• Tue. Apr 23rd, 2024

PLACE YOUR AD HERE AT LOWEST PRICE

ಬಲಿಜ ಜನಾಂಗವನ್ನು ಪೂರ್ಣ ಪ್ರಮಾಣದಲ್ಲಿ 2 ಎ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಬಲಿಜ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಟಿ.ವೇಣುಗೋಪಾಲ್ ರವರ ನೇತೃತ್ವದಲ್ಲಿಇದೇ ತಿಂಗಳ 09 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಯೆಂದು ಜಿಲ್ಲಾ ಬಲಿಜ ನೌಕರರ ಸಂಘದ ಅಧ್ಯಕ್ಷ ಆರ್. ಪ್ರಸಾದ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಾ ಕರ್ನಾಟಕ ರಾಜ್ಯದಲ್ಲಿ ಬಲಿಜ ಸಮುದಾಯ 40 ಲಕ್ಷ ಕ್ಕೂ ಹೆಚ್ಚು ಇದ್ದು, ಜನಾಂಗವು ಸಣ್ಣ ಪುಟ್ಟ ವ್ಯಾಪಾರಗಳನ್ನು ಮಾಡಿಕೊಂಡು ಅತಿ ಹಿಂದುಳಿದಿದ್ದು, ಹಿಂದೆ ಜನಾಂಗವನ್ನು 2 ಎ ಮೀಸಲಾತಿ ವಿಭಾಗದಲ್ಲಿ ಸೇರಿಸಲಾಗಿತ್ತು. ಯಾವುದೇ ಆಯೋಗದ ಶಿಫಾರಸು ಇಲ್ಲದೆ ದಿನಾಂಕ:17/09/1994 ರಲ್ಲಿ 2 ಎ ನಲ್ಲಿದ್ದು ಜನಾಂಗವನ್ನು 3 ಎ ಪ್ರವರ್ಗದ ಮೀಸಲಾತಿಗೆ ಬದಲಾಯಿಸಿ, ಜನಾಂಗದ ಮೇಲೆ ಘೋರ ಪರಿಣಾಮ ಬೀರಿ ದುಃಸ್ಥಿತಿಗೆ ತಳ್ಳಿದೆಯೆಂದರು.

ಈ ಮೀಸಲಾತಿಯನ್ನು ವಿರೋಧಿಸಿ ಅನೇಕ ಹೋರಾಟಗಳನ್ನು ಮಾಡಿದ ಫಲವಾಗಿ ಜನಾಂಗಕ್ಕೆ ದಿನಾಂಕ:16/07/2011 ರಲ್ಲಿ ಶಿಕ್ಷಣಕ್ಕೆ ಮಾತ್ರ 2 ಎ ಪ್ರವರ್ಗಕ್ಕೆ ಸೇರಿಸಿರುತ್ತಾರೆ.
ನಂತರ ಅನೇಕ ಹೋರಾಟಗಳನ್ನು ನಡೆಸಿ, ವಿದ್ಯಾಭ್ಯಾಸಕ್ಕೆ ಅಲ್ಲದೆ, ಹಿಂದೆ ಇದ್ದ ಪೂರ್ಣಪ್ರಮಾಣದ ಮೀಸಲಾತಿಯನ್ನು ಇತರ ಎಲ್ಲಾ ಸೌಲಭ್ಯಗಳಿಗೆ ಪುನಃ 2 ಎ ಮೀಸಲಾತಿ ಮೂಲಕ ನೀಡಬೇಕೆಂದು ಅನೇಕ ಹೋರಾಟಗಳನ್ನು ನಡೆಸಿದರೂ ಸಹ ಯಾವುದೇ ರೀತಿಯ ಪ್ರಯೋಜನವಾಗಿರುವುದಿಲ್ಲವೆಂದು ಆರೋಪಿಸಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಸಮುದಾಯದ ಎಲ್ಲರೂ ಫ್ರೀಡಂ ಪಾರ್ಕ್ ಗೆ 10 ಗಂಟೆಗೆ ಹಾಜರಿರಬೇಕು.ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ಸು ಗೊಳಿಸುವಂತೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲೆಯಿಂದ ಸುಮಾರು ಹತ್ತು
ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದ್ದು, ಎಲ್ಲಾ ತಾಲ್ಲೂಕುಗಳಿಂದ ವಾಹನ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ.ಪ್ರತಿಭಟನೆ ದಿನ ಬೆಂಗಳೂರಿಗೆ ತೆರಳಲು ಕೋಲಾರ ದಿಂದ ಬೆಳ್ಳಿಗ್ಗೆ 8 ಗಂಟೆಗೆ ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ ಬಳಿಯಿಂದ ವಾಹನಗಳು ಹೊರಡಲಿದ್ದು,ಹೆಚ್ಚಿನ ಮಾಹಿತಿಗಾಗಿ ಸಮುದಾಯದ ಮುಖಂಡ ರಾಜೇಶ್ ರವರ ಮೊಬೈಲ್ ಸಂಖ್ಯೆ 9844797776 ನ್ನು ಸಂಪರ್ಕ ಮಾಡಲು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಸುರೇಶ್ ಕುಮಾರ್, ರಘುನಾಥ್, ಸಿ.ಟಿ.ಒ. ರಾಜೇಶ್,ಸಾಮಾ ಸುನೀಲ್ ಕುಮಾರ್, ರಜನಿ, ಸುರೇಶ್, ಮಹೇಶ್ ಬಾಬು ಮುಂತಾದವರು ಉಪಸ್ಥಿತರಿದ್ದರು

Related Post

ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್
ಬಲಗೈ ಸಮುದಾಯದ ಬಹುಸಂಖ್ಯಾತ ಚಿಕ್ಕತಾಳಿ ಸಮಾಜವನ್ನು ಕಾಂಗ್ರೆಸ್ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ : ಸಮುದಾಯ ಮುಖಂಡರ ಆರೋಪ
ಕೆ.ಹೆಚ್.ಮುನಿಯಪ್ಪ ಬಲಗೈಭಂಟ ಜಿಪಂ ಮಾಜಿ ಸದಸ್ಯ ಎಂ.ರಾಮಚ0ದ್ರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

Leave a Reply

Your email address will not be published. Required fields are marked *

You missed

error: Content is protected !!