• Thu. Apr 18th, 2024

ಮ್ಯಾಂಗೋ ಇಂಡಸ್ಟ್ರಿಯಲ್ ಹಬ್ ಗೆ ಹೆಚ್ಚುತ್ತಿರುವ ಒತ್ತಡ – ದುಂಡು ಮೇಜಿನ ಸಭೆಯಲ್ಲಿ ನಿರ್ಣಯ

PLACE YOUR AD HERE AT LOWEST PRICE

*ಮಾವು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರವಾಗಿ ಕೋಲಾರ ಜಿಲ್ಲೆಯಲಿ ಮಾವು ಆಧಾರಿತ ಕೈಗಾರಿಕೆಗಳನ್ನು ತರುವ ಮೂಲಕ ಮ್ಯಾಂಗೋ ಇಂಡಸ್ಟ್ರಿಯಲ್ ಹಬ್ ಸ್ಥಾಪಿಸಬೇಕು.
*ಮಾವು ಮಹಾಮಂಡಳಿಗೆ ಪ್ರತಿ ವರ್ಷ ಕನಿಷ್ಟ ೫೦೦ ಕೋಟಿ ರೂ. ಅನುದಾನ ಮೀಸಲಿಡಬೇಕು.
*ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆ ಖಾಸಗಿ ವಿಮಾ ಕಂಪನಿಗಳಿಗೆ ನೀಡಬಾರದು.

ರೈತರ ಮೇಲೆ ಗೌರವ ಇದ್ದರೆ  ಸರ್ಕಾರ ರಾಜ್ಯದ ಮಾವಿನ ನಗರಿ ಶ್ರೀನಿವಾಸಪುರದಲ್ಲಿ ಮಾವು ಕೈಗಾರಿಕಾ ಪ್ರದೇಶ (ಮ್ಯಾಂಗೋ ಇಂಡಸ್ಟ್ರಿಯಲ್ ಹಬ್) ಸ್ಥಾಪಿಸಬೇಕು  ಮಾವು ಮಹಾಮಂಡಳಿಗೆ ಪ್ರತಿವರ್ಷ ಕನಿಷ್ಠ ೫೦೦ ಕೋಟಿ ಅನುಧಾನ ಮೀಸಲಿಡಬೇಕೆಂದು ಮಾವು ಬೆಳೆಗಾರರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಒತ್ತಾಯಿಸಿದ್ದಾರೆ.

ಕೋಲಾರ ಪತ್ರಕರ್ತರ ಭವನದಲ್ಲಿ ಮಾವು ಬೆಳಗಾರರ ಹೋರಾಟ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಾವು ಬೆಳಗಾರರ ಸಮಸ್ಯೆಗಳು ಮತ್ತು ಪರಿಹಾರಗಳು ಕುರಿತಾಗಿ ರಾಜ್ಯ ಮಟ್ಟದ ದುಂಡು ಮೇಜಿನ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕಳೆದ ಸುಮಾರು ವರ್ಷಗಳಿಂದ ಮಾವು ಬೆಳೆಗಾರರು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ, ಈ ಕುರಿತು ಈಗಾಗಲೇ ಮಾವು ಬೆಳಗಾರರು ತಮ್ಮ ಬೇಡಿಕೆಗಳು ಈಡೇರಿಸಲು ಎಷ್ಟೇ ಪ್ರತಿಭಟನೆ, ಧರಣಿ, ಒತ್ತಾಯಗಳು ಮಾಡಿದರೂ ಪ್ರತಿಫಲ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕದ ೧.೬ಲಕ್ಷ ಹೆಕ್ಟೇರ್‌ನಲ್ಲಿ ಸುಮಾರು ೧೪ ರಿಂದ ೧೬ ಲಕ್ಷ ಟನ್ ಮಾವು ಬೆಳೆಯುತ್ತಿದ್ದು, ಕೋಲಾರ ಜಿಲ್ಲೆಯಿಂದಲೇ ಸುಮಾರು ೫೪ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ೧೧ ಲಕ್ಷ ಟನ್ ಮಾವು ಬೆಳೆಯುತ್ತಿದ್ದೇವೆ. ಅದರಲ್ಲೂ ಶ್ರೀನಿವಾಸಪುರ ಒಂದರಿ0ದಲೇ ೬ ಲಕ್ಷ ಟನ್ ಮಾವು ಬೆಳೆಯುತ್ತಿದ್ದು, ಒಟ್ಟಾರೆ ಫಸಲಿನ ಅರ್ದಕ್ಕಿಂತ ಹೆಚ್ಚು ಮಾವು ಕೋಲಾರ ಜಿಲ್ಲೆಯಲ್ಲೇ ಬೆಳೆಯುತ್ತಿದ್ದು, ಶ್ರೀನಿವಾಸಪುರದಲ್ಲಿ ಮಾವು ಕೈಗಾರಿಕಾ ಪ್ರದೇಶ (ಮ್ಯಂಗೋ ಇಂಡಸ್ಟ್ರಿಯಲ್ ಹಬ್) ಮಾಡಿದರೆ, ಇಲ್ಲಿನ ರೈತರು ತಾವು ಬೆಳೆದ ಮಾವು ಪಕ್ಕದ ಚಿತ್ತೂರು ಕೃಷ್ಣಗಿರಿ ಕೈಗಾರಿಕೆಗಳಿಗೆ ಕಳುಹಿಸುವುದು ತಪ್ಪುತ್ತದೆ ಅಲ್ಲದೆ, ಈ ಉದ್ದಿಮೆಯಿಂದ ಲಕ್ಷಾಂತರ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಾವುಗೆ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಮಾತ್ರ ಮಾವು ಉಳಿಯಲು ಸಾಧ್ಯ ರಾಜ್ಯ ಮಾವು ಮಹಾಮಂಡಳಿಗೆ ನೆರವಿನ ಅನುದಾನ ನೀಡಬೇಕು ಹಾಗೂ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಖಾಸಗಿ ವಿಮಾ ಕಂಪನಿಗೆ ನೀಡಬಾರದು ಎಂದು ಒತ್ತಾಯಿಸಿದ ಅವರು, ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಅನಿವಾರ್ಯವಾಗಿ ಸರ್ಕಾರದ ಮೇಲೆ ಒತ್ತಡ ತರುವ ಹಾಗೂ ಮಾವು ಬೆಳಗಾರರು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲು ಪ್ರಯತ್ನಿಸುತ್ತಿದೆ, ಈ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರುಗಳು ಸದನದಲ್ಲಿ ಧ್ವನಿ ಎತ್ತಬೇಕಿದೆ. ಆ ಮೂಲಕ ರೈತರ ನೆರವಿಗೆ ಜನಪ್ರತಿನಿಧಿಗಳು ಬರಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಮಾವು ಮಂಡಳಿಯ ಮಾಜಿ ಅಧ್ಯಕ್ಷ ದಳಸನೂರು ಎಲ್.ಗೋಪಾಲಕೃಷ್ಣ ಮಾತನಾಡಿ ಚುನಾಯಿತರಾದ ವ್ಯಕ್ತಿಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಮಾವು ಬೆಳಗಾರರ ಸಮಸ್ಯೆಗಳು ಹಾಗೇ ನಿಂತಿವೆ ಕೇವಲ ಮಾವು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರೆ ಸಾಲದು ಅನುದಾನ ಬಿಡುಗಡೆ ಮಾಡಬೇಕು ಪೋತ್ಸಾಹಿಸಬೇಕು ಸರಕಾರ ಗಮನಸೆಳೆಯುವ ನಿಟ್ಟಿನಲ್ಲಿ ಹೋರಾಟಗಳು ನಡೆಯಬೇಕಾಗಿದೆ ಜಿಲ್ಲೆಯಲ್ಲಿ ಸಂಸ್ಕರಣ ಘಟಕದ ಜೊತೆಗೆ ಮಾವು ಕೈಗಾರಿಕೆಗಳನ್ನು ಸ್ಥಾಪಿಸಿ ಉತ್ತೇಜನ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಮಾವು ಬಳೆಗಾರರು ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಮನುಷ್ಯ ಪ್ರತಿನಿತ್ಯ ಬಳಕೆಯ ವಸ್ತುಗಳು ಸೇರಿದಂತೆ ಆಹಾರ ಪದಾರ್ಥಗಳಿಗೆ ನಿಗದಿತ ಬೆಲೆ ಮಾಡಿದ್ದಾರೆ ಆದರೆ ರೈತರು ಕಷ್ಟಪಟ್ಟು ದುಡಿದು ಬೆಳೆಯುವ ಬೆಳೆಗಳಿಗೆ ಮಾತ್ರ ಸರಕಾರಗಳು ಬೆಲೆ ನಿಗದಿ ಮಾಡಿಲ್ಲ ಜಿಲ್ಲೆಯಲ್ಲಿರುವ ನಂದಿನಿ ಹಾಲಿನ ಕೇಂದ್ರದಲ್ಲಿ ಮಾವಿನ ಹಣ್ಣು ಮಾರಾಟ ಮಾಡಲು ಅವಕಾಶ ನೀಡಬೇಕು ಜೊತೆಗೆ ರೈತರು ಬೆಳೆದ ಪ್ರತಿಯೊಂದು ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಮಾಡುವುದು ಸರಕಾರಗಳ ಆಧ್ಯತೆಯಾಗುವಂತೆ ರೈತ ಸಂಘಟನೆಗಳೊಂದಿಗೆ ಸೇರಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಜೊತೆಗೆ ಮಾವು ಬೆಳಗಾರರ ಸಮಸ್ಯೆಗಳ ಕುರಿತಂತೆ ಮುಂದಿನ ಅಧಿವೇಶನದಲ್ಲಿ ಸದನದಲ್ಲಿ ಪ್ರಸ್ತಾಪ ಮಾಡಲು ಪ್ರಯತ್ನ ಮಾಡುವ ಮೂಲಕ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆ.ಪಿ.ಆರ್.ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್ ಸೂರ್ಯನಾರಾಯಣ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಚಂದ್ರತೇಜಸ್ವಿ ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ವೀರಭದ್ರಸ್ವಾಮಿ, ಬೈಚೇಗೌಡ, ಜಿಲ್ಲಾ ಮಾವು ಬೆಳೆಗಾರರ ಸಂಘದ ಉಪಾಧ್ಯಕ್ಷ ಶ್ರೀರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ಟಿ.ಎಂ ವೆಂಕಟೇಶ್ ಸೈಯದ್ ಫಾರೂಕ್, ಶ್ರೀನಿವಾಸರೆಡ್ಡಿ ಮುಂತಾದವರು ಇದ್ದರು.

 

ಇದನ್ನೂ ಓದಿ : ಕೋರೆಗಾಂವ್ ಐತಿಹಾಸಿಕ ಯುದ್ಧವನ್ನು ಪಠ್ಯದಲ್ಲಿ ಸೇರಿಸಿ:ಡಿ.ಎಸ್.ಎಸ್ ಒತ್ತಾಯ.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!