ್ರದಲ್ಲಿ ದರ್ಬಾರ್ ಮಾಡುವರು ಅವರನ್ನು ಗೆಲ್ಲಿಸಬೇಡಿ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮ ಸಮಾಜದ ಮುಖಂಡರಲ್ಲಿ ಆಡಿಯೋ ಸಂಭಾಷಣೆ ನಡೆಸಿರುವುದು ಎಲ್ಲೆಡೆ ವೈರಲ್ ಆಗಿದ್ದು ಶಾಸಕರ ವರ್ತನೆಯನ್ನು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಜಿ.ಪ್ರಕಾಶ್
ಖಂಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ಒಕ್ಕಲಿಗರ ಮತಗಳಿಂದಲೇ ಎರಡು ಬಾರಿ ಶಾಸಕರಾಗಿರು ಎಸ್.ಎನ್.ನಾರಾಯಣಸ್ವಾಮಿ ಈಗ ಒಕ್ಕಲಿಗರ ಬಗ್ಗೆ ಹಗುರವಾಗಿ ಮಾತನಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಎಂ.ಮಲ್ಲೇಶಬಾಬು ಭೋವಿ ಜನಾಂಗದ ವ್ಯಕ್ತಿಯಾಗಿದ್ದು ಈಗಾಗಲೇ 40ವರ್ಷಗಳ ಕಾಲ ಕ್ಷೇತ್ರವನ್ನು ಭೋವಿ ಸಮುದಾಯದ ಶಾಸಕರು ಆಳಿದ್ದಾರೆ.
ಇನ್ನೂ ಅವರೇ ಆಳ ಬೇಕಾ, ಅವರು ಗೆದ್ದರೆ ನಮ್ಮ ಸಮುದಾಯದಕ್ಕೆ ತೊಂದರೆಯಾಗಲಿದೆ ಎಂದಿದ್ದಾರಲ್ಲದೆ ಜೆಡಿಎಸ್ ಇಲ್ಲಿ ಗೆದ್ದರೆ ಒಕ್ಕಲಿಗರು ಕ್ಷೇತ್ರದಲ್ಲಿ ದರ್ಬಾರ್ ಮಾಡುವರು ಅದಕ್ಕೆ ಅವಕಾಶ ನೀಡಬೇಡಿ. ಜೆಡಿಎಸ್‍ನ ಮಲ್ಲೇಶಬಾಬು ಗೆದ್ದರೆ ಬೆಂಗಳೂರಿನಲ್ಲಿ ವಾಸವಿರುವರು ನಿಮ್ಮ ಕೈಗೆ ಸಿಗಲ್ಲ ಎಂದಿದ್ದಾರೆ.
ಶಾಸಕರು ಒಕ್ಕಲಿಗರ ಮತ ಪಡೆದು ಶಾಸಕರಾದರೂ ಒಕ್ಕಲಿಗರು ನನಗೆ ಮತ ನೀಡಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿ, ಒಕ್ಕಲಿಗರ ವಿರೋಧ ವ್ಯಕ್ತವಾಗುತ್ತಿದ್ದಂತೆ ಒಕ್ಕಲಿಗರ ಕ್ಷೆಮೆ ಕೇಳಿ ಅವರಿಂದಲೇ ನಾನು ಶಾಸಕನಾಗಿರುವೆ ಎಂದು
ಹೇಳುವರು.
ಒಕ್ಕಲಿಗರಿಂದ ಆಯ್ಕೆಯಾಗಿ ಈಗ ಅವರನ್ನೇ ಗುರಿಯಾಗಿಟ್ಟುಕೊಂಡು ಸ್ವಾರ್ಥ ರಾಜಕಾರಣಕ್ಕಾಗಿ ಕೀಳು ಮಟ್ಟದ ರಾಜಕೀಯ ಮಾಡುವುದು ಸರಿಯಿಲ್ಲ. ಶಾಸಕರಿಗೆ ತಾಕತ್ತು ಇದ್ದರೆ ನನಗೆ ಒಕ್ಕಲಿಗರ ಮತ ಬೇಡ ಎಂದು ಬಹಿರಂಗವಾಗಿ ಹೇಳಲಿ ನೋಡೋಣವೆಂದು ಸವಾಲ್ ಹಾಕಿದ್ದಾರೆ.
ಒಕ್ಕಲಿಗರು ನಾವು ಯಾವುದೇ ಒಂದು ಪಕ್ಷದ ಪರವಿಲ ನಿಮ್ಮ ಬೇಲೆ ಬೇಯಿಸಿಕೊಳ್ಳಲು ಅನ್ಯೋನ್ಯವಾಗಿರುವ ಸಮುದಾಯಗಳನ್ನು ಹೊಡೆದು ರಾಜಕಾರಣ ಮಾಡಬೇಡಿ.
ನೀವು ಅಭಿವೃದ್ದಿ ಮಾಡಿದ್ದರೆ ಜನ ಕೈಹಿಡಿಯುವರು, ನಾಲ್ಕು ವರ್ಷಗಳಿಂದ ಮಾಡದ ಕೆಲಸವನ್ನು
ಶಾಸಕರು ಈಗ ಎಲ್ಲಾ ಸಮುದಾಯ ಮುಖಂಡರನ್ನು ಕರೆಸಿಕೊಂಡು ಮಾತನಾಡುವ ಡ್ರಾಮಾ ಮಾಡುತ್ತಿದ್ದಾರೆ. ಈ ಕೆಲಸವನ್ನು ಈ ಹಿಂದೆಯೇ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ನೀವು ಯಾರಿಗೆ ಬೆಂಬಲ ನೀಡಿದಿರಿ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ ಇಂತವರು ಪಕ್ಷದ ಸಿದ್ದಾಂತಗಳ ಬಗ್ಗೆ ಮಾತನಾಡುವುದು ಹಾಸ್ಯಸ್ಪದವಾಗಿದೆ. ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಶಾಸಕರು ಮಾಡುವುದನ್ನು ನಿಲ್ಲಿಸಬೇಕೆಂದು ಸಲಹೆ ನೀಡಿದ್ದಾರೆ.

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!