• Fri. Mar 29th, 2024

PLACE YOUR AD HERE AT LOWEST PRICE

ಇತ್ತೀಚೆಗೆ ಕತೆ-ಕವನಗಳನ್ನು ಬರೆಯುತ್ತಿರುವ ಮುಸ್ಲಿಮ್ ಹೆಣ್ಣು ಮಕ್ಕಳ‌ನ್ನು ಕಂಡಾಗೆಲ್ಲ ನನಗೆ ಸಾ.ರಾ. ಅಬೂಬಕರ್ ನೆನಪಾಗುತ್ತಿದ್ದರು. ಮುಂದೆಯೂ ನೆನಪಾಗಬಹುದು.

ಸಾರಾ ಅಬೂಬಕರ್ ಅವರಿಗೆ ಬರೆಯಲು ಎಷ್ಟೊಂದು ಕಷ್ಟಗಳಿದ್ದವು! ಎಷ್ಟೋ ಕಡೆ ಅವರತ್ತ ಕಲ್ಲು-ಮೊಟ್ಟೆಗಳನ್ನು ಎಸೆದಿದ್ದರು. ಈ ವಿರೋಧಗಳನ್ನು ಒಳಗಿನಿಂದಲೇ ಅವರು ಹೆಚ್ಚು ಎದುರಿಸಿದ್ದು ಎನ್ನುವುದೂ ಸತ್ಯ.

ಅವರು ಬೇರೆ ಧರ್ಮಗಳ ಬಗ್ಗೆ ಬರೆದದ್ದು, ಮಾತನಾಡಿದ್ದು ಕಡಿಮೆ. ತಮ್ಮ ಮನೆಯೊಳಗೆ ಆಗಬೇಕಾಗಿದ್ದ ಸುಧಾರಣೆಗಳ ಸುತ್ತವೇ ಅವರ ಬರವಣಿಗೆಗಳಿದ್ದವು.

ನಿಷ್ಠಾವಂತ ಧಾರ್ಮಿಕ ವ್ಯಕ್ತಿಯಾಗಿದ್ದ ಅವರು ಬಂಡಾಯಗಾರರಾಗಿರಲಿಲ್ಲ. ಈ ಕಾರಣಕ್ಕಾಗಿಯೇ ಅವರು ಹೇಳುತ್ತಿದ್ದ ಕಟು ಸತ್ಯಗಳನ್ನು ಸಮಾಜಕ್ಕೆ ಅರಗಿಸಿಕೊಳ್ಳಲಾಗುತ್ತಿರಲಿಲ್ಲ.

ಸಾರಾ ಹೋರಾಟದ ಮಾದರಿ ಇಂದಿನ‌ ಅಗತ್ಯ. ಶುದ್ಧ ಧಾರ್ಮಿಕರಾಗಿದ್ದೂ ಪ್ರಗತಿಪರರಾಗಿರಲು ಮತ್ತು ಕೋಮುವಾದಿ ಆಗದೆ ಇರಲು ಸಾಧ್ಯ ಎನ್ನುವುದಕ್ಕೆ ಸಾರಾ ಅವರ ಬದುಕು ಮತ್ತು ಬರಹ ಸಾಕ್ಷಿ.

ದೇವರನ್ನು ನಂಬುತ್ತಿದ್ದ ಸಾರಾ ಅಬೂಬಕರ್ ಅವರನ್ನು ಅವರು ನಂಬಿದ್ದ ಅಲ್ಲಾ ಖಂಡಿತ ಪ್ರೀತಿಯಿಂದ ಬರಮಾಡಿಕೊಳ್ಳುತ್ತಾನೆ.

ಇದನ್ನೂ ಓದಿ : ಮ್ಯಾಂಗೋ ಇಂಡಸ್ಟ್ರಿಯಲ್ ಹಬ್ ಗೆ ಹೆಚ್ಚುತ್ತಿರುವ ಒತ್ತಡ – ದುಂಡು ಮೇಜಿನ ಸಭೆಯಲ್ಲಿ ನಿರ್ಣಯ

Leave a Reply

Your email address will not be published. Required fields are marked *

You missed

error: Content is protected !!