• Thu. Apr 18th, 2024

ಸಿದ್ಧರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸಬೇಕು, ಇಲ್ಲೇ ಬೇಯಬೇಕು – ಸಿದ್ಧುಗೆ ವರ್ತೂರ್ ಪಂಥಾಹ್ವಾನ..

PLACE YOUR AD HERE AT LOWEST PRICE

ಮಾಜಿ ಸಿ.ಎಂ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವುದರಿಂದ ಹಿಂದೆ ಸರಿಯಬಾರದು, ಅವರು ನುಡಿದಂತೆ ನಡೆದುಕೊಳ್ಳಬೇಕು, ಅವರು ಕೋಲಾರದಲ್ಲಿ ಪ್ರಚಾರ ಮಾಡಲು ಕಾರ್ಯಕರ್ತರಿಲ್ಲದೆ ಒಬ್ಬಂಟಿಯಾಗಿ ಕರಪತ್ರ ಹಂಚಿ, ಮೂರನೇ ಸ್ಥಾನಕ್ಕೆ ಇಳಿಯಲಿದ್ದಾರೆ ಎಂದು ಮಾಜಿ ಶಾಸಕ ವರ್ತೂರ್ ಪ್ರಕಾಶ್ ವ್ಯಂಗ್ಯವಾಡಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಕುರುಬ ಸಮಾಜ ಹೊಡಿಯಲು ಸಾಧ್ಯವಿಲ್ಲ, ಸಿದ್ಧರಾಮಯ್ಯ ಕೋಲಾರಕ್ಕೆ ಬಂದ್ರೆ ಅವರೇ ಕರಪತ್ರ ಹಂಚುವ ಸ್ಥಿತಿ ಬರುತ್ತೇ, ಸಿದ್ದುಗೆ ೩ನೇ ಸ್ಥಾನ ಎಂದು ವ್ಯಂಗ್ಯವಾಡಿದ ವರ್ತೂರ್ ಪ್ರಕಾಶ್, ಸಿದ್ಧರಾಮಯ್ಯ ಕೋಲಾರದ ಕುರುಬರು ಒಗ್ಗಟ್ಟನ್ನು ಮುರಿಯಲು ಯತ್ನಿಸುತ್ತಿದ್ದಾರೆ, ಅದು ಸಾಧ್ಯವಿಲ್ಲ, ಜಿಲ್ಲೆಯ ಕುರುಬರು ಒಗ್ಗಟ್ಟಿನಿಂದ ಇದ್ದಾರೆ, ಅವರು ಸ್ಥಳೀಯ ಸಮುದಾಯದ ಅಭ್ಯರ್ಥಿಯನ್ನೇ ಬೆಂಬಲಿಸುತ್ತಾರೆ. ಸಿದ್ಧರಾಮಯ್ಯನವರನ್ನು ಕರೆದುಕೊಂಡು ಬರುತ್ತಿರುವ ಶ್ರೀನಿವಾಸಪುರ, ಬಂಗಾರಪೇಟೆ, ಮಾಲೂರು ಶಾಸಕರು ಕೊನೆಗಳಿಗೆಯಲ್ಲಿ ಕೈಕೊಡುತ್ತಾರೆ, ಅವರಿಗೆ ಅವರ ಕ್ಷೇತ್ರದಲ್ಲಿ ಹೊತ್ತಿ ಉರಿಯುವ ಬೆಂಕಿ ಆರಿಸಲು ಆಗದ ಸ್ಥಿತಿಯಲ್ಲಿ ಸಿದ್ಧರಾಮಯ್ಯನವರನ್ನು ಮರೆತುಬಿಡುತ್ತಾರೆ. ಇನ್ನೂ ಕೋಲಾರದ ಶ್ರೀನಿವಾಸಗೌಡರನ್ನು ನೆಚ್ಚಿಕೊಂಡರೆ ಜನ ಅವರ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ ಏಕಾಂಗಿಯಾಗಿ ಕೆಲಸ ಮಾಡಬೇಕಾಗುತ್ತದೆ ಎಂದರು.

ಸಿದ್ಧರಾಮಯ್ಯ ಕುರುಬ ಸಮಾಜದ ಪ್ರಭಾವಿ ಅಹಿಂದಾ ಮುಖಂಡರು ಎಂದು ಬಿಂಬಿಸಿಕೊAಡಿದ್ದಾರೆ, ಆದರೆ, ಅಹಿಂದ ಸಮುದಾಯದ ಬಹುತೇಕ ಮುಖಂಡರನ್ನು ಮುಗಿಸಿದ್ದೇ ಸಿದ್ಧರಾಮಯ್ಯನವರು, ತಮ್ಮ ಸ್ವಾರ್ಥಕ್ಕಾಗಿ ಇಂದು ತಮ್ಮದೇ ಸಮಾಜದ ನನ್ನ ವಿರುದ್ಧ ಸ್ಪರ್ಧೆ ಮಾಡಲು ಕೋಲಾರಕ್ಕೆ ಆಗಮಿಸುತ್ತಿದ್ದಾರೆ. ಅವರು, ತಮ್ಮ ಮಾತಿನಂತೆ ಕೋಲಾರದಿಂದಲೇ ಸ್ಪರ್ಧೆ ಮಾಡಬೇಕು ಯಾವುದೇ ಕಾರಣಕ್ಕೂ ಯೂ ಟರ್ನ್ ತೆಗೆದುಕೊಳ್ಳಬಾರದು ಎಂದು ಸವಲು ಹಾಕಿದರು.

ಕೋಲಾರ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಇಂದು ಸಿದ್ಧರಾಮಯ್ಯರಿಂದ ವರ್ತೂರ್ ಪ್ರಕಾಶ್ ಶಕ್ತಿ ರಾಜ್ಯಕ್ಕೆ ಸ್ಪಷ್ಟವಾಗಲಿದೆ. ಕ್ಷೇತ್ರದಲ್ಲಿ ಮನೆ ಮನೆಗೂ ಬೇಟಿ ನೀಡಿದ್ದೇನೆ. ಎರಡೂವರೆ ಲಕ್ಷ ಮತದಾರರಲ್ಲಿ ಒಂದು ಹತ್ತು ಪರ್ಸೆಂಟ್ ಅತ್ತ ಇತ್ತ ಬದಲಾಗಬಹುದೇ ವಿನಃ ಶೇ. ೯೦ ಭಾಗ ಮತದಾರರು ವರ್ತೂರ್ ಪ್ರಕಾಶ್ ಜೊತೆ ಇದ್ದಾರೆ. ಕಳೆದ ಎರಡು ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಕಾರ್ಯಕ್ರಮಗಳು ನನಗೆ ಶ್ರೀರಕ್ಷೆಯಾಗಲಿದೆ. ಜನರಿಗೂ ಕೆಲಸ ಮಾಡುವವರು ಯಾರು ಎಂದು ತಿಳಿದಿದೆ ಜೊತೆಗೆ ಪ್ರಧಾನಿ ನರೇಂದ್ರಮೋದಿಯವರ ಅಭಿವೃದ್ಧಿಗೆ ಜನ ಬೆಂಬಲ ಅಪಾರವಾಗಿದ್ದು ಈ ಬಾರಿ ಕೋಲಾರದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ತಿಳಿಸಿದರು.

ಇದೇ ವೇಳೆ ಕೆಲವು ಮಾದ್ಯಮಗಳಲ್ಲಿ ಬೈರತಿ ಸುರೇಶ್ ರವರು ವರ್ತೂರ್ ಪ್ರಕಾಶ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಊಹಾಪೋಹಗಳು ಕೇಳಿಬರುತ್ತಿದೆ. ಇದು ಸತ್ಯಕ್ಕೆ ದೂರವಾಗಿದೆ. ಬೈರತಿ ಸುರೇಶ್ ರವರನ್ನು ಬೇಟಿ ಮಾಡಿ ಮೂರು ವರ್ಷಗಳಾಗಿದೆ. ಅಂತೆ ಕಂತೆಗಳನ್ನು ನಂಬುವ ಅಗತ್ಯವಿಲ್ಲ, ವರ್ತೂರ್ ಪ್ರಕಾಶ್ ಟಿಕೆಟ್ ಸಿಗಲಿ ಬಿಡಲಿ, ಬಿಜೆಪಿ ಪಕ್ಷದ ಪರವಾಗಿಯೇ ಕೆಲಸ ಮಾಡುತ್ತಾರೆ ಎಂದು ಊಹಾಪೋಹಗಳಿಗೆ ತೆರೆ ಎಳೆದರು.

ಇನ್ನೂ ಇದೇ ವೇಶ ಮಾತನಾಡಿದ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಿಹಳ್ಳಿ ಮುನಿಯಪ್ಪ ಮಾತನಾಡಿ, ಕುರುಬ ಸಮುದಾಯದ ಶೇಕಡಾ ೯೦ ಪ್ರತಿಷತ ಜನ ವರ್ತೂರ್ ಪ್ರಕಾಶ್ ಜೊತೆ ಇದ್ದಾರೆ, ಜಿಲ್ಲಾ ಕುರುಬರ ಸಂಘದಲ್ಲಿ ೨೧ ಸದಸ್ಯರು ಇದ್ದೀವಿ ಅವರಲ್ಲಿ ೧೮ ಜನ ಸದಸ್ಯರು ವರ್ತೂರ್ ಪ್ರಕಾಶ್ ಬೆಂಬಲಕ್ಕೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಸಮಾಜದ ಜನರು ವರ್ತೂರ್ ಪ್ರಕಾಶ್ ರವರಿಗೆ ಬೆಂಬಲ ನೀಡಲಿದೆ, ಉಳಿದಂತೆ ಬೆರಳೆಣಿಕೆಯಷ್ಟು ಮುಖಂಡರು ಇತರೆ ಪಕ್ಷಗಳಲ್ಲಿ ಇದ್ದಾರೆ ಅಷ್ಟೇ ಆದರೆ ಸಮಾಜದ ಜನರ ಪರವಾಗಿ ನಾವು ತೆಗೆದುಕೊಂಡ ತೀರ್ಮಾನಕ್ಕೆ ಸಮಾಜದ ಜನರ ಮಾನ್ನಣೆ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಗ್ಲಿಸೂರ್ಯಪ್ರಕಾಶ್, ಬಂಕ್ ಮಂಜು, ಅರುಣ್‌ಕುಮಾರ್ ಮೊದಲಾದವರಿದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!