• Mon. Sep 25th, 2023

ಗ್ರಾಮಾಂತರ ಭಕ್ತಾಧಿಗಳಿಗೆ 9 ಬಸ್‍ಗೆ ಚಾಲನೆ ನೀಡಿದ ಶಾಸಕಿ ಎಂ.ರೂಪಕಲಾ.

PLACE YOUR AD HERE AT LOWEST PRICE

ಕೆಜಿಎಫ್ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಓಂ ಶಕ್ತಿ ದೇವಾಲಯಕ್ಕೆ 8 ಹಾಗೂ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 1 ಒಟ್ಟು 9 ಬಸ್‍ಗಳಿಗೆ ಶಾಸಕಿ ಎಂ.ರೂಪಕಲಾ ಭಾನುವಾರ ಚಾಲನೆ ನೀಡಿ ಯಾತ್ರಿಗಳಿಗೆ ಶುಭ ಹಾರೈಸಿದರು.
ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಗ್ರಾಮಕ್ಕೆ 3, ಐಸಂದ್ರ ಮಿಟ್ಟೂರು ಗ್ರಾಮಕ್ಕೆ 2, ಕಾವೇರಹಳ್ಳಿ, ಬೀರನಕುಪ್ಪ,
ಪಾರಂಡಹಳ್ಳಿಗೆ ತಲಾ 1 ಬಸ್‍ಗಳನ್ನು ಓಂ ಶಕ್ತಿ ಮಾಲಾಧಾರೆಗಳಿಗೆ ಒಟ್ಟು 8 ಬಸ್ ಹಾಗೂ ಕಮ್ಮಸಂದ್ರ ಗ್ರಾಪಂಯ ಚೆನ್ನಪ್ಪಲ್ಲಿ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತಾಧಿಗಳಿಗೆ 1 ಬಸ್ ಉಚಿತವಾಗಿ ವ್ಯವಸ್ಥೆ ಮಾಡಿ ಆರ್ಥಿಕ ನೆರವು ನೀಡಿದರು.
ಕೊರೊನಾ ಹಿನ್ನಲೆ 2 ವರ್ಷಗಳಿಂದ ಬಡವ, ಶ್ರಮಿಕ, ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ವ್ಯಾಪರಗಳಿಲ್ಲ, ಸಾರಿಗೆ
ಇತರೆ ಸೌಲಭ್ಯ ವಿಲ್ಲದೆ ಭಕ್ತಾಧಿಗಳು ಪರದಾಡಿದ್ದರು, ಆಯಾ ವ್ಯಾಪ್ತಿಯ ಮುಖಂಡರ ಮನವಿಯಂತೆ ಭಕ್ತಾಧಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಿ ಊಟಕ್ಕೆ ಆರ್ಥಿಕ ನೆರವವು ನೀಡಲಾಗುತ್ತಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ಈ ಸಂದರ್ಭದಲ್ಲಿ ಸುಂದರಪಾಳ್ಯ ಗ್ರಾಪಂ ಅಧ್ಯಕ್ಷ ರಾಂ ಬಾಬು, ಟಿ.ಗೊಲ್ಲಹಳ್ಳಿ ಅಧ್ಯಕ್ಷೆ ಪವಿತ್ರಾ ಗೋಪಾಲ್, ಉಪಾಧ್ಯಕ್ಷ ಶ್ರೀರಾಮಪ್ಪ, ತಾಪಂ ಮಾಜಿ ಸದಸ್ಯ ಜಯರಾಮ ರೆಡ್ಡಿ, ವೆಂಕಟ್ರಾಮ್, ಸುವರ್ಣಹಳ್ಳಿ ಕೃಷ್ಣಮೂರ್ತಿ, ಮುಖಂಡರಾದ ನಾರಾಯಣಪ್ಪ, ಸುರೇಂದ್ರಗೌಡ, ಪ್ರಸಾದ್, ಸೀನಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!