• Fri. Apr 19th, 2024

ಸ್ವಾಮಿ ವಿವೇಕಾನಂದರ ಆದರ್ಶಗಳು ಮತ್ತು ತತ್ವಗಳು ಇಂದಿಗೂ ಪ್ರಸ್ತುತ ; ಜಿ.ಆರ್. ಶಂಕರೇಗೌಡ

PLACE YOUR AD HERE AT LOWEST PRICE

ಮಾನವೀಯ ಮೌಲ್ಯಗಳ ಜೊತೆಗೆ ಸಮಗ್ರ ಏಕತೆಯ ಚಿಂತನಾ ಸಿದ್ದಾಂತಗಳನ್ನು ಜಗತ್ತಿಗೆ ಪಸರಿಸಿ ಯುವ ಜನಾಂಗಕ್ಕೆ ಸ್ಪೂರ್ತಿಯ ಸೆಲೆಯಾಗಿ, ಹಿಂದೂ ಧರ್ಮದ ಪ್ರಚಾರಕರಾಗಿ ಸತತ ಐದು ವರ್ಷಗಳ ಕಾಲ ದೇಶದಾದ್ಯಂತ ಪಾದಯಾತ್ರೆ ಮಾಡಿ ಸ್ವಾಮಿ ವಿವೇಕಾನಂದರು ವೀರ ಸನ್ಯಾಸಿಯಾಗಿದ್ದರು ಎಂದು ಕೋಲಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ ಆರ್ ಶಂಕರೇಗೌಡ ತಿಳಿಸಿದರು.

ಕೋಲಾರ ಮಾನವ ಅಭಿವೃದ್ಧಿ ಯೋಗ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ೧೬೦ನೇ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವವನ್ನು ಗಲ್‌ಪೇಟೆಯ ಡಾ.ಪೋಸ್ಟ್ ನಾರಾಯಣಸ್ವಾಮಿಯವರ ನಿವಾಸದಲ್ಲ್ಲಿ ಸ್ವಾಮಿ ವಿವೇಕಾನಂದರಿಗೆ ಪು? ನಮನ ಸಲ್ಲಿಸಿ ಮಾತನಾಡುತ್ತಾ, ವಿವೇಕಾನಂದರು ಅಮೆರಿಕಾದ ಚಿಕಾಗೋದಲ್ಲಿ ಮಾಡಿದ ಭಾಷಣ ಇಂದಿಗೂ ಮರೆಯಲಾಗದು ಎಂದು ತಿಳಿಸಿದರು.

ಕನ್ನಡ ಪಂಡಿತ ಕೋ.ನಾ.ಪರಮೇಶ್ವರನ್ ಮಾತನಾಡಿ ವಿವೇಕಾನಂದರಿಗೆ ಹಿಂದುತ್ವವನ್ನು ಎಲ್ಲಾ ಧರ್ಮಗಳ ಅಡಿಯಲ್ಲಿ ಆಧ್ಯಾತ್ಮಿಕವಾಗಿ ಚಿಂತಿಸಿ ಭಾರತದ ಸಂಸ್ಕೃತಿಯನ್ನು ಮೆರೆದರು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಪೋಸ್ಟ್ ನಾರಾಯಣಸ್ವಾಮಿ, ಸ್ವಾಮಿ ವಿವೇಕಾನಂದರು ಬದುಕಿದ್ದಿದು ಕೇವಲ ೩೯ ವ? ಮಾತ್ರ. ಆದರೆ ಜೀವಮಾನದ ಸಮಸ್ತ ಕಾರ್ಯಗಳನ್ನು ಅವರ ಅಲ್ಪಾವಧಿಯಲ್ಲಿ ಮುಗಿಸಿದರು ವಿಶ್ವವನ್ನು ಸುತ್ತಿದರು. ಭಾರತದ ಬಗ್ಗೆ ಜೀವನದ ಪ್ರತಿಯೊಂದು ಕ್ಷಣವು ಚಿಂತಿಸಿದರು. ಅವರ ಜೀವನವೇ ನಿತ್ಯ ಭಾರತಕ್ಕೆ ಬದುಕಿದ್ದು ಅಕ್ಷರಶಹ ಸತ್ಯ ಎಂದು ತಿಳಿಸಿದರು.

ಕೋಲಾರ ತಾಲೂಕು ಕನ್ನಡ ಸಾಹಿತ್ಯ ಪರಿ?ತ್ತಿನ ಗೌರವಾಧ್ಯಕ್ಷರಾದ ಟಿ.ಸುಬ್ಬರಾಮಯ್ಯ ಮಾತನಾಡಿ ಸ್ವಾಮಿ ವಿವೇಕಾನಂದರ ನುಡಿಮುತ್ತುಗಳಾದ “ನಿಮ್ಮನ್ನು ನೀವು ಜಯಿಸಿ ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ””ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂಬ ಸಂದೇಶವನ್ನು ಎಲ್ಲರೂ ತಿಳಿಯಬೇಕು. ವಿಚಾರವಂತರಾದ ನಾವು ಅವರ ವಿಚಾರಧಾರೆಗಳನ್ನು ತಿಳಿದು ಮುಂದುವರೆದಾಗ ಎಲ್ಲರೂ ಪ್ರಭುದ್ಧರಾಗಬಹುದು. ನಾವು ಅವರ ಗೌರವಾರ್ಥ ಜನ್ಮದಿನದಂದು “ರಾಷ್ಟ್ರೀಯ ಯುವ ದಿನ “ಎಂದು ದೇಶದಾದ್ಯಂತ ಆಚರಿಸುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿ?ತ್ತಿನ ಪಿ. ನಾರಾಯಣಪ್ಪ ಶ್ರೀನಿವಾಸಪುರ ತಾಲೂಕು ಸರ್ಕಾರಿ ನೌಕರ ಸಂಘದ ನಾಗರಾಜು, ಮುರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ಜಿ.ಎಂ.ವೆಂಕಟರಮಣಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಮಾರ್ ಅಂಕತಟ್ಟಿಯ ನಂಜುಂಡೇಶ್ವರ, ಬಂಗೊದಿ ಶ್ರೀನಾಥ್ ಇದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!