• Fri. Apr 19th, 2024

ಬಿಇಎಂಎಲ್ ಜಮೀನು ಸರ್ವೆ ಮಾಡಿದ ಸಾರ್ವಜನಿಕ ಜಮೀನುಗಳ ನಿಗಮ.

PLACE YOUR AD HERE AT LOWEST PRICE

 ಬಿಇಎಂಎಲ್ ಸಂಸ್ಥೆಗೆ ಸೇರಿದ ಜಮೀನುಗಳನ್ನು ಪರಿಶೀಲನೆ ನಡೆಸಿದ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ವ್ಯವಸ್ಥಾಪಕ ಪಿ.ವಸಂತಕುಮಾರ.

ಕೆಜಿಎಫ್‌ನ  ಬಿಇಎಂಎಲ್ ಸಂಸ್ಥೆಗೆ ಸೇರಿದ ಜಮೀನುಗಳನ್ನು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ಪಿ..ವಸಂತಕುಮಾರ ನೇತೃತ್ವದಲ್ಲಿ ಬಿಮೆಲ್‌ನ  ಕಾಲೋನಿ ವಸಂತನಗರ ಅಜ್ಜಪಲ್ಲಿ ಸೇರಿದಂತೆ ವಿವಿದೆಡೆಗಳಿಗೆ ತೆರಳಿ ಪರಿಶೀಲನೆ ನಡೆಸಿ ಕಂದಾಯ ಅಧಿಕಾರಿಗಳಿಂದ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು .

ರಾಜ್ಯ ಸರ್ಕಾರ ಬಿಇಎಂಎಲ್ ಸಂಸ್ಥೆಗೆ ನೀಡಿದ್ದ ಜಮೀನಿನಲ್ಲಿ 967 ಎಕರೆ ಜಮೀನು ಬಳಕೆ ಮಾಡದಿದ್ದರಿಂದ ಮರಳಿ ರಾಜ್ಯ ಸರ್ಕಾರ ಸುಪರ್ಧಿಗೆ ಪಡೆದು ಕೈಗಾರಿಕಾ ಹಬ್ ನಿರ್ಮೀಸುವಂತೆ ಶಾಸಕಿ ರೂಪಕಲಾಶಶಿಧರ್ ವಿಧಾನಸಭೆ ಕಲಾಪದಲ್ಲಿ ಗಮನಸೇಳೆದಿದ್ದರು.

ಈ ಹಿನ್ನಲೆಯಲ್ಲಿ ಅಂದಿನ ಕೈಗಾರಿಕಾ ಸಚಿವರಾಗಿದ್ದ ಜಗಧೀಶ್‍ಶೆಟ್ಟರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಸಾವಿರಾರು ಸರ್ಕಾರಿ ಜಮೀನು ಲಭ್ಯವಿದೆ.

ಬೆಂಗಳೂರು ನಗರಕ್ಕೆ ಹತ್ತಿರವಿದೆ ಮತ್ತು ಚೆನೈ ಕಾರಿಡಾರ್ ರಸ್ತೆ ಕಾಮಗಾರಿ ಸಹ ಪ್ರಗತಿಯಲ್ಲಿ ಇರುವುದರಿಂದ ಈ ಭಾಗದಲ್ಲಿ ಕೈಗಾರಿಕಾ ಹಬ್ ನಿರ್ಮೀಸಬಹುದು ಎಂಬ ತೀರ್ಮಾನಕ್ಕೆ ಬರಲಾಗಿತ್ತು.

ರಾಜ್ಯ ಸರ್ಕಾರ ದೃಡ ನೀರ್ಧಾರ ತೆಗೆದುಕೊಂಡು ಬಿಇಎಂಎಲ್ ಸಂಸ್ಥೆಗೆ ನೀಡಿದ್ದ ಜಮೀನಿನಲ್ಲಿ ಬಳಕೆ ಮಾಡದ 967 ಎಕರೆ ಜಮೀನನ್ನು ವಾಪಸು ಪಡೆದು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವಶಕ್ಕೆ ತೆಗೆದುಕೊಂಡು ರಕ್ಷಣೆ ಮಾಡುವಂತೆ ಆದೇಶ ನೀಡಿದ ಹಿನ್ನಲೆಯಲ್ಲಿ ಅಧಿಕಾರಿಗಳ ತಂಡ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ಪಿ..ವಸಂತಕುಮಾರ ಬಿಇಎಂಎಲ್ ಸಂಸ್ಥೆಗೆ ಹಿಂದೆ ನೀಡಲಾಗಿದ್ದ ಜಮೀನಿನಲ್ಲಿ 967 ಎಕರೆ ಪ್ರದೇಶವನ್ನು ಬಳಕೆ ಮಾಡದೆ ನಿರುಪಯುಕ್ತವಾಗಿತ್ತು.

ಆ ಜಮೀನನ್ನು  ಮರಳಿ ರಾಜ್ಯ ಸರ್ಕಾರ ವಾಪಸು ಪಡೆದು ಕರ್ನಾಟಕ ಜಮೀನುಗಳ ನಿಗಮಕ್ಕೆ ಸರ್ಕಾರಿ ಆಸ್ಥಿಯನ್ನು ರಕ್ಷಣೆ ಮಾಡುವಂತೆ ಆದೇಶ ನೀಡಿದ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು.

ಮುಂದಿನ ದಿನಗಳಲ್ಲಿ 967 ಎಕರೆ ಪ್ರದೇಶವನ್ನು ಗುರುತಿಸಿ ಜಮೀನು ಹದ್ದುಬಸ್ತು ಕಾರ್ಯ ನಡೆಸಲಾಗುವುದು ಸರ್ಕಾರಿ ಜಮೀನುಗಳ ಒತ್ತುವರಿಗಳು ಇದ್ದರೆ ಗಮನಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗುವುದು ಎಂದು ಹೇಳಿದರು.

ಸರ್ಕಾರಿ ಜಮೀನುಗಳನ್ನು ಆಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ ನಮ್ಮ ಇಲಾಖೆಗೆ ದೂರು ನೀಡಬಹುದು ಅವುಗಳನ್ನು ಸಂಭಂದಿಸಿದವರಿಗೆ ಹಸ್ಥಾಂತರ ಮಾಡಿ ಪರಿಶೀಲನೆ ನಡೆಸಲಾಗುವುದು ಎಂದರು.ಈ ವೇಳೆ ಕರ್ನಾಟಕ ಜಮೀನುಗಳ ನಿಗಮದ ವ್ಯವಸ್ಥಾಪಕಿ ಶಾಬರಿನ್, ಕೋಲಾರ ಉಪವಿಭಾಗಧಿಕಾರಿ ವೆಂಕಟಲಕ್ಷ್ಮಿ, ತಹಶೀಲ್ದಾರ್ ಸುಜಾತ, ಕಂದಾಯ ಅಧಿಕಾರಿಗಳಾದ ರಘುರಾಮಸಿಂಗ್, ವಿನೀತ್  ಹಾಜರಿದ್ದರು.

 

 

 

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!