• Wed. Apr 24th, 2024

ಮುನಿಸಿಕೊಂಡಿದ್ದ ಕೆ.ಹೆಚ್ ಮುನಿಯಪ್ಪ ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿ:

PLACE YOUR AD HERE AT LOWEST PRICE

ಮುನಿಸಿಕೊಂಡಿದ್ದ ಕೆ.ಹೆಚ್ ಮುನಿಯಪ್ಪ ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿ:

ಮುನಿಯಪ್ಪ ಮುನಿಸು ಶಮನ ಮಾಡುವಲ್ಲಿ ಸಿದ್ದು ಯಶಸ್ವಿ, ಕೋಲಾರದ ಕಾರ್ಯಕ್ರಮಕ್ಕೆ ಇಬ್ಬರೂ ಒಂದೇ ಕಾರಿನಲ್ಲಿ ಪ್ರಯಾಣ.

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಈ ದಿನ ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಕೇಂದ್ರದ ಮಾಜಿ ಸಚಿವ ಕೆ.ಹೆಚ್ ಮುನಿಯಪ್ಪನವರ ಬೆಂಗಳೂರಿನ ಮನೆಗೆ ಭೇಟಿ ಮಾಡಿ ಈ ದಿನ ಕೋಲಾರದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸದೆ ಹೋದರೆ ಪಕ್ಷದ ಬಗ್ಗೆ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಮನವರಿಕೆ ಮಾಡಿದರು.

ಏನೇ ಗೊಂದಲಗಳಿದ್ದರೂ ಸರಿಪಡಿಸಿಕೊಳ್ಳೋಣ ಈಗ ಸಭೆಗೆ ಬನ್ನಿ ಎಂದು ಅತ್ಯಂತ ಆತ್ಮೀಯವಾಗಿ ಮನವಿ ಮಾಡಿದರು. ಕೆಲವು ಷರತ್ತುಗಳನ್ನು ಹಾಕಿದ ಕೆ.ಹೆಚ್.ಮುನಿಯಪ್ಪ ಸಭೆಗೆ ಬರಲು ಒಪ್ಪಿದರು.

ಎ ಐ ಸಿ ಸಿ ಹಾಗೂ ಕೆಪಿಸಿಸಿಯವರನ್ನು ಒಳಗೊಂಡು ಕೋಲಾರ ಕಾಂಗ್ರೆಸ್ ನಲ್ಲಿ ಇರುವಂತಹ ಸಮಸ್ಯೆಗಳ ಪರಿಹಾರವನ್ನು ಆದಷ್ಟು ಬೇಗ ಬಗೆಹರಿಸುವುದು ನನ್ನ ಜವಾಬ್ದಾರಿ ಎಂದು ಸಿದ್ದರಾಮಯ್ಯ ಮನವರಿಕೆ ಮಾಡಿದರು.

ಕೋಲಾರ ಕ್ಷೇತ್ರಕ್ಕೆ ಸಂಬಂಧಿಸಿದವರು ಮಾತ್ರ ಪಕ್ಷದ ಜವಾಬ್ದಾರಿಯನ್ನ ಹೊರಬೇಕು, ಮಿಕ್ಕವರು ಅವರವರ ಕ್ಷೇತ್ರಗಳ ಜವಾಬ್ದಾರಿಗಳನ್ನ ನೋಡಿಕೊಳ್ಳಬೇಕು ಇತ್ಯಾದಿ ಷರತ್ತುಗಳನ್ನು ವಿಧಿಸಿದ ಕೆ.ಹೆಚ್.ಮುನಿಯಪ್ಪ ಸಭೆಯಲ್ಲಿ ಭಾಗವಹಿಸಲು ಒಪ್ಪಿದರು.

ಮಾತುಕತೆ ಫಲಪ್ರದವಾದ ಕೋಡಲೆ ಕೆ.ಹೆಚ್.ಮುನಿಯಪ್ಪರನ್ನು ಸಿದ್ದರಾಮಯ್ಯರವರು ತಮ್ಮ ಕಾರಿನಲ್ಲಿ ಕೋರಿಸಿಕೊಂಡು ಕೋಲಾರಕ್ಕೆ ಕರೆತರುತ್ತಿದ್ದಾರೆ. ಆ ಮೂಲಕ ಕೆ.ಹೆಚ್.ಮುನಿಯಪ್ಪ ಸಭೆಯಲ್ಲಿ ಭಾಗವಹಿಸುವರೆ ಇಲ್ಲವೆ ಎಂಬ ಅನುಮಾನ ಶಮನಗೊಂಡಂತಾಗಿದೆ.

ಮಾತುಕತೆ ವೇಳೆ ಕಾಂಗ್ರೇಸ್ ಪಕ್ಷದ ಕೋಲಾರ ಜಿಲ್ಲಾ ಉಸ್ತುವಾರಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾ ನಾರಾಯಣಸ್ವಾಮಿ, ಕೆ.ಹೆಚ್ ಮುನಿಯಪ್ಪ ಬಣದ ಹಿರಿಯ ಮುಖಂಡರಾದ ದಳಸನೂರು ಗೋಪಾಲಕೃಷ್ಣ, ಶೇಷಾಪುರ ಗೋಪಾಲ್, ಕೋಲಾರ ನಗರ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಪ್ರಸಾದ್ ಬಾಬು, ಗ್ರಾಮಾಂತರ ಅದ್ಯಕ್ಷ ಉದಯಶಂಕರ್, ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷ ಎಲ್.ಎ.ಮಂಜುನಾಥ್, ಎಸ್.ಸಿ ಎಸ್.ಟಿ ಘಟಕದ ಜಿಲ್ಲಾದ್ಯಕ್ಷ ಜಯದೇವ, ಎಸ್.ಟಿ ಘಟಕದ ಜಿಲ್ಲಾದ್ಯಕ್ಷ ನಾಗರಾಜ್, ಮುಖಂಡ ಗಂಗಮ್ಮನಪಾಳ್ಯ ರಾಮಯ್ಯ ಮೊದಲಾದವರಿದ್ದರು.

 

 

 

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!