• Thu. Mar 28th, 2024

ಜನರ ಚಪ್ಪಾಳೆ, ಹರ್ಷೋದ್ಗಾರ, ಪಟಾಕಿ ಸಿಡಿತ, ಸಂಭ್ರಮಗಳ ಮಧ್ಯೆ ಕೋಲಾರದಿಂದಲೇ ಸ್ಪರ್ಧೆ ಸಿದ್ದರಾಮಯ್ಯ ಘೋಷಣೆ

PLACE YOUR AD HERE AT LOWEST PRICE

ಕೋಲಾರ ಜನರ ಚಪ್ಪಾಳೆ, ಹರ್ಷೋದ್ಗಾರ, ಪಟಾಕಿ ಸಿಡಿತ, ಸಂಭ್ರಮಗಳ ಮಧ್ಯೆ ಮುಂದಿನ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಕೋಲಾರ ನಗರದ ಜೂನಿಯರ್ ಕಾಲೇಜು ಮಿನಿ ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ತಮ್ಮ ಉಮೇದುವಾರಿಕೆ ಕೋಲಾರ ಕ್ಷೇತ್ರದಿಂದಲೇ ಎಂದು ಪ್ರಕಟಿಸಿದರು.

ಕೋಲಾರ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಪ್ರೀತಿ ಅಭಿಮಾನವನ್ನು ತಿರಸ್ಕರಿಸಲು ಸಾಧ್ಯವಿಲ್ಲ, ಆದ್ದರಿಂದ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ತೀರ್ಮಾನ ತೆಗೆದುಕೊಂಡಿದ್ದೇನೆ, ಆದರೆ, ಈ ಕುರಿತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅನುಮೋದನೆ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.

ಕೋಲಾರದ ಹೊರಗಡೆ ಅಭ್ಯರ್ಥಿ, ಗೆದ್ದರೆ ಕೈಗೆ ಸಿಗುವುದಿಲ್ಲವೆಂಬ ಅಪಪ್ರಚಾರ ನಡೆಯುತ್ತಿದೆ, ಆದರೆ, ಕ್ಷೇತ್ರದ ಯಾವುದೇ ಮತದಾರ ತಮ್ಮನ್ನು ಭೇಟಿಯಾಗಲು ನಾಯಕರ ಅನುಮತಿ ಬೇಕಿಲ್ಲ ಚೆಡ್ಡಿ ಹಾಕಿದ ಶ್ರೀಸಾಮಾನ್ಯ ಕೂಡ ತಮ್ಮನ್ನು ನೇರವಾಗಿ ಭೇಟಿಯಾಗಬಹುದು, ಪ್ರತಿ ವಾರಕ್ಕೊಮ್ಮೆ ಕೋಲಾರಕ್ಕೆ ಬಂದು ಹೋಗುವೆ, ಎಲ್ಲರ ಕಷ್ಟ ಸುಖ ಆಲಿಸುವೆ, ಶಕ್ತಿ ಮೀರಿ ಕ್ಷೇತ್ರದ ಮತದಾರರ ಸಮಸ್ಯೆ ಪರಿಹರಿಸಲು ಶ್ರಮಿಸುವೆ ಎಂದರು.

ತಮ್ಮ ೪೦ ವರ್ಷಗಳ ರಾಜಕೀಯ ಜೀವನದಲ್ಲಿ ಜನಪರವಾದ ಕೆಲಸಮಾಡಿಕೊಂಡೇ ಬಂದಿದ್ದೇನೆ, ಅಭಿವೃದ್ಧಿಯ ವಿಚಾರದಲ್ಲಿ ಎಂದೂ ಹಿಂದೆ ಬಿದ್ದಿಲ್ಲ, ಹಿಂದೆ ತಾವು ಗೆದ್ದಿರುವ ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ್ದೇನೆ, ಹಾಗೆಯೇ ಕೋಲಾರವನ್ನು ಸರ್ವತೋಮುಖ ಅಭಿವೃದ್ಧಿಪಡಿಸುತ್ತೇನೆ ಎಂದು ಘೋಷಿಸಿದರು.

ಚುನಾವಣೆಗೂ ಮುನ್ನ ಕೋಲಾರ ಕ್ಷೇತ್ರದ ಹೋಬಳಿ ಕೇಂದ್ರಗಳಿಗೂ ಆಗಮಿಸುತ್ತೇನೆ, ಆನಂತರ ನಾಮಪತ್ರ ಸಲ್ಲಿಸಿ ಹೋಗಿ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಮ್ಮ ಸ್ಪರ್ಧೆಯನ್ನು ಖಚಿತಪಡಿಸಿದರು.

ಬಿಜೆಪಿ ಸುಳ್ಳಿನ ಕಾರ್ಖಾನೆಯಾಗಿದೆ, ಬಿಜೆಪಿ ಬಗ್ಗೆ ಎಚ್ಚರವಾಗಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಿಗೆ ಹೇಳಿದರು. ಕೋಲಾರದಿಂದ ಸ್ಪಽಸುವುದಾಗಿ ಘೋಷಿಸಿದ ನಂತರ ಬಿಜೆಪಿ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಅವರು, ಕೋಲಾರದಲ್ಲಿ ಬಿಜೆಪಿ ಇಲ್ಲ ಆದರೂ, ಜನತೆ ಎಚ್ಚರವಾಗಿರಬೇಕೆಂದು ಸಲಹೆ ನೀಡಿದರು.

ಮುಂದಿನ ಚುನಾವಣೆಯಲ್ಲಿ ಶೇ.೧೦೦ ಕ್ಕೆ ೧೦೦ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಽಕಾರಕ್ಕೆ ಬರುತ್ತದೆ, ಮಾನ ಮರ್ಯಾದೆ ಇಲ್ಲದ ಬಿಜೆಪಿಯ ಪೀಡೆ ತೊಲಗುತ್ತದೆ ಎಂದು ಖಚಿತಪಡಿಸಿದರು.

ಮುಂದಿನ ಬಾರಿ ಕಾಂಗ್ರೆಸ್ ಸರಕಾರ ಅಽಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಐದು ವರ್ಷದೊಳಗೆ ೨ ಲಕ್ಷ ಕೋಟಿ ವೆಚ್ಛ ಮಾಡಿ ಪೂರ್ಣಗೊಳಿಸಿ ಪ್ರತಿ ರೈತರ ಭೂಮಿಗೆ ನೀರು ಹರಿಸುವುದಾಗಿ ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ ಘೋಷಿಸಿದರು.

ಕೆಸಿ ವ್ಯಾಲಿ ಯೋಜನೆಗೆ ೧೪೦೦ ಕೋಟಿ ರೂ, ಚಿಕ್ಕಬಳ್ಳಾಪುರಕ್ಕೆ ಎಚ್‌ಎನ್ ವ್ಯಾಲಿ ಯೋಜನೆ, ಎತ್ತಿನ ಹೊಳೆಗೆ ೧೩ ಸಾವಿರ ಕೋಟಿ ಅಂದಾಜು ವೆಚ್ಛದಲ್ಲಿ ಭೂಮಿ ಪೂಜೆ ಸಲ್ಲಿಸಿದ್ದು, ಅಽಕಾರಕ್ಕೆ ಬಂದ ೨ ವರ್ಷದೊಳಗೆ ಎತ್ತಿನ ಹೊಳೆ ಯೋಜನೆಯನ್ನು ಪರಿಷ್ಕೃತ ೨೪ ಸಾವಿರ ಕೋಟಿ ವೆಚ್ಛ ಮಾಡಿ ಪೂರ್ಣಗೊಳಿಸಿ ಕೋಲಾರಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಹರಿಸುವುದಾಗಿ ಪ್ರಕಟಿಸಿದರು.

ಅಲ್ಪಸಂಖ್ಯಾತರಿಗೆ ಯೋಜನೆಗಳು, ಕೋಲಾರಕ್ಕೆ ಸೂಪರ್ ಸ್ಪೆಷಲ್ ಆಸ್ಪತ್ರೆ, ಪರಿಶಿಷ್ಟರಿಗೆ ಆರ್ಥಿಕ ಶಕ್ತಿ ಹೀಗೆ ನುಡಿದಂತೆ ಸರಕಾರ ತಮ್ಮದಾಗಲಿದೆ, ಹಿಂದೆಯೂ ಪ್ರಣಾಳಿಯ ಎಲ್ಲಾ ಭರವಸೆಗಳನ್ನು ಈಡೇರಿಸಿ ಹೆಚ್ಚುವರಿಯಾಗಿ ೩೦ ಕ್ಕೂ ಹೆಚ್ಚು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾಗಿ ವಿವರಿಸಿದರು.

ದಲಿತರಿಗೆ ಗುತ್ತಿಗೆಯಲ್ಲಿ ಮೀಸಲಾತಿ, ಮಹಿಳೆಯರಿಗೆ ೧೦ ಲಕ್ಷ ರೂವರೆವಿಗೂ ಬಡ್ಡಿ ರಹಿತ ಸಾಲಸೌಲಭ್ಯ, ಹೀಗೆ
ತಮ್ಮ ಅವಽಯಲ್ಲಿ ರಾಜ್ಯಾದ್ಯಂತ ೧೫ ಲಕ್ಷ ಮನೆಗಳ ನಿರ್ಮಾಣ ಮಾಡಲಾಗಿತ್ತು, ಆದರೆ, ಬಿಜೆಪಿ ಸರಕಾರದಿಂದ ೧ ಮನೆಯ ನಿರ್ಮಾಣವೂ ಆಗಿಲ್ಲ, ಕಾಂಗ್ರೆಸ್ ಅಽಕಾರಕ್ಕೆ ಬಂದರೆ ಅನ್ನ ಭಾಗ್ಯಯೋಜನೆಯಡಿ ಪ್ರತಿಕುಟುಂಬಕ್ಕೆ ತಲಾ ೧೦ ಕೆಜಿ ಅಕ್ಕಿಯನ್ನು ನೀಡುವುದಾಗಿ ಘೋಷಿಸಿದರು.

ಹೆಚ್ಚು ರಾಜಕೀಯ ಭಾಷಣ ಮಾಡುವುದಿಲ್ಲ, ಜ.೨೩ ರಂದು ಕೋಲಾರಕ್ಕೆ ಮತ್ತೇ ಆಗಮಿಸುತ್ತೇನೆ, ಅಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಾವೇಶ ನಡೆಸಿ ಮತ್ತಷ್ಟು ವಿವರವಾಗಿ ಮಾತನಾಡುತ್ತೇನೆ ಎಂದರು.

Leave a Reply

Your email address will not be published. Required fields are marked *

You missed

error: Content is protected !!