• Thu. Apr 25th, 2024

ಗ್ರಾಪಂಗಳಲ್ಲಿ ಅಕ್ರಮಗಳ ತನಿಖೆಗೆ ಒತ್ತಾಯಿಸಿ ಜ-16 ರಂದು ತಾಪಂ ಮುತ್ತಿಗೆ:ರೈತಸಂಘ.

PLACE YOUR AD HERE AT LOWEST PRICE

ಬಂಗಾರಪೇಟೆ ತಾಲ್ಲೂಕಿನಾದ್ಯಾಂತ ಗ್ರಾಮ ಪಂಚಾಯಿತಿಗಳಲ್ಲಿ ಆಕ್ರಮ ಖಾತೆಗಳು ಹಾಗೂ ನರೇಗಾ  ಕಾಮಗಾರಿಗಳಲ್ಲಿ ನಡೆಸಿರುವ ಭ್ರಷ್ಟಚಾರವನ್ನು ಸಿ.ಬಿ.ಐ ಗೆ  ಒಪ್ಪಿಸಬೇಕೆಂದು ಒತ್ತಾಯಿಸಿ ಜ.16 ರಂದು ಜಾನುವಾರುಗಳ ಸಮೇತ  ತಾಲ್ಲೂಕು ಪಂಚಾಯಿತಿ ಮುತ್ತಿಗೆ ಹಾಕಲು ರೈತ ಸಂಘದ  ಸಭೆಯಲ್ಲಿ ತಿರ್ಮಾನಿಸಲಾಯಿತು.
ನಗರದ ಡಾ|| ಬಿ.ಆರ್. ಆಂಬೇಡ್ಕರ್ ಪ್ರತಿಮೆ ಮುಂದೆ ಸೇರಿದ್ದ ರೈತಸಂಘದ ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಗ್ರಾಮ ಪಂಚಾಯಿತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಧಾನದಲ್ಲಿ ಕಮಿಷನ್ ಇಲ್ಲದೆ ಯಾವುದೇ ಮಾಡುತ್ತಿಲ್ಲ ಎಂದು ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಸಾಂಕ್ರಾಮಿಕ ರೋಗಗಳು ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರ ಹೆಸರಿನಲ್ಲಿ ಜಾಬ್‍ಕಾರ್ಡ್‍ಗಳನ್ನು ಸೃಷ್ಠಿ ಮಾಡಿ ನೆಪಮಾತ್ರಕ್ಕೆ ಕೆಲಸ ನೀಡಿದ್ದೇವೆಂದು ಪೋಟೋ ತೆಗೆದುಕೊಂಡು ಆನಂತರ 10
ಲಕ್ಷ ರೂಪಾಯಿ ಕಾಮಗಾರಿಯನ್ನು 3 ಲಕ್ಷದಲ್ಲಿ ಜೆ.ಸಿ.ಬಿ ಮುಖಾಂತರ ಮಾಡಿ 7 ಲಕ್ಷ ಹಣವನ್ನು  ಹಂಚಿಕೊಳ್ಳುವ
ಮುಖಾತರ ನರೇಗಾದ ಮರಣ ಶಾಸನ ಬರೆಯುತ್ತಿದ್ದಾರೆಂದು ಅಸಮಾದಾನ ವ್ಯಕ್ತಪಡಿಸಿದರು.
ಇ-ಖಾತೆ , ಬಿ-ಖಾತೆಗಳಲ್ಲಿ ಆಕ್ರಮ 21 ಪಂಚಾಯಿತಿ ವ್ಯಾಪ್ತಿಯಲ್ಲಿ ಗಲ್ಲಿಗೊಂದು ಆಕ್ರಮ ಲೇಔಟ್‍ಗಳು ತಲೆ ಎತ್ತಿದ್ದು, ಈ ಆಕ್ರಮ ಲೇಔಟ್‍ಗಳೇ ಆಯಾ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಲಕ್ಷ ಲಕ್ಷ ಆದಾಯ ಕೊಡುವ ಲೇಔಟ್‍ಗಳಾಗಿ ಮಾರ್ಪಟ್ಟಿವೆ.
ನಿವೇಶನ ಕೊಡುತ್ತೇವೆಂದು ಸರ್ಕಾರಿ ಗೋಮಾಳ, ಗುಂಡುತೋಪು, ಕೆರೆ ಅಂಗಳ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಆಕ್ರಮ ದಾಖಲೆಗಳನ್ನು ಪಂಚಾಯಿತಿಗೆ ನೀಡಿ ಖಾತೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಲಕ್ಷ ಲಕ್ಷ ಲಂಚ ನೀಡಿ ಆಕ್ರಮ ಇ-ಖಾತೆ, ಬಿ-ಖಾತೆಗಳನ್ನು ಮಾಡುವ ಮುಖಾಂತರ ಸರ್ಕಾರಿ ಆಸ್ತಿ ಹಾಗೂ ಬಡವರ ಬದುಕನ್ನು ಬೀದಿಪಾಲು ಮಾಡುತ್ತಿದ್ದಾರೆಂದು ಕಿಡಿ ಕಾರಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ಗಾಂದಿ  ಕಂಡಂತಹ ಹಳ್ಳಿಗಳ ಅಭಿವೃದ್ದಿ ಮರಿಚೀಕೆಯಾಗಿದೆ. ಗುಣಮಟ್ಟದ ರಸ್ತೆ ಇಲ್ಲ, ಚರಂಡಿ ಇಲ್ಲ, ಬೀದಿ ದೀಪಗಳಿಲ್ಲದೆ
ಕತ್ತಲೆಯ ಕೂಪಗಳಾಗಿ ಹಳ್ಳಿಗಳು ಮಾರ್ಪಡಲು ಪಂಚಾಯಿತಿಗಳಲ್ಲಿನ ಹಗಲು ದರೋಡೆಯೇ ಕಾರಣವೆಂದು ಆರೋಪ ಮಾಡಿದರು.
14,15ನೇ ಹಣಕಾಸು ಯೋಜನೆ ದುರ್ಬಳಕೆ ಹಾಗೂ ಪಂಚಾಯಿತಿಗಳಲ್ಲಿನ ಭ್ರಷ್ಟಚಾರವನ್ನು ಸಿ.ಬಿ.ಐ ಗೆ ಒಪ್ಪಿಸಿ ಭ್ರಷ್ಟಚಾರದಲ್ಲಿ ಭಾಗಿ ಆಗಿರುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜ.16 ರ ಸೋಮವಾರ ತಾಲ್ಲೂಕು ಪಂಚಾಯಿತಿ ಮುತ್ತಿಗೆ ಹಾಕುವ ನಿರ್ದಾರವನ್ನು ಸಭೆಯಲ್ಲಿ ತಿರ್ಮಾನಿಸಲಾಯಿತು.
ಸಭೆಯಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಉಪಾದ್ಯಕ್ಷ ಚಾಂದ್‍ಪಾಷ, ಬಾಬಾಜನ್, ಮೊಹಮದ್‍ಶೋಹಿಬ್, ಐತಾಂಡಹಳ್ಳಿ ಮುನ್ನಾ, ಮಾಸ್ತಿ ವೆಂಕಟೇಶ್, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ಕಿರಣ್,
ಸುರೇಶ್‍ಬಾಬು, ಕಾಮಸಮುದ್ರ ಹೋ.ಅ ಮುನಿಕೃಷ್ಣ, ವಿಶ್ವ, ಮುನಿರಾಜು, ಮಾ.ತಾ.ಅ ಯಲ್ಲಪ್ಪ, ಹರೀಶ್, ಶೈಲ, ಚೌಡಮ್ಮ, ರಾಧ ಮೊದಲಾದವರಿದ್ದರು.

Related Post

ಸರ್ಕಾರದಿಂದ ಪರೀಕ್ಷೆ ವೇಳೆಯಲ್ಲಿ ಹಿಂದೂ ಮಹಿಳೆಯರ ಮಾಂಗಲ್ಯ-ಕಾಲುಂಗುರ ತೆಗೆಸುವ ದುಸ್ಸಾಹಸ: ಡಾ.ವೇಣುಗೋಪಾಲ್ ಆಕ್ರೋಶ
ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ
ಐತಿಹಾಸಿಕ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಪಂಚರಾಜ್ಯಗಳ ಸಾಂಸ್ಕೃತಿಕ ಸಂಗಮಕ್ಕೆ  ಆದಿಮ ಸಜ್ಜು.

Leave a Reply

Your email address will not be published. Required fields are marked *

You missed

error: Content is protected !!