• Fri. Apr 19th, 2024

ಸಿದ್ದರಾಮಯ್ಯನವರನ್ನು ಕೋಲಾರಕ್ಕೆ ಕರೆತಂದು ಬಲಿಕಾ ಬಕರಾ ಮಾಡಲು ರಮೇಶ್‌ಕುಮಾರ್, ಘಟಬಂಧನ್ ನಾಯಕರ ಪ್ರಯತ್ನ-ಸುಹೈಲ್‌ದಿಲ್‌ನವಾಜ್

PLACE YOUR AD HERE AT LOWEST PRICE

ಕೋಲಾರ ವಿಧಾನ ಸಭಾಕ್ಷೇತ್ರಕ್ಕೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಕರೆತಂದು ‘ಬಲಿಕಾ ಬಕರಾ’ ಮಾಡಲು ಕಾಂಗ್ರೆಸ್ ಪಕ್ಷದ ರಮೇಶ್‌ಕುಮಾರ್ ಸೇರಿದಂತೆ ಘಟಬಂಧನ್ ನಾಯಕರು ಹುನ್ನಾರ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಪಕ್ಷದ ಸಂಭಾವನೀಯ ಅಭ್ಯರ್ಥಿ ಸುಹೈಲ್ ದಿಲ್ ನವಾಜ್ ತಿಳಿಸಿದರು.

ನಗರ ಹೊರವಲಯದ ಖಾಸಗಿ ಹೋಟಲ್ ನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಶಾಸಕರುಗಳು ಮುಖಂಡರುಗಳು ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನರ ಬಳಿ ಹೋಗಲು ಮುಖ ಇಲ್ಲ, ಆದ್ದರಿಂದ ದೊಡ್ಡ ಮರದ ನೆರಳು ಅವರಿಗೆ ಬೇಕಾಗಿದ್ದು,ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಂಬ ಬೃಹತ್ ಮರ ಕರೆತಂದು ಅವರುಗಳ ಬೇಳೆ ಬೇಯಿಸಿ ಕೊಳ್ಳಲು ಘಟಬಂಧನ್‌ನ ಮುಖಂಡರು ಶತಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.

ಸಿದ್ದರಾಮಯ್ಯ ನವರು ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ನನ್ನ ಗೆಲುವಿಗೆ ತೊಂದರೆ ಇಲ್ಲ,ಸ್ಪರ್ಧೆ ಮಾಡಲು ಅಲ್ಪಸಂಖ್ಯಾತರ ವಿರೋಧ ಇದೆ. ಸಿದ್ದರಾಮಯ್ಯನವರಿಗೆ ಕೋಲಾರದಲ್ಲಿ ಸ್ಪರ್ಧೆ ಮಾಡಲು ಇಷ್ಟ ಇಲ್ಲದಿದ್ದರೂ ಬಲವಂತವಾಗಿ ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಸಂಸದರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪರನ್ನು ಸೋಲಿಸಿ ಬಿ.ಜೆ.ಪಿಯ ಮುನಿಸ್ವಾಮಿ ರವರನ್ನು ಗೆಲ್ಲಿಸಿದರು. ಈ ಬಾರಿ ಸಿದ್ದರಾಮಯ್ಯ ರವರನ್ನು ಬಲಿಕಾ ಬಕರಾ ಮಾಡಲು ಹೊರಟಿದ್ದಾರೆಂದು ಟೀಕಿಸಿದರು.

ದೆಹಲಿಯ ಮಾದರಿಯಲ್ಲಿ ಅರವಿಂದ್ ಕ್ರೇಜಿವಾಲ್‌ರ ಯೋಜನೆಗಳನ್ನು ಕ್ಷೇತ್ರದಲ್ಲಿ ತರಲು ಚಿಂತನೆ ನಡೆಸಿದ್ದು,ಈಗಾಗಲೇ ಪಕ್ಷದ ಯೋಜನೆಗಳನ್ನು ಕ್ಷೇತ್ರದ ಪ್ರತಿ ಮನೆ ಮನೆಗೆ ತಲುಪಿಸಲು ಪ್ರಚಾರ ಪ್ರಾರಂಭಿಸಲಾಗಿದೆಯೆಂದರು.
ಅಲ್ಪಸಂಖ್ಯಾತರ ಮತಗಳು ಎಂ.ಎಲ್.ಸಿ.ಅನಿಲ್ ಕುಮಾರ್ ಹಾಗೂ ನಿಸಾರ್ ಅಹ್ಮದ್ ಅವರ ಮನೆ ಮತಗಳಲ್ಲ, ಕನಿಷ್ಠ ೧೦೦ ಮತಗಳನ್ನು ಅವರ ಬೂತ್‌ನಲ್ಲಿ ಅನಿಲ್ ಕುಮಾರ್ ಹಾಕಿಸಿಲ್ಲವೆಂದು ಛೇಡಿಸಿದರು.

ನಮಗೆ ಜನ ಬೆಂಬಲ ಹೆಚ್ಚಿನ ರೀತಿಯಲ್ಲಿ ದೊರೆಯುತ್ತಿದ್ದು, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ತಾವು ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡವುದು ಖಚಿತ, ಜನರ ಆಶೀರ್ವಾದ ದಿಂದ ಗೆಲವು ಸಾಧಿಸುತ್ತೇನೆ.ಕಾಂಗ್ರೆಸ್ ಪಕ್ಷಕ್ಕೆ ಜನರು ಪಾಠ ಕಲಿಸುತ್ತಾರೆ ಎಂದರು.

ಚಿತ್ರಶೀರ್ಷಿಕೆ:(ಫೋಟೊ-೮ಕೋಲಾರ೪); ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಪಕ್ಷದ ಸಂಭಾವನೀಯ ಅಭ್ಯರ್ಥಿ ಸುಹೈಲ್ ದಿಲ್ ನವಾಜ್,

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!