• Fri. Mar 29th, 2024

ಬಂಗಾರಪೇಟೆಯ  ಶ್ರೀ ರೇಣುಕಾ ಯಲ್ಲಮ್ಮ ದೇವಿಯ 119  ನೇ ತಿಂಗಳ ಹುಣ್ಣಿಮೆ ಪೂಜೆ.

PLACE YOUR AD HERE AT LOWEST PRICE

 

ಬಂಗಾರಪೇಟೆಯ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ 119 ನೇ ತಿಂಗಳ ಹುಣ್ಣಿಮೆ ಪೂಜೆ ವಿಜೃಂಬಣೆಯಿಂದ ನಡೆಯಿತು.

ಬಂಗಾರಪೇಟೆಯ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಸೇವಾ ಟ್ರಸ್ಟ್   ಗೌತಮ್ ನಗರ್ ವತಿಯಿಂದ ಹಾಗೂ ಶ್ರೀಮತಿ ರೇಣುಕಾ ಶ್ರೀ ಎಚ್ ಆರ್ ಶ್ರೀನಿವಾಸ್ ಮಾಜಿ ಅಧ್ಯಕ್ಷರು ಹುಲಿಬೆಲೆ ಗ್ರಾಮ ಪಂಚಾಯತ್  , ಹಾಲಿ ಸದಸ್ಯರು ಹಾಗೂ ಭೂ ಮಂಜೂರಾತಿ ಸಮಿತಿ ನಾಮ ನಿರ್ದೇಶತ ಸದಸ್ಯರು  ಹುಣಸನಹಳ್ಳಿ  ಇವರ ಕುಟುಂಬದ ವತಿಯಿಂದ
ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ 119 ನೇ ತಿಂಗಳ ಹುಣ್ಣಿಮೆ ಪೂಜೆ ,ಅನ್ನದಾನ   ವನ್ನು ಅಯೊಜಿಸಿದ್ದು ಬಹಳ ವಿಜೃಂಬಣೆಯಿಂದ ನಡೆಯಿತು.

ಪೂಜಾ ಸೇವಾ ಕರ್ತರಾದ  ಎಚ್ ಆರ್ ಶ್ರೀನಿವಾಸ್ ರವರು ಮಾತನಾಡುತ್ತಾ ನಾವು ಭಕ್ತಿಯಿಂದ ತಾಯಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯಲ್ಲಿ ಬೇಡಿಕೊಂಡರೆ ನಮ್ಮ ಎಷ್ಟೋ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಲು  ಶಕ್ತಿ ನೀಡುತ್ತಾಳೆ.

ನಮ್ಮ ಎಷ್ಟೋ ಕಷ್ಟಗಳನ್ನು ಪರಿಹರಿಸಿರುವ ತಾಯಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಶಕ್ತಿ ಆಪಾರ ಎಂದು  ವಿಶೇಷ ಅಭಿಷೇಕ ,ವಿಶೇಷ ಅಲಂಕಾರ, ಮಹಾಮಂಗಳಾರತಿ  ಹಾಗೂ ಅನ್ನದಾನ ವಿನಿಯೋಗದ  ಪೂಜೆಯನ್ನು ಕುರಿತು ಟ್ರಸ್ಟ್ ನ  ಕಾರ್ಯವೈಖರಿ ಬಗ್ಗೆ ಶ್ಲಾಘನೆ ಮಾಡಿದರು.

ನಮ್ಮ ಎಲ್ಲಾ ಸಮಸ್ಯೆಗಳು ಸಹ ಖಂಡಿತ ಬಗೆ  ಹರಿಸಿಕೊಳ್ಳಲು  ಈ ತಾಯಿಯ ಸನ್ನಿದಿಗೆ ಬಂದರೆ ಪರಿಹಾರ ಸಿಗಲಿದೆ, ಸಮಸ್ತ  ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾಗಬೇಕೇಂದರು.


ಪೂಜಾ ಸೇವಾ ಕರ್ತರಾದ  ಶ್ರೀಮತಿ ರೇಣುಕಾ ಶ್ರೀ ಎಚ್ ಆರ್  ಶ್ರೀನಿವಾಸ್ ರವರನ್ನು ಟ್ರಸ್ಟ್ ವತಿಯಿಂದ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ    ಎಂ ನಾರಾಯಣ ಸ್ವಾಮಿ , ಮುಖಂಡರಾದ  ಎಂ ನಾರಾಯಣ, ಜೆ ಶ್ರೀನಿವಾಸ್, ಶಾಂತಿನಗರ ಕಿಟ್ಟಣ್ಣ , ಹುಣಸನಹಳ್ಳಿ ವೆಂಕಟೇಶ್, ಕಾರಹಳ್ಳಿ ಪ್ರತಾಪ್, ಸುಲಿಕುಂಟೆ ಮಂಜು,  ಕಿಶೋರ್ ಕುಮಾರ್, ಬೀಡಾ ಮಾಮು, ವಿವೇಕಾನಂದ ಬಿ  ಜಿ, ಉಪೇಂದ್ರ, ನಾರಾಯಣಸ್ವಾಮಿ ,ಎಂ ದಯಕರ್,  ಗಜೇಂದ್ರ ,  ಬಿಸಿ ಮಂಜು, ಕವಿ ವಿ ಲಕ್ಷ್ಮಯ್ಯ,  ಮುರಳಿ, ಚಲಪತಿ  ,ಅರ್ಛಕರಾದ ಶನ್ಮುಗನಾಥನ್, ಪಾರ್ವತಮ್ಮ , ಅಶೋಕ್, ಇತರರು ಪೂಜೆ, ಅನ್ನದಾನದಲ್ಲಿ  ಭಾಗವಹಿಸಿದರು.

Leave a Reply

Your email address will not be published. Required fields are marked *

You missed

error: Content is protected !!