• Thu. Apr 25th, 2024

ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಶ್ರೀರಾಮೋತ್ಸವ ಅಸ್ತ್ರ – ವರ್ತೂರು ಪ್ರಕಾಶ್ ಸಿದ್ಧತೆ

PLACE YOUR AD HERE AT LOWEST PRICE

  •  ಸಿದ್ದರಾಮಯ್ಯ ವಿರುದ್ಧ ೫೦ ಸಾವಿರ ಅಂತರದ ಗೆಲುವು ಶತಸಿದ್ಧ.
  • ವಿವಿಧ ಪಕ್ಷಗಳ ಮುಖಂಡರಿಂದ ನೆರವು ಸಿಗಲಿದೆ.
  • ಮಾರ್ಚ್‌ ನಲ್ಲಿ ೧ ಲಕ್ಷ ಜನರ ಸಮಾವೇಶಕ್ಕೆ ಅಮಿತ್‌ ಶಾ ಆಗಮನ.

 

ಕೋಲಾರ ನಗರಕ್ಕೆ ಸಿದ್ದರಾಮಯ್ಯಆಗಮಿಸುತ್ತಿರುವ ಜ.೯ ರಂದೇ ನಗರದಲ್ಲಿ ಶ್ರೀರಾಮೋತ್ಸವ ಮಾಡಿ ತಮ್ಮ ಬೆಂಬಲಿಗರ ತಾಕತ್ ಪ್ರದರ್ಶನ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ಹೇಳಿದರು.

ಇದೇ ತಿಂಗಳು ೯ ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಅವರ ಕೋಗಿಲ ಹಳ್ಳಿ ನಿವಾಸದ ಬಳಿ ಕಾರ್ಯಕರ್ತರ ಸಭೆ ಕರೆದು ಕಾರ್ಯಕರ್ತರ ಅನಿಸಿಕೆಗಳನ್ನು ಪಡೆದು ಅವರು ಮಾತನಾಡುತ್ತಿದ್ದರು.


ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಅಥವ ರಾಹುಲ್ ಗಾಂಧಿಯೇ ಸ್ಪರ್ಧೆ ಮಾಡಲಿ ನನ್ನ ಗೆಲುವಿನ ಅಂತರ ಐವತ್ತು ಸಾವಿರ ಶತಸಿದ್ದ, ಸಿದ್ದರಾಮಯ್ಯನವರು ಬಂದರೆ ಗೆಲುವಿನ ಅಂತರ ೧೦ ಸಾವಿರ ಮತಗಳು ಕಡಿಮೆಯಾಗ ಬಹುದು ಅಷ್ಟೇ ವಿನಹ ಬೇರೇನು ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರಕ್ಕೆ ಬಂದರೆ ಬೇರೆ ಬೇರೆ ಪಕ್ಷದ ನಾಯಕರು ನನಗೆ ಸಹಾಯ ಮಾಡುತ್ತಾರೆ ಆದ್ದರಿಂದ ನಮ್ಮ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಭಯಪಡದೆ ಗ್ರಾಮಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿದರು.

ನನಗೆ ಎರಡು ದಿನಗಳಿಂದ ಕೋಲಾರದ ಕಾಂಗ್ರೆಸ್ ನ ಪ್ರಮುಖ ಮುಖಂಡರೊಬ್ಬರು ನನ್ನ ಸಂಪರ್ಕದಲ್ಲಿ ಇದ್ದು, ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಬಂದರೆ ನಿನ್ನ ಗೆಲುವು ಗ್ಯಾರಂಟಿ ಅಂತ ಹೇಳಿದ್ದಾರೆ .ನಾಲ್ಕು ದಿನಗಳಿಂದ ಬೆಂಗಳೂರಿನಿಂದ ಕರೆಗಳು ಬರುತ್ತಿದ್ದು ನನಗೆ ಎಲ್ಲಾ ಪಕ್ಷದ ಮುಖಂಡರು ಕೋಲಾರಕ್ಕೆ ಬಂದು ನನ್ನನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆಂದು ತಿಳಿಸಿದರು.

ಕಾರ್ಯಕರ್ತರು ಒಪ್ಪಿದರೆ ಸೋಮವಾರದಂದು ಶ್ರೀರಾಮೋತ್ಸವ ಕಾರ್ಯಕ್ರಮ ಮಾಡಿ ಸಿದ್ದರಾಮಯ್ಯನವರಿಗೆ ನಮ್ಮ ತಾಕತ್ತು ಏನೆಂದು ತೋರಿಸೋಣ. ಕೋಲಾರದಲ್ಲಿ ಮುಸ್ಲಿಂ ಬಾಂಧವರು ಈ ಬಾರಿ ನನಗೆ ಮತ ಚಲಾವಣೆ ಮಾಡುತ್ತಾರೆ ಮುಸ್ಲಿಂ ಬಾಂಧವರು ನನಗೆ ಭರವಸೆ ಕೊಟ್ಟಿದ್ದಾರೆ ನಾವು ಈ ಬಾರಿ ಪಕ್ಷ ನೋಡದೆ ಅಭಿವೃದ್ಧಿ ಪರ ಮತ ಹಾಕುತ್ತೇವೆ ಎಂದು ಹೇಳಿದ್ದಾರೆಂದು ಹೇಳಿದರು.

ಮಾರ್ಚ್ ನಲ್ಲಿ ಒಂದು ಲಕ್ಷ ಕಾರ್ಯಕರ್ತರು ಸೇರಿ ಅದ್ದೂರಿ ಕಾರ್ಯಕ್ರಮ ಮಾಡಿ ಅಮಿತ್ ಷಾ ರವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸೋಣ. ನರೇಂದ್ರ ಮೋದಿ ಜಿ ರವರ ಅಭಿವೃದ್ಧಿ ಕೆಲಸಗಳು ಬಸವರಾಜ ರವರ ಜನಪ್ರಿಯ ಯೋಜನೆಗಳು ನಮ್ಮ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದು ವಿವರಿಸಿದರು.

ಬೆಗ್ಲಿ ಸೂರ್ಯ ಪ್ರಕಾಶ್. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಅರುಣ್ ಪ್ರಸಾದ್. ಬಂಕ್ ಮಂಜುನಾಥ್. ಮಾಜಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಸೂಲೂರು ಆಂಜನಪ್ಪ. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ. ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ. ಹಾಗೂ ಅನೇಕ ಬಿಜೆಪಿ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ಸುದ್ದಿ ಓದಿ, ಹಂಚಿ, ಪ್ರೋತ್ಸಾಹಿಸಿ:

 

ಇದನ್ನೂ ಓದಿ: ಶ್ರೀರೇಣುಕಾ ಯಲ್ಲಮ್ಮ ಬಳಗವನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಒತ್ತೆ ಇಡುವುದಿಲ್ಲ – ಜಿಲ್ಲಾಧ್ಯಕ್ಷ ಬಂಡೂರು ನಾರಾಯಣಸ್ವಾಮಿ ಘೋಷಣೆ

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!