• Sat. Apr 20th, 2024

ಉರಟಿ ಅಗ್ರಹಾರ ಗ್ರಾಮಸ್ಥರು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಜನರ ನಂಬಿಕೆ ಉಳಿಸಿಕೊಳ್ಳುವ ರೀತಿ ಕೆಲಸ ಮಾಡುವೆ-ಶ್ರೀನಾಥ್

PLACE YOUR AD HERE AT LOWEST PRICE

ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿಯವರ ಮುಖ್ಯಮಂತ್ರಿಯಾಗಿದ್ದಾಗಿನ ಜನಪರ ಆಡಳಿತವನ್ನು ಮೆಚ್ಚಿ ಹಾಗೂ ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಅನೇಕರು ಕಾಂಗ್ರೆಸ್,ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದು, ಅವರ ನಂಬಿಕೆ ಉಳಿಸಿಕೊಳ್ಳುವೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ತಿಳಿಸಿದರು.

ನಗರದ ಸಿಎಂಆರ್ ಸೇವಾ ಕೇಂದ್ರದ ಕಛೇರಿಯಲ್ಲಿ ಗುರುವಾರ ತಾಲೂಕಿನ ಚನ್ನಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಉರಟಿಅಗ್ರಹಾರ ಗ್ರಾಮಸ್ಥರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡ ಸಂದರ್ಭದಲ್ಲಿ ಅವರು ಮಾತನಾಡಿ, ದೇಶದಲ್ಲಿ ಎಚ್.ಡಿ ದೇವೇಗೌಡ ಅವರು ಪ್ರಧಾನ ಮಂತ್ರಿಯಾಗಿ, ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜನಪರ ಆಡಳಿತ ನೀಡಿದ್ದು ಅನೇಕ ಜನೋಪಯೋಗಿ ಯೋಜನೆಗಳನ್ನು ಜನತೆ ಇನ್ನು ಮರೆತಿಲ್ಲ ಅದನ್ನು ನಂಬಿ ಮತ್ತೊಮ್ಮೆ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಡಬೇಕು ಎಂಬುದನ್ನು ಅರ್ಥೈಸಿಕೊಂಡು ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ ಇದರಿಂದ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದರು.
ಕೋಲಾರ ಜಿಲ್ಲಾ ಕೇಂದ್ರವಾಗಿದ್ದು ಬೆಂಗಳೂರಿಗೆ ಹತ್ತಿರದಲ್ಲಿ ಇದ್ದರೂ ಸಹ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಕ್ಷೇತ್ರದ ಜನತೆಯ ಸ್ವಾಭಿಮಾನ ಬದುಕಿಗೆ ಕಂಕಣಬದ್ದನಾಗಿ ದುಡಿಯಲು ನಿಮ್ಮ ಮುಂದೆ ಜೆಡಿಎಸ್ ಅಭ್ಯರ್ಥಿಯಾಗಿ ಕುಮಾರಣ್ಣ ಆಯ್ಕೆ ಮಾಡಿದ್ದಾರೆ ನಿಮ್ಮಗಳ ಗೌರವ ನೆಮ್ಮದಿ ಬದುಕಿಗೆ ನಿಮ್ಮ ಸಲಹೆ ಸೂಚನೆಗಳನ್ನು ಪಡೆದು ನಿಮ್ಮ ಸೇವೆ ಮಾಡುತ್ತೇನೆ ಕ್ಷೇತ್ರದಲ್ಲಿ ಸಿಎಂಆರ್ ಶ್ರೀನಾಥ್ ಗೆದ್ದರೆ ನೀವು ಗೆದ್ದ ರೀತಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಮಾಡುತ್ತೇನೆ ಒಗ್ಗಟ್ಟಿನಿಂದ ಗ್ರಾಮದ ಪ್ರತಿಯೊಬ್ಬರೂ ಸಹಕರಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ,ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸಿಕೊಂಡು ಮಾತನಾಡುತ್ತಿದ್ದು, ಇವರಿಂದ ರಾಜ್ಯ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಜನ ಈಗಾಗಲೇ ಮನಸ್ಸು ಮಾಡಿದ್ದಾರೆ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಅಧಿಕಾರ ಕೊಟ್ಟು ಕುಮಾರಣ್ಣ ನೇತೃತ್ವದಲ್ಲಿ ಪಂಚರತ್ನ ಯೋಜನೆಯನ್ನು ಜಾರಿಗೆ ತಂದು ಸಾಮಾನ್ಯ ವರ್ಗದ ಜನರಿಗೆ ಬೆಳಕಾಗುತ್ತಾರೆ ಎಂದು ತಿಳಿಸಿ, ಸಿಎಂಆರ್ ಶ್ರೀನಾಥ್ ಅವರನ್ನು ಗೆಲ್ಲಿಸುವ ಮೂಲಕ ಕುಮಾರಣ್ಣ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮುನಿರಾಜು, ಚಂದ್ರಣ್ಣ, ನಾಗರಾಜ್, ಸೋಮಣ್ಣ ಲೋಕೇಶ್ ಮರಿಯಪ್ಪ, ಬೀಚಗೊಂಡಹಳ್ಳಿ ರವಿ, ಅಶೋಕ್, ಉರಟ ಅಗ್ರಹಾರ ಗ್ರಾಮದ ಮುಖಂಡರಾದ ಶ್ರೀನಿವಾಸ್, ಮುನಿಯಪ್ಪ, ನಾಗರಾಜ್, ಅರುಣ್ ಕುಮಾರ್, ಆನಂದ್, ರವಿಕುಮಾರ್, ಸೋಮಶೇಖರ್ ಮುಂತಾದವರು ಇದ್ದರು.

Related Post

2024ರ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ – ಎಂ.ಎಲ್.ಸಿ. ಸುಧಾಮದಾಸ್
ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,

Leave a Reply

Your email address will not be published. Required fields are marked *

You missed

error: Content is protected !!