PLACE YOUR AD HERE AT LOWEST PRICE
ರಾಜ್ಯದಲ್ಲಿ ೧೩ ಬಾರಿ ಬಜೆಟ್ ಮಂಡಿಸಿ, ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ, ಅಧಿಕಾರ ನಡೆಸಿದ ಸಿದ್ದರಾಮಯ್ಯ ಅವರಿಗೆ ಪ್ರತಿ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರವನ್ನು ಹುಡುಕುವ ಪರಿಸ್ಥಿತಿ ಬಂದಿದೆ ಎಂದು ಕೂಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಲೇವಡಿ ಮಾಡಿದರು.
ಕೋಲಾರದ ಜಯನಗರದಲ್ಲಿ ಭಾನುವಾರ ಓಂಶಕ್ತಿ ಫೌಂಡೇಶನ್ ವತಿಯಿಂದ ಮೇಲ್ ಮರವತ್ತೂರು ಓಂಶಕ್ತಿ ದೇವಸ್ಥಾನಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಿ ಮಾತನಾಡಿದ ಅವರು ರಾಜ್ಯದಲ್ಲಿ ಭಾಗ್ಯಗಳ ಸರದಾರನಾಗಿರುವ ಸಿದ್ದರಾಮಯ್ಯ ಅಭಿವೃದ್ಧಿ ಮಾಡಿದ್ದೇ ಆದರೆ ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರವನ್ನು ಬಿಟ್ಟು ಈ ಬಾರಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ವರ್ಧೆ ಮಾಡುವ ಪರಿಸ್ಥಿತಿ ಬರತ್ತಾ ಇರಲಿಲ್ಲ ಸಿದ್ದರಾಮಯ್ಯ ಆಯ್ಕೆಯಾದ ಪ್ರತಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದು ಮತದಾರರು ತಿರಸ್ಕರಿಸಿದ್ದಾರೆ ಅದಕ್ಕಾಗಿ ಈ ಬಾರಿ ಕೋಲಾರದಲ್ಲಿ ಸ್ವರ್ಧೆಗೆ ಮುಖ ಮಾಡಿದ್ದಾರೆ ಕೋಲಾರ ವಿಧಾನಸಭಾ ಕ್ಷೇತ್ರದ ಮತದಾರರು ಪ್ರಜ್ಞಾವಂತರು ಸಿದ್ದರಾಮಯ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.
ಕೋಲಾರ ಜಿಲ್ಲೆಯ ಕೆಲವು ಘಟಬಂಧನ್ ನಾಯಕರ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರನ್ನು ಕೋಲಾರದಲ್ಲಿ ಸ್ವರ್ಧೆಗೆ ಕರೆತರುತ್ತಾ ಇದ್ದು ಇದರ ಮೂಲಕ ಕಾಂಗ್ರೆಸ್ ಪಕ್ಷದ ಭವಿಷ್ಯದ ನಾಯಕರನ್ನು ರಾಜಕೀಯವಾಗಿ ತುಳಿಯುವ ಕೆಲಸವನ್ನು ಈ ಘಟಬಂಧನ್ ಮುಖಂಡರು ಮಾಡುತ್ತಾ ಇದ್ದು ಇಲ್ಲಿನ ಭಿನ್ನಮತದ ಕೂಗು ಬಿಜೆಪಿ ಪಕ್ಷಕ್ಕೆ ವರದಾನವಾಗುತ್ತದೆ.
ಓಂಶಕ್ತಿ ಫೌಂಡೇಶನ್ ವತಿಯಿಂದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೆ ಮೀರಿ ಪ್ರತಿನಿತ್ಯ ಒಂದಲ್ಲ ಒಂದು ಗ್ರಾಮದಿಂದ ಓಂಶಕ್ತಿ ದೇವಸ್ಥಾನಕ್ಕೆ ಬಸ್ ವ್ಯವಸ್ಥೆ ಮಾಡಲಾಗುತ್ತಾ ಇದ್ದು ಮಂದಿನ ತಿಂಗಳು ಫೆಬ್ರವರಿ ೩ ರವರಗೆ ನಿರಂತರವಾಗಿ ನಡೆಯಲಿದೆ ಕ್ಷೇತ್ರದ ಭಕ್ತಾದಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ನಾಮನಿರ್ದೇಶನ ಸದಸ್ಯರಾದ ಗೋವಿಂದು, ಶ್ರೀಗಂಧ ರಾಜೇಶ್, ಬಿಜೆಪಿ ಮುಖಂಡರಾದ ಸಾ.ಮಾ ಬಾಬು, ನಾಮಲ್ ಮಂಜು, ಹಾರೋಹಳ್ಳಿ ನಾಗರಾಜ್, ವಿನೋದ್, ಅಭಿಲಾಷ್, ಭರತ್, ಮುಂತಾದವರು ಇದ್ದರು.