ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಪ್ರಪಂಚ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಮದ್ಯ ಖರೀದಿಸುವ ವಯಸ್ಸಿನ ನಿರ್ಬಂಧವನ್ನು 21 ರಿಂದ 18 ವರ್ಷಕ್ಕೆ ಇಳಿಸುವ ಅಬಕಾರಿ ನಿಯಮಗಳ ಆದೇಶವನ್ನು ವಾಪಸ್ ಪಡೆದು ಯುವ ಜನತೆಗೆ ಉದ್ಯೋಗ ಕಲ್ಪಿಸುವಂತೆ ಒತ್ತಾಯಿಸಿ ರೈತಸಂಘದಿಂದ ತಾಲೂಕು ಕಚೇರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಯುವಕರ ಕೈಗೆ ಮದ್ಯ ಕೊಟ್ಟರೆ ಚುನಾವಣೆಗೆ ಮತ ಕೇಳಲು ಬರುವ ಜನಪ್ರತಿನಿಧಿಗಳ ಮೇಲೆ ಪೊರಕೆ ಸೇವೆ ಮತ್ತು
ಮುಖಕ್ಕೆ ಸಗಣಿ ಎರಚುವ ಚಳುವಳಿಯನ್ನು ನಡೆಸುವ ಎಚ್ಚರಿಕೆಯನ್ನು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಎಚ್ಚರಿಕೆ ನೀಡಿದರು.
ಯುವಕರೇ ದೇಶದ ಶಕ್ತಿ. ಜೊತೆಗೆ ತನ್ನ ಕುಟುಂಬದ ಆಧಾರ ಸ್ತಂಭ. ಅಂತಹ ಯುವ ಜನತೆಯನ್ನು ಉದ್ಯೋಗ
ಕಲ್ಪಿಸಿ ಉತ್ತಮ ಪ್ರಜೆಯನ್ನಾಗಿ ಮಾಡಬೇಕಾದ ಸರ್ಕಾರ ಹದಿಹರೆಯದ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿ ಕೊಡುವ
ಮುಖಾಂತರ ದೇಶದ ಭವಿಷ್ಯವನ್ನು ಕಿತ್ತುಕೊಳ್ಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ತಮ್ಮ ಮಗ ವಿದ್ಯಾವಂತನಾಗಿ ದೇಶಕ್ಕೆ ಉತ್ತಮ ಪ್ರಜೆಯಾಗಿ ಕೀರ್ತಿ ತಂದುಕೊಡುತ್ತಾನೆಂಬ ಆಸೆ ಕಂಡಿರುವ ತಂದೆತಾಯಿಗಳಿಗೆ ಸರ್ಕಾರದ ಅಬಕಾರಿ ನೀತಿ ಬದಲಾವಣೆ ಮಾಡುವ ಮುಖಾಂತರ ಯುವಕರ ಭವಿಷ್ಯವನ್ನು ಕಿತ್ತುಕೊಳ್ಳುತ್ತಿರುವುದು ಪ್ರಜಾಪ್ರಭುತ್ವದ ಅಭಿವೃದ್ಧಿಗೆ ಮಾರಕವಲ್ಲವೇ ?.
ಆಹಾರದ ವಿಷಯದಲ್ಲಿ ಸಾತ್ವಿಕ ಥಾಮಸ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವ ಮಠಾಧೀಶರು ಯುವಕರಿಗೆ ಮದ್ಯ ಕುಡಿಸುವ ಸರ್ಕಾರದ ನಿರ್ಧಾರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು.
ಮಾರುಕಟ್ಟೆಯಲ್ಲಿ ಮಾಂಸ ತೂಗು ಹಾಕಲಾಗುತ್ತಿದೆ ಎಂದು ಬಾಯಿ ಬಡಿದುಕೊಳ್ಳುತ್ತಿರುವ ಇವರಿಗೆ ಯುವ ಸಮುದಾಯ ಮದ್ಯ ಮತ್ತು ಗಾಂಜಾದ ಬಲಿಪಶುಗಳಾಗುತ್ತಿದ್ದರೂ ಮಠಾಧಿಪತಿಗಳು ಏಕೆ ಪ್ರಶ್ನಿಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಸರ್ಕಾರದ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಲ್‍ಪಾಲ್, ರೈತಸಂಘದ ರಾಜ್ಯ ಪ್ರ.ಕಾ.ಫಾರೂಖ್ ಪಾಷ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಬಂಗಾರಿ ಮಂಜು, ಜಾವೀದ್, ರಾಜೇಶ್, ಭಾಸ್ಕರ್, ರಾಮೇಗೌಡ, ನಟರಾಜ್, ರಾಜಣ್ಣ, ವಿಶ್ವನಾಥ್, ಕುಮಾರ್, ಜಗದೀಶ್, ವೆಂಕಟರವಣಪ್ಪ, ವೆಂಕಟೇಶಪ್ಪ, ಗುರುಮೂರ್ತಿ, ವಿಶ್ವ, ಪದ್ಮಘಟ್ಟ ಧರ್ಮ, ಹೆಬ್ಬಣಿ ಆನಂದರೆಡ್ಡಿ, ಅಂಬ್ಲಿಕಲ್ ಮಂಜುನಾಥ್, ನಂಗಲಿ ನಾಗೇಶ್, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ ಮೊದಲಾದವರಿದ್ದರು.