PLACE YOUR AD HERE AT LOWEST PRICE
ಕರಡು ಮತದಾರರ ಪಟ್ಟಿಯಲ್ಲಿರುವ ತಮ್ಮ ಹೆಸರುಗಳನ್ನು ಪರಿಶೀಲಿಸಿ ಹೆಸರುಗಳ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ಗುರುವಾರ ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ೧-೧-೨೦೨೩ರ ಅರ್ಹತಾ ದಿನಾಂಕಕ್ಕೆ ಒಳಪಟ್ಟಂತೆ ಭಾವಚಿತ್ರವುಳ್ಳ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೩ರ ಕಾರ್ಯಕ್ರಮದ ಕುರಿತು ಮತದಾರರ ಪಟ್ಟಿಗಳ ಅಚಿತಿಮ ಪ್ರಕಟಣೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೨೩ರ ಸಾರ್ವತ್ರಿಕ ಚುನಾವಣೆಯ ಸಂಬಂಧದಲ್ಲಿ ಅರ್ಹ ಮತದಾರರುಗಳು ಮತದಾರರ ಪಟ್ಟಿಗೆ ಅವರ ಹೆಸರನ್ನು ಚುನಾವಣಾ ಆಯೋಗವು ನಿಗಧಿ ಪಡಿಸುವ ದಿನಾಂಕದ ವರೆಗೆ ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ರಾಜ್ಯ ಇವರ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಸ್ವಯಂ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ಮತದಾರರ ಪಟ್ಟಿಯ ಪರಿಷ್ಕರಣೆ ಬಗ್ಗೆ ಗೊಂದಲಗಳು ಹಾಗೂ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಆನ್‌ಲೈನ್ ಮತದಾರರ ಹೆಲ್ಪ್ಲೈನ್ ಆಪ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಚುನಾವಣಾ ಸಮಯದಲ್ಲಿ ಮತದಾರರ ವಿವರವನ್ನು ಪಡೆದುಕೊಂಡು ಬೇರೆ ರೀತಿಯ ವಂಚನೆಗಳನ್ನು ಮಾಡಬಹುದು ಆದ್ದರಿಂದ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಾಗೂ ಎಪಿಕ್ ಸಂಬಂಧಿತ ಮಾಹಿತಿಗಳನ್ನು ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳದಿರಲು ಸಾರ್ವಜನಿಕರಲ್ಲಿ ವಿನಂತಿಸಿದರು.
ಮೊದಲಿನAತೆ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ನೊಂದಾಯಿಸಲು ಜನವರಿ ೦೧ ರವರೆಗೂ ಕಾಯಬೇಕಾಗಿಲ್ಲ. ೧೭ ವರ್ಷ ಮೇಲ್ಪಟ್ಟ ಅರ್ಹ ಮತದಾರರು ಮುಂಗಡವಾಗಿ ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ೨೦೨೨ ಆಗಸ್ಟ್ ೦೧ ರಿಂದ ನವೀಕೃತ ಹಾಗೂ ಸರಳೀಕರಿಸಿದ ಅರ್ಜಿ ನಮೂನೆಗಳು, ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಹಾಗೂ ಇನ್ನಿತರ ತಿದ್ದುಪಡಿಗಳಿಗಾಗಿ ನಮೂನೆ ೮ ಲಭ್ಯವಿದ್ದು, ಮತದಾರರ ಪಟ್ಟಿಗೆ ಸ್ವಯಂ ಪ್ರೇರಿತರಾಗಿ ಆಧಾರ್ ಜೋಡಣೆ ಮಾಡಲು ಸಹ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಜನವರಿ ೦೧ ರ ಅರ್ಹತಾ ದಿನಾಂಕದ ಜೊತೆಗೆ ೦೧ ನೇ ಏಪ್ರಿಲ್, ೦೧ನೇ ಜುಲೈ ಮತ್ತು ಅಕ್ಟೋಬರ್ ೦೧ ರಂದು ಸಹ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಚುನಾವಣೆ ಸಂದರ್ಭಗಳಲ್ಲಿ ಎಪಿಕ್ ಕಾರ್ಡ್ ಬದಲಿಗೆ ೧೧ ಅಧಿಕೃತ ಸರ್ಕಾರಿ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತ ಚಲಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದಾಗಿಯೂ ಅರ್ಹ ಮತದಾರರೆಲ್ಲರೂ ಹೊಸ ನವೀಕೃತ ಪಿವಿಸಿ ಗುರುತಿನ ಚೀಟಿಯನ್ನು ಹೊಂದಲು ನಿಗಧಿತ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕಾಗಿದೆ ಮತ್ತು ಇ-ಎಪಿಕ್‌ನ್ನು ಡೌನ್‌ಲೋಡ್ ಮಾಡಿಕೊಂಡು ಅದನ್ನು ಸಹ ಮತದಾನದ ವೇಳೆ ಹಾಜರುಪಡಿಸಬಹುದಾಗಿದೆ. ಆಧಾರ್ ಲಿಂಕ್ ಜೋಡಣೆಯಲ್ಲಿ ಕೋಲಾರ ಜಿಲ್ಲೆಯು ರಾಜ್ಯದ ೧೦ ಅಗ್ರಗಣ್ಯ ಜಿಲ್ಲೆಗಳಲ್ಲಿ ಒಂದಾಗಿದ್ದು, ಶೇ. ೧೦೦ ರಷ್ಟು ಆಧಾರ್ ಜೋಡಣೆಯನ್ನು ನಿರೀಕ್ಷಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ ೧೨೩೦೦೦೩ ಅರ್ಹ ಮತದಾರರನ್ನು ನೊಂದಾಯಿಸಲಾಗಿದೆ. ಮತದಾರರ ನೋಂದಾವಣೆಯು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಚುನಾವಣೆ ವೇಳೆಗೆ ಈ ಅಂಕಿಅಂಶದಲ್ಲಿ ಶೇ. ೨ ರಿಂದ ೩ ರಷ್ಟು ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ೧೮ ರಿಂದ ೧೯ ವರ್ಷ ವಯಸ್ಸಿನ ಯುವ ಮತದಾರರು ಈಗಾಗಲೇ ೨೦೪೮೭ ಸೇರ್ಪಡೆಯಾಗಿದ್ದು, ಈ ಸಂಖ್ಯೆ ಚುನಾವಣೆ ವೇಳೆಗೆ ಶೇ. ೪ ರಷ್ಟು ಹೆಚ್ಚುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ೧೨೭೮೭ ವಿಶೇಷಚೇತನ ಮತದಾರರು ನೊಂದಾವಣೆಯಾಗಿದ್ದು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೀಡಿರುವ ಅಂಕಿಅಂಶದಂತೆ ಶೇ.೧೦೦ರಷ್ಟು ಅರ್ಹ ಮತದಾರರು ನೊಂದಾಯಿತವಾಗಿರುತ್ತಾರೆ. ಚುನಾವಣೆ ವೇಳೆಯಲ್ಲಿ ವಿಕಲಚೇತನರಿಗೆ ವಿಶೇಷ ಸೌಕರ್ಯಗಳನ್ನು (ಗಾಲಿಕುರ್ಚಿ, ಮಸೂರಗಳು ಇತ್ಯಾದಿ) ಕಲ್ಪಿಸಲಾಗುವುದು. ಇವಿಎಂಗಳಲ್ಲಿಯೂ ಸಹ ಬ್ರೆöÊಲ್ ಲಿಪಿಯಲ್ಲಿ ಸಂಖ್ಯೆಗಳನ್ನು ಮುದ್ರಿಸಲಾಗಿರುತ್ತದೆ ಎಂದು ತಿಳಿಸಿದರು.
ಕಳೆದ ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ೧೯೮೯೭೩ ಮತದಾರರು ನೊಂದಾಯಿಸಲಾಗಿರುತ್ತದೆ. ೨೦೨೨ರ ಜನವರಿ ೧ ರ ವೇಳೆಗೆ ೧೨೩೦೦೦೩ ಮತದಾರರನ್ನು ನೊಂದಾಯಿಸಲಾಗಿದೆ. ಕಳೆದ ಚುನಾವಣೆಗಿಂತ ಈ ಬಾರಿ ೩೧೦೦೦ ಯುವ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದು, ಜಿಲ್ಲೆಯಾದ್ಯಂತ ೧೫೯೦ ಬೂತ್‌ಗಳಲ್ಲಿ ಮತದಾನಕ್ಕೆ ಏರ್ಪಾಡು ಮಾಡಲಾಗುವುದು. ಈ ಚುನಾವಣೆಯಲ್ಲಿಯೂ ಸಹ ಸಖಿ ಬೂತ್‌ಗಳನ್ನು ಏರ್ಪಡಿಸಲಾಗುವುದು. ಜಿಲ್ಲಾದ್ಯಂತ ೧೨೭೦ ಸೈನಿಕ ಮತದಾರರಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಸಹ ಆನ್‌ಲೈನ್ ಮತದಾನವನ್ನು ಸೈನಿಕರಿಗೆ ಮಾತ್ರ ಕಲ್ಪಿಸಲಾಗಿದೆ. ಚುನಾವಣಾ ಕರ್ತವ್ಯದ ಮೇಲೆ ತಮ್ಮ ಕ್ಷೇತ್ರ ಬಿಟ್ಟು ಹೊರಗಿರುವ ಮತದಾರರಿಗೆ ಎಂದಿನAತೆ ಅಂಚೆ ಮತಪತ್ರಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮತದಾರರ ಪಟ್ಟಿಗಳ ವೀಕ್ಷಕರು ಹಾಗೂ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹಾದೇವನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಾದ ಯುಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿಗಳಾದ ಡಾ|| ಸ್ನೇಹಾ.ಸಿ.ವಿ, ಉಪ ವಿಭಾಗಾಧಿಕಾರಿಗಳಾದ ವೆಂಕಟಲಕ್ಷ್ಮಿ, ತಹಶೀಲ್ದಾರ್‌ಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪ್ರಮುಖ ರಾಜಕೀಯ ಪಕ್ಷದ ಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.