• Fri. Apr 19th, 2024

ಹುತಾತ್ಮ ಕಾರ್ಮಿಕರ ಜ್ಯೋತಿ ಬಂಗಾರಪೇಟೆಗೆ ಆಗಮನ.

PLACE YOUR AD HERE AT LOWEST PRICE

 

17ನೇ ಸಿಐಟಿಯು ಅಖಿಲ ಭಾರತ ಸಮ್ಮೇಳನದ ಅಂಗವಾಗಿ ಕೆಜಿಎಫ್ ನಿಂದ ಬಂದ ಹುತಾತ್ಮ ಕಾರ್ಮಿಕರ ಜ್ಯೋತಿಯನ್ನು ಬಂಗಾರಪೇಟೆ ಪಟ್ಟಣದಲ್ಲಿ ಸ್ವಾಗತಿಸಿ ಬೆಂಗಳೂರಿಗೆ ಬೀಳ್ಕೊಡಲಾಯಿತು.

ಈ ವೇಳೆ ಕಾರ್ಮಿಕರ ಮುಖಂಡ ಶ್ರೀನಿವಾಸ್ ಮಾತನಾಡಿ, ಸೌಲಭ್ಯಗಳಿಲ್ಲದೆ ಗುಲಾಮರಂತೆ ದುಡಿಯುತ್ತಿದ್ದ ಚಿನ್ನದ ಗಣಿ ಕಾರ್ಮಿಕರ ಹೋರಾಟಗಳು ಇಂದಿನ ಕಾರ್ಮಿಕ ವರ್ಗಕ್ಕೆ ಸ್ಪೂರ್ತಿದಾಯಕ.

ಚಿನ್ನದ ಗಣಿ ಕಾರ್ಮಿಕರು ತಮ್ಮ ಹಕ್ಕುಗಳ ಸೌಲಭ್ಯದ ಜೊತೆಗೆ ವಸಾಹತುಶಾಹಿ ಬ್ರಿಟಿಷರ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ನಡೆಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಅಂದಿನ ಸಂದರ್ಭದಲ್ಲಿ ಚಿನ್ನದ ಗಣಿ ಕಾರ್ಮಿಕರ ಹೋರಾಟವು ಇಡೀ ದೇಶಕ್ಕೆ ಸ್ಪೂರ್ತಿದಾಯಕವಾಗಿತ್ತು.1880 ರಲ್ಲಿ ಜಾನ್ ಟೈಲರ್ ಬ್ರಿಟಿಷ್ ಕಂಪನಿಯಿಂದ ಆರಂಭಿಸಲ್ಪಟ್ಟು  ಚಿನ್ನದ ಗಣಿಯಲ್ಲಿ ಕೆಲಸ ಮಾಡಲು ತಮಿಳುನಾಡಿನಿಂದ ಭೂಹಿನ ದಲಿತ ಕೃಷಿ ಕೂಲಿಕಾರರನ್ನು ಕರೆ ತಂದು ದುಡಿಸಿಕೊಳ್ಳಲಾಗುತ್ತಿತ್ತು.

ಹಿರಿಯ ಕಾರ್ಮಿಕ ಮುಖಂಡ ಪಿ. ರಾಮಮೂರ್ತಿರವರ ಮಾರ್ಗದರ್ಶನದಲ್ಲಿ ಕಾಂ. ಕೆ. ಎಸ್. ವಾಸನ್, ಕಾಂ. ವಿ. ಎಂ. ಗೋವಿಂದನ್ ನೇತೃತ್ವದಲ್ಲಿ 1940ರ ವೇಳೆಗೆ ಕೆoಬಾವುಟದ ಕಾರ್ಮಿಕ ಸಂಘವು ರಚನೆಯಾಯಿತು.

 

ಇದಕ್ಕೂ ಮುನ್ನ ಸುಮಾರು 60 ವರ್ಷಗಳ ಕಾಲ ಸಂಘವಿಲ್ಲದೆ ಅಮಾನವಿಯ ಶೋಷಣೆಯ ಮಧ್ಯ ಕಾರ್ಮಿಕರು ಕೆಲಸ ಮಾಡಿದರು. ಕಾರ್ಮಿಕ ಸಂಘದ ನಿರಂತರ ಪ್ರಯತ್ನದಿಂದ ಕಾರ್ಮಿಕರು ಕೆಲವು ಸೌಲಭ್ಯಗಳನ್ನು ಮತ್ತು ಹಕ್ಕುಗಳನ್ನು ಪಡೆಯುವ ಜೊತೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ನಡೆಸಿದರು.

ಕಾರ್ಮಿಕರ ನಿರಂತರ ಹೋರಾಟವನ್ನು ಮುರಿಯಲು ಹಲವು ರೀತಿಯಲ್ಲಿ ಪ್ರಯತ್ನ ನಡೆಸಿದ ಆಡಳಿತ  ಮಂಡಳಿಯ ಕಾರ್ಮಿಕ ಮುಖಂಡ ಕಾo ಕೆ. ಎಸ್. ವಾಸನ್ ರವರನ್ನು ಕೊಲೆ ಮಾಡಲು ಪ್ರಯತ್ನ ನಡೆಸಿತ್ತು. ಇದರ ಭಾಗವಾಗಿ ಕಾಂ. ಕೆ.ಎಸ್. ವಾಸಸನ್ ರನ್ನು ಚಾಕುವಿನಿಂದ ಹಿರಿದು ತೀವ್ರವಾಗಿ ನ್ಯಾಯಗೊಳಿಸಲಾಗಿತ್ತು.

ಈ ಘಟನೆಯನ್ನು ಖಂಡಿಸಿ 4ನೇ ನವಂಬರ್ 1946 ರಂದು ಕೆಜಿಎಫ್ ನ ಚೆನ್ನದ ಗಣಿಯ ಎಲ್ಲಾ  ಕಾರ್ಮಿಕರು ಕೆಜಿಎಫ್ ನ ಮಳಿಯಾಳಿ ಮೈದಾನದಲ್ಲಿ ಸೇರಿದ್ದ 10,000 ಕಾರ್ಮಿಕರ ಮೇಲೆ ಪೊಲೀಸರು ಬಾರಿ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದರು.

ಈ ಘಟನೆಯಲ್ಲಿ ಯುವ ಕಾರ್ಮಿಕರಾದ ಕಾಳಿಯಪ್ಪನ್, ಸುಬ್ರಮಣಿ, ರಾಮಸ್ವಾಮಿ, ಚಿನ್ನಪ್ಪನ್, ಕಣ್ಣನ್, ರಾಮಯ್ಯ ಎಂಬ 6 ಕಾರ್ಮಿಕರು ಬಲಿಯಾದರು. ನೂರಾರು ಕಾರ್ಮಿಕರ ತೀವ್ರವಾಗಿ  ಗಾಯಗೊಂಡರಲ್ಲದೇ ಸಾವಿರಾರು ಜನರ ಮೇಲೆ ಕೇಸು ದಾಖಲಿಸಿ ಜೈಲಿಗೆ ಕಳಿಹಿಸಿದ್ದರು.

ಕಾರ್ಮಿಕರ ತಮ್ಮ ನ್ಯಾಯ ಬದ್ಧ ಹಕ್ಕುಗಳನ್ನು ಕೇಳಿದ್ದಕ್ಕೆ ಪ್ರತಿಯಾಗಿ ಆಡಳಿತ ಮಂಡಳಿ ಮತ್ತು ಅಂದಿನ ಬ್ರಿಟಿಷ್ ಸರ್ಕಾರ ಕಾರ್ಮಿಕರ ಮೇಲೆ ನಿರ್ಧಯಿಯಾಗಿ ಗೋಲಿಬಾರ್ ನಡೆಸಿ 6 ಕಾರ್ಮಿಕರು ಕೊಲೆ ಮಾಡಿದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

 

ಈ ಘಟನೆಯ ನಂತರ ಕಾರ್ಮಿಕರಲ್ಲಿ ತಮ್ಮ ಹಕ್ಕುಗಳಿಗೆ ಹೋರಾಟ ನಡೆಸಲು ಪ್ರೇರಣೆ ಆಯಿತು. ಇಂತಹ ಐತಿಹಾಸಿಕ ಸ್ಥಳದಿಂದ ಜನವರಿ 18 ರಿಂದ 22ರ ತನಕ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನಕ್ಕೆ ಕಾರ್ಮಿಕರ ಹುತಾತ್ಮ ಜ್ಯೋತಿಯನ್ನು ಕೊಂಡಯಲಾಗುತ್ತಿದೆ ಎಂದರು.

2014ರ ನಂತರ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವಂತೂ ಕಾರ್ಮಿಕ ವರ್ಗದ ಮೇಲೆ ನೇರ ದಾಳಿಗಳು ನಡೆಸುತ್ತಿದ್ದು ಇದರಿಂದ ಸ್ವಾತಂತ್ರ್ಯ ಪೂರ್ವದಿಂದ ಕಾರ್ಮಿಕ ವರ್ಗ ಸಮರಶೀಲ ಚಳುವಳಿ ಮೂಲಕ ಗಳಿಸಿದ್ದ 29 ಕಾರ್ಮಿಕ ಕಾನೂನುಗಳನ್ನು ನಾಶಗೊಳಿಸಲು ಹುನ್ನಾರ ನಡೆಸುತ್ತಿದೆ.

ಇದರಿಂದಾಗಿ ನಮ್ಮ ದೇಶದ ಕೋಟ್ಯಾಂತರ ಸ್ಕೀo ನೌಕರರು, ಗುತ್ತಿಗೆ, ಹೊರಗುತ್ತಿಗೆ, ಟ್ರೈನಿ, ಅಪ್ರೆಂಟಿಸ್ ಹಾಗೂ ವಲಸೆ ಕಾರ್ಮಿಕರಾಗಿ ದುಡಿಯುತ್ತಿರುವ ಕೋಟ್ಯಾಂತರ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಎಂಬುದು ಗಗನ ಕುಸುಮವಾಗಿದೆ. ಇನ್ನೊಂದೆಡೆ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದ, ಸಾರ್ವಜನಿಕ ಉದ್ಯಮಗಳನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತದೆ.

ಇಂತಹ ಸನ್ನಿವೇಶದಲ್ಲಿ ನಮ್ಮ ದೇಶದ ಕಾರ್ಮಿಕ ವರ್ಗವನ್ನು ಸಂಘಟಿಸುತ್ತಾ, ಅವರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಮತ್ತು ದೇಶದ ಐಕ್ಯ ಚಳುವಳಿಯನ್ನು ಮುನ್ನಡೆಸುತ್ತಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್( ಸಿಐಟಿಯು) 17 ಅಖಿಲ ಭಾರತ ಸಮ್ಮೇಳನವನ್ನು 2023 ಜನವರಿ 18 ರಿಂದ 22ರ ವರೆಗೆ ಕರ್ನಾಟಕದಲ್ಲಿ ಸಂಘಟಿಸಲಾಗುತ್ತಿದೆ.

ಇಂತಹ ಮಹತ್ವದ ಸಮ್ಮೇಳನಕ್ಕೆ ಕೆಜಿಎಫ್ ನಲ್ಲಿ ಹುತಾತ್ಮರಾದ ಚಿನ್ನದ ಗಣಿ ಕಾರ್ಮಿಕರ ಜ್ಯೋತಿಯನ್ನು ಕೊಂಡೊಯ್ಯಲಾಗುತ್ತಿದೆ. ಚಿನ್ನದ ಗಣಿ ಕಾರ್ಮಿಕರಿಗೆ ನೀಡಬೇಕಾದ ನ್ಯಾಯಯುತ ಸೌಲಭ್ಯಗಳನ್ನು ನೀಡಬೇಕು. ಗಣಿಯನ್ನು ಪುನರ್ ಆರಂಭಿಸಬೇಕು. ಕಾರ್ಮಿಕರಿಗೆ ಪರಿಹಾರ ನೀಡಬೇಕು. ಮನೆಗಳನ್ನು ಕಾರ್ಮಿಕರಿಗೆ ಬಿಟ್ಟು ಕೊಡಬೇಕೆಂದು ಒತ್ತಾಯಿಸಿದರು.

ಈ ಕಾರ್ಯಕ್ರಮದಲ್ಲಿ ಕೋಲಾರ ಚಿನ್ನದ ಗಣಿ ಕಾರ್ಮಿಕರ ಸಂಘದ ಹಿರಿಯ ಮುಖಂಡರಾದ ಕಾಂ. ಆನಂದ್ ರಾಜ್, ಮಾಜಿ ಮಾಜಿ ಉಪಾಧ್ಯಕ್ಷರಾದ ಜಿ ಅರ್ಜುನನ್, ಸಿಐಟಿಯು ಜಿಲ್ಲಾ ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಬಿ.ಇ.ಎಂ.ಎಲ್. ಕಾರ್ಮಿಕರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಆರ್ ಬಾಬು, ಕೆಜಿಎಫ್ ನಗರಸಭಾ ಸದಸ್ಯರಾದ ಪಿ. ತಂಗರಾಜ್, ಮುಕಂಡರಾದ ಕೆ. ಗೋವಿಂದ್ ರಾಜ್, ಆರ್. ಜಯರಾಮನ್, ಕೇಶವ ರಾವ್,ಟಿ. ಅಪ್ಪಯ್ಯಣ್ಣ, ಸಿ.ಆರ್, ಮೂರ್ತಿ, ರಾಮಕೃಷ್ಣಪ್ಪ, ಎ. ಪಿಚ್ಚಿಕಣ್ಣು, ಎಂ. ಮೋಹನ್ ಮೊದಲಾದವರು ಭಾಗವಹಿಸಿದಗ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!