• Fri. Apr 19th, 2024

ರೈನ್ ಬೋ ಕಲರ್ ಕಿಡ್ಸ್ ಶಾಲೆಯಲ್ಲಿ ಪೋಷಕರಿಗಾಗಿ ಬೆಂಕಿಯಿಲ್ಲದೆ ಅಡುಗೆ ಮಾಡುವ ಸ್ಪರ್ಧೆ

PLACE YOUR AD HERE AT LOWEST PRICE

ನಾವು ತಿನ್ನುವ ಆಹಾರವು ಹೆಚ್ಚಿನ ಪೌಷ್ಠಿಕವಾಗಿರಬೇಕು ಹಾಗೂ ನಮ್ಮ ಆರೋಗ್ಯವನ್ನು ಹೆಚ್ಚಿಸುವಂತೆಯೂ ಇರಬೇಕು ಎಂದು ರೈನ್ ಬೋ ಕಲರ್ ಕಿಡ್ಸ್ ಶಾಲೆಯ ಮುಖ್ಯ ಶಿಕ್ಷಕಿ ಶಂಕರಮ್ಮ ದೇವರಾಜ್ ರವರು ತಿಳಿಸಿದರು.

ಮಾಲೂರು  ತಾಲ್ಲೂಕಿನ ಮಿಂಡಹಳ್ಳಿ ಗ್ರಾಮದ ರೈನ್ ಬೋ ಕಲರ್ ಕಿಡ್ಸ್ ಶಾಲೆಯಲ್ಲಿ ಪೋಷಕರಿಗಾಗಿ ಹಮ್ಮಿಕೊಂಡಿದ್ದ “ಬೆಂಕಿ ಇಲ್ಲದೆ ಅಡುಗೆ” ಮಾಡುವ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಆಹಾರವನ್ನು ಬೇಯಿಸಿಕೊಂಡೇ ತಿನ್ನುತ್ತಾರೆ, ಇಂತಹ ಸಂದರ್ಭದಲ್ಲಿ ಕೆಲವೊಂದು ಪೋಷಕಾಂಶಗಳು ನಮಗೆ ಸಿಗುವುದಿಲ್ಲ. ಆದರೆ, ಬೆಂಕಿ ಇಲ್ಲದೆ ತಯಾರಿ ಮಾಡುವ ತಿಂಡಿ ತಿನಿಸುಗಳಲ್ಲಿ ಕೆಲವು ಉತ್ತಮ ಪೋಷಕಾಂಶಗಳು ಸಿಗುತ್ತವೆ ಅಂತಹ ಕೆಲವೊಂದು ತಿಂಡಿಗಳಲ್ಲಿ ಪ್ರಮುಖವಾಗಿ ಕೋಸಂಬರಿ, ಅವಲಕ್ಕಿ, ಬೇಲ್‌ಪೂರಿ, ಹಣ್ಣುಗಳ ಮಿಶ್ರಣ ಇತ್ಯಾದಿಗಳು ಆರೋಗ್ಯಕ್ಕೆ ಪೂರಕವಾದ ಹೆಚ್ಚು ಪ್ರೋಟಿನ್‌ಯುಕ್ತವಾಗಿ ಇರುತ್ತದೆಂದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವು ಪೋಷಕರು ಈ ರೀತಿ ಬೆಂಕಿ ಇಲ್ಲದೆ ತರಕಾರಿ ಹಾಗೂ ನೀರಿನಲ್ಲಿ ನೆನೆಹಾಕಿದ ಕಾಳುಗಳನ್ನು ಬಳಸಿ ಕೆಲವು ತಿನಿಸುಗಳನ್ನು ತಯಾರು ಮಾಡಿದ್ದು ನೋಡುಗರ
ಮನಗೆದ್ದಿತಲ್ಲದೆ, ಪೌಷ್ಠಿಕ ಫಲಹಾರಗಳ ಬಗ್ಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ರಾಮಕೃಷ್ಣಪ್ಪ, ಮುಖ್ಯಶಿಕ್ಷಕಿ ಶಂಕರಮ್ಮ ದೇವರಾಜ್, ಸಹ ಶಿಕ್ಷಕಿಯರಾದ ಸುಜಾತ, ಕವಿತಾ, ನೇತ್ರಾ, ಸಹಾಯಕಿ ಭಾಗ್ಯ, ಪೋಷಕರಾದ ಶೋಭ, ರೂಪಶೇಖರ್, ನಾಗವೇಣಿ, ರೂಪ, ಪಲ್ಲವಿ, ನಾಗವೇಣಿ.ಕೆ, ಶಿಲ್ಪ, ರಾಧಿಕ, ಭವ್ಯ, ಭೂಮಿಕ, ಹಾಗೂ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

 

ಇದನ್ನೂ ಓದಿ : ಮಕ್ಕಳ ಸದೃಡತೆಗೆ ದೈಹಿಕ ಶಿಕ್ಷಣ ಅತ್ಯಗತ್ಯ, ಶಿಕ್ಷಕರು ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು – ಸಂಸದ ಮುನಿಸ್ವಾಮಿ ಕರೆ

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!