PLACE YOUR AD HERE AT LOWEST PRICE
ಶಾಸಕಿ ಡಾ. ರೂಪಕಲಾ ಎಂ ಶಶಿಧರ್ ಕೆ.ಜಿ.ಎಫ್. ನಗರದ ವಾರ್ಡ್ ಸಂ. 21 ರಲ್ಲಿ ಬೂತ್ ಕಮಿಟಿಯ ಸಭೆ ನಡೆಸಿದರು.
ಮೊದಲಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಮುಖ ಮುಖಂಡರು ಬೂತ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುವವರೆ ಯಾವುದೇ ಒಂದು ಪಕ್ಷಕ್ಕೆ ಬೆನ್ನೆಲಬು ಎಂದು ತಿಳಿಸಿದರು.
ಶಾಸಕರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದು ಮುಖಂಡರು ಹಾಗೂ ಕಾರ್ಯಕರ್ತರು ಶಾಸಕರನ್ನು ಮತ್ತೊಮ್ಮೆ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.

ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಮಾತನಾಡಿ, ತಮ್ಮಲ್ಲೆರ ಆಶೀರ್ವಾದದಿಂದ ಶಾಸಕಳಾಗಿ ಆಯ್ಕೆಯಾಗಿದ್ದು ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಶಕ್ತಿ ಮೀರಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುತ್ತೇನೆ ಎಂದು ತಿಳಿಸಿದರು.
ಬೂತ್ ಕಮಿಟಿಯ ಸದಸ್ಯರೇ ಪಕ್ಷಕ್ಕೆ ಆಧಾರ ಸ್ಥಂಬಗಳು, ಪಕ್ಷಕ್ಕಾಗಿ ಹಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ ಅಂತಹವರೇ ನಿಜವಾದ ಕಾರ್ಯಕರ್ತರು ಎಂದು ತಿಳಿಸಿದರು.
ಬೂತ್ ಮಟ್ಟದಿಂದ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ದುಡಿಯಲು ಬೂತ್ ಕಮಿಟಿ ಸದಸ್ಯರಿಗೆ ಕರೆ ನೀಡಿದರು.

ಈ ವೇಳೆ ಕೆ.ಜಿ.ಎಫ್. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದಲೈಮುತ್ತು, ಮಾಜಿ ಕೆ.ಡಿ.ಎ. ಅಧ್ಯಕ್ಷರುಗಳಾದ ಸಂಪತ್‌ಕುಮಾರ್, ಜಯಪಾಲ್ ನಗರಸಭೆ ಸದಸ್ಯ ಪುಣ್ಯಮೂರ್ತಿ, ನಗರಸಭೆ ಉಪಾಧ್ಯಕ್ಷೆ ದೇವಿಗಣೇಶ್ ಮುಖಂಡರಾದ ವೆಂಕಟೇಶ್, ರಾಜಾ, ಅಶೋಕನ್, ಶ್ರೀನಿವಾಸನ್, ಕೆ ನಂದಕುಮಾರ್, ಶ್ರಿ ಕರುಣಾಕರನ್ ನಗರಸಭೆ ಸದಸ್ಯ ಗಜೇಂದ್ರ, ಅಝಗರ್ ಮೊದಲಾದವರು ಹಾಜರಿದ್ದರು.