• Fri. Mar 29th, 2024

ಕೆಜಿಎಫ್‌ನ ಚಿನ್ನವನ್ನು ಕೆ.ಹೆಚ್.ಮುನಿಯಪ್ಪ ಕೊಳ್ಳೆಹೊಡೆದಿದ್ದಾರೆ:MP ಮುನಿಸ್ವಾಮಿ.

PLACE YOUR AD HERE AT LOWEST PRICE

ಕೆಜಿಎಫ್‍ನಲ್ಲಿ ಸಿಗುತ್ತಿದ್ದ ಚಿನ್ನವನ್ನು ಕೆ.ಹೆಚ್.ಮುನಿಯಪ್ಪ ಸಂಸದರಾಗಿದ್ದಾಗ ಕೊಳ್ಳೆ ಹೊಡೆದಿದ್ದು ಸಾಲದು ಎಂದು ಮತ್ತೆ ಅವರ ಮಗಳೂ ಬಂದಿದ್ದಾರೆ, ತಂದೆ ಮತ್ತು ಮಗಳು ಇಬ್ಬರಿಗೂ ಬಡವರ ಬಗ್ಗೆ ಕಾಳಜಿ ಇಲ್ಲ ಅವರಿಗೆ
ನಿಜವಾಗಿಯೂ ಕೆಜಿಎಫ್ ಬಗ್ಗೆ ಕಾಳಜಿ ಇದ್ದಿದ್ದರೆ ಇಂದಿನ ಈ ದುಃಸ್ಥಿತಿಗೆ ಕೆಜಿಎಫ್ ತಲುಪುತ್ತಿರಲಿಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ತೀವ್ರ ವಾಗ್ಧಾಳಿ ನಡೆಸಿದರು.
ನಗರದ ಚಾಂಪಿಯನ್ ರೈಲ್ವೆ ನಿಲ್ದಾಣದ ಮುಂಭಾಗ ಮತ್ತು ಮಾರಿಕುಪ್ಪಂ ತೆಲುಗು ಲೈನ್‍ನಲ್ಲಿ ನಡೆದ ಬಿಜೆಪಿ ಪಕ್ಷದ ಬೂತ್ ವಿಜಯ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ಕೆಜಿಎಫ್‍ನಲ್ಲಿ ಸಿಗುತ್ತಿದ್ದ ಅಪಾರ ಪ್ರಮಾಣದ ಚಿನ್ನವನ್ನು ತಮ್ಮ ತಂದೆ ಕೆ.ಹೆಚ್.ಮುನಿಯಪ್ಪನವರ ಕಾಲದಲ್ಲಿ ಕೊಳ್ಳೆ ಹೊಡೆದಿದ್ದು ಮತ್ತು ಶರಾವತಿಯಿಂದ ಕೆಜಿಎಫ್‍ಗೆ ವಿದ್ಯುತ್ ಪೂರೈಸಲು ಅಳವಡಿಸಿದ್ದ ತಾಮ್ರದ ತಂತಿಗಳನ್ನು ಕಳವು ಮಾಡಿದ್ದು ಬಿಟ್ಟರೆ ಕೆಜಿಎಫ್‍ಗೆ
ಇಲ್ಲಿನ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್‍ರವರ ಕೊಡುಗೆ ಏನೂ ಇಲ್ಲ.
ಕಾಂಗ್ರೆಸ್‍ನವರ ಡ್ರಾಮಾ ಕಂಪನಿಯಲ್ಲಿ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಡೈರೆಕ್ಟರ್ ಆಗಿದ್ದು, ಅವರ ಮಗಳು ಇಲ್ಲಿ ಆಕ್ಟಿಂಗ್ ಮಾಡಲು ಬಂದಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಇಲ್ಲಿ ಸೂಪರ್ ಎಂಎಲ್‍ಎ  ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
 27 ವರ್ಷಗಳ ಕಾಲ ಸತತವಾಗಿ ಕೆ.ಹೆಚ್.ಮುನಿಯಪ್ಪ ಸಂಸದರಾಗಿ, 10 ವರ್ಷಗಳ ಕಾಲ ಸಚಿವರಾಗಿದ್ದು ಅವರ
ಕೊಡುಗೆ ಕ್ಷೇತ್ರಕ್ಕೆ ದೊಡ್ಡ ಶೂನ್ಯ, ಕಾಂಗ್ರೆಸ್ ಕಳ್ಳರ ಪಕ್ಷ, ಚಿನ್ನದ ಗಣಿಯಲ್ಲಿ ದೊರೆಯುತ್ತಿದ್ದ ಚಿನ್ನವನ್ನು ನೆಹರು, ಇಂದಿರಾಗಾಂಧಿ, ರಾಜೀವಗಾಂಧಿ, ಕೆ.ಹೆಚ್.ಮುನಿಯಪ್ಪ, ಕೇಂದ್ರದ ಗಣಿ ಸಚಿವರಿಗೆ, ಮೈನಿಂಗ್ ಅಧಿಕಾರಿಗಳಿಗೆ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್‍ನ ಮುಖ್ಯಮಂತ್ರಿಗಳು, ಮಂತ್ರಿಗಳು, ಸ್ಥಳೀಯ ಶಾಸಕರವರೆಗೆ ಕಾಂಗ್ರೆಸ್‍ನ ಪ್ರತಿಯೊಬ್ಬ ಮಂತ್ರಿ ಮತ್ತು ಸಂಸದರೆಲ್ಲರೂ ಸೇರಿಕೊಂಡು ಲೂಟಿ ಮಾಡುವ ಮೂಲಕ ಕೆಜಿಎಫ್‍ನ್ನು ಇಂದಿನ ಈ
ದುಃಸ್ಥಿತಿಗೆ ತಂದು ನಿಲ್ಲಿಸಿದ್ದು, ಈ ಸ್ಥಿತಿಗೆ ಮೂಲ ಕಾರಣ ಕಾಂಗ್ರೆಸ್ ಆಗಿದೆ ಎಂದು ಗುಡುಗಿದರು.
ಸ್ತ್ರೀಶಕ್ತಿ ಸಂಘಗಳಿಗೆ  ಸಾಲವನ್ನು ಮರುಪಾವತಿಸುವಂತಿಲ್ಲ ಎಂದು ಹೇಳುತ್ತಾರೆ ಆದರೆ ಮತ್ತೆ ಸಾಲ ವಸೂಲಿಗೆ  ಮನೆಗಳ ಬಳಿ ಪೊಲೀಸರನ್ನು ಕಳುಹಿಸುತ್ತಾರೆ. ಆ ಸಾಲದ ಹಣ ಯಾರದ್ದು? ಕೇಂದ್ರ ಸರ್ಕಾರದ ನಬಾರ್ಡ್ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್‍ನದ್ದು, ಶಾಸಕಿ ರೂಪಕಲಾ ಶಶಿಧರ್‍ರವರ ಮನೆಯದ್ದಲ್ಲ ಎಂದರು.
500ರೂಗಳನ್ನು ತೆಗೆದುಕೊಂಡು ಯಾರಿಗಾದರೂ ಮತವನ್ನು ಹಾಕಿದರೆ ದಿನಕ್ಕೆ 1.25 ರೂಪಾಯಿಗೆ ನಮ್ಮಮತವನ್ನು
ಮಾರಿಕೊಂಡಂತಾಗುವುದಲ್ಲದೇ ಸಮಸ್ಯೆಗಳನ್ನು ಬಗೆಹರಿಸುವಂತೆ ಅವರನ್ನು ಕೇಳುವ ಅಧಿಕಾರವನ್ನು ನಾವು ಕಳೆದುಕೊಂಡಂತಾಗುತ್ತದೆ.
1000 ರೂಗಳನ್ನು ತೆಗೆದುಕೊಂಡರೆ 2.5 ರೂಗಳಿಗೆ ನಮ್ಮ ಮತವನ್ನು ಮಾರಿಕೊಂಡಂತಾಗುತ್ತದೆ. ಆದ್ದರಿಂದ ಯಾರು ಏನೇ ಕೊಟ್ಟರೂ ತೆಗೆದುಕೊಳ್ಳಿ, ಆದರೆ ನಿಮ್ಮ ಪರವಾಗಿ ಕೆಲಸ ಮಾಡುವ, ನಿಮ್ಮ ಕಷ್ಟಗಳಿಗೆ ಸ್ಪಂದಿಸುವ ಬಿಜೆಪಿ ಅಭ್ಯರ್ಥಿಗೆ ಮತವನ್ನು ನೀಡಿ ಎಂದು ಮನವಿ ಮಾಡಿದರು.
ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಅಗತ್ಯವಾಗಿದೆ, ನಿಮ್ಮ ಮಕ್ಕಳಿಗೆ ಇಲ್ಲಿ ಕೆಲಸ ಸಿಗುವಂತಾಗಬೇಕು, ನಿಮ್ಮ ಮನೆಗಳಿಗೆ ಹಕ್ಕು ಪತ್ರ ಸಿಗುವಂತಾಗಬೇಕು ಈ ರೀತಿಯ ಕೆಲಸಗಳಾಗಬೇಕು ಎಂದರೆ ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕು, ಬಿಜೆಪಿ ಪಕ್ಷ ಇಲ್ಲಿ ಯಾರಿಗೇ ಟಿಕೆಟ್ ನೀಡಲಿ ಅವರಿಗೆ ನಿಮ್ಮ ಕೆಜಿಎಫ್‍ನ ಚಿನ್ನದ ಗಣಿಯಲ್ಲಿ ಅಪಾರ ಪ್ರಮಾಣ ಚಿನ್ನದ ನಿಕ್ಷೇಪವಿದ್ದು, ಅದನ್ನು ಹೊರತೆಗೆಯಲು ಮತ್ತು ಈಗಾಗಲೇ ಹೊರತೆಗೆದು ಹಾಕಿರುವ
ಸೈಯನೈಡ್ ದಿಬ್ಬಗಳನ್ನು ಸಂಸ್ಕರಿಸಿ ಹೊರತೆಗೆಯಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹಲವಾರು ರೀತಿಯ ಮಣ್ಣಿನ ಪರೀಕ್ಷೆಗಳನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೆಜಿಎಫ್‍ನಲ್ಲಿ ಮತ್ತೆ ಚಿನ್ನದ ಗಣಿ ಕಾರ್ಯಾರಂಭ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಕೆಜಿಎಫ್ ಸುತ್ತಲಿನ 1000 ಎಕರೆ ಜಮೀನಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ವೇ ಕಾರ್ಯವನ್ನು ಮುಗಿಸಿ, ನೊಟಿಫಿಕೇಶನ್ ಮಾಡಲಾಗಿದೆ. ಚೆನ್ನೈ-ಬೆಂಗಳೂರು ಎಕ್ಸ್‍ಪ್ರೆಸ್ ಕಾರಿಡಾರ್ ರಸ್ತೆಯನ್ನು ಮಾಡುತ್ತಿದ್ದು, ಆ ರಸ್ತೆ
ಪೂರ್ಣಗೊಂಡ ಬಳಿಕ ರಸ್ತೆಯ ಎರಡೂ ಕಡೆಗಳಲ್ಲಿ ಹಲವಾರು ಕಂಪನಿಗಳು ತಲೆ ಎತ್ತಲಿವೆ ಎಂದರು.
ಕಾರ್ಯಕ್ರಮದಲ್ಲಿ ಕೆಜಿಎಫ್ ಬಿಜೆಪಿ ನಗರ ಘಟಕದ ಅಧ್ಯಕ್ಷ ಕಮಲ್‍ನಾಥನ್, ಸಮಾಜ ಸೇವಕ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಮೋಹನ್‍ಕೃಷ್ಣ, ಸರ್ಕಾರಿ ನೌಕರರ ಸಂಘದ ಮಾಜಿ ಅದ್ಯಕ್ಷ ರವಿರೆಡ್ಡಿ, ಆಂಜನೇಯರೆಡ್ಡಿ, ಅನಿಲ್, ಪಾಂಡಿಯನ್, ಗಾಂಧಿ, ಬಿಜೆಪಿ ವಿಸ್ತಾರಕ್ ಲೋಹಿತ್, ಜಿಲ್ಲಾ ಅಲ್ಪಸಂಖ್ಯಾತ ಉಪಾಧ್ಯಕ್ಷ ದೇವಭೂಷಣ್, ಶ್ರೀನಿವಾಸನ್, ಪಾಪಯ್ಯ, ಯುವಮೋರ್ಚಾ ಅಧ್ಯಕ್ಷ ಸಂತೋಷ್‍ಕುಮಾರ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!