• Fri. Mar 29th, 2024

ಕೋಲಾರದಲ್ಲಿ ಜ.೨೩ರ ಪ್ರಜಾಧ್ವನಿ ಯಾತ್ರೆಗೆ ಭಾರಿ ಸಿದ್ಧತೆಯಲ್ಲಿ ಕಾಂಗ್ರೆಸ್ ಪಕ್ಷ

PLACE YOUR AD HERE AT LOWEST PRICE

 

ಕೋಲಾರದಲ್ಲಿ ಜ.೨೩ರ ಪ್ರಜಾಧ್ವನಿ ಯಾತ್ರೆಗೆ ಭಾರಿ ಸಿದ್ಧತೆಯಲ್ಲಿ ಕಾಂಗ್ರೆಸ್ ಪಕ್ಷನಮ್ಮ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸುರ್ಜಿವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರ ಮುಂದೆ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ತಿಳಿಸಿದರು.

ಶುಕ್ರವಾರ ಕೋಲಾರದ ವಿವಿಧ ವಾರ್ಡುಗಳಲ್ಲಿ ಕಾಂಗ್ರೆಸ್ ಮುಖಂಡರು, ನಗರಸಭಾ ಸದಸ್ಯರು ಹಾಗೂ ಅಲ್ಪಸಂಖ್ಯಾತ ಮುಖಂಡರು ಸಭೆ ನಡೆಸಿದ ಬಳಿಕ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು. ಜನವರಿ ೨೩ರಂದು ಕೋಲಾರದ ಟಮಕ ಸಮೀಪದ ಆರ್.ಎಲ್.ಜಾಲಪ್ಪ ಅತಿಥಿ ಗೃಹ ಪಕ್ಕದ ಮಧುಸೂದನ ಬಸ್ ಮಾಲೀಕ ಅನಂತರಾಜು ಮೈದಾನದಲ್ಲಿ ನಡೆಯಲಿರುವ ಸಮಾವೇಶಕ್ಕೆ ಅಪಾರ ಸಂಖ್ಯೆಯಲ್ಲಿ ಅಲ್ಪ ಸಂಖ್ಯಾತರು ಭಾಗವಹಿಸುವ ಮೂಲಕ ತಮ್ಮ ಬೆಂಬಲವನ್ನು ಸಾಕ್ಷೀಕರಿಸಲಿದ್ದಾರೆ ಎಂದು ನಸೀರ್ ಅಹಮದ್ ಹೇಳಿದರು.

ಈಗಾಗಲೇ ಪ್ರಜಾಧ್ವನಿ ಯಾತ್ರೆಯ ಕೋಲಾರ ಉಸ್ತುವಾರಿ ಹೊತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಆರ್. ಸೀತಾರಾಮ್ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಶಾಸಕರು ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ನಗರ ಪ್ರದೇಶದ ವಾರ್ಡ್ಗಳಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಪೂರ್ವಬಾವಿ ಸಭೆಗಳನ್ನು ನಡೆಸಿ, ಪ್ರಜಾಯಾತ್ರೆಗೆ ಜನರನ್ನು ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಿದ್ಧರಾಮಯ್ಯನವರೇ ಕೋಲಾರದಲ್ಲಿ ಸ್ಪರ್ಧಿಸುತ್ತಿರುವುದರಿಂದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಎಲ್ಲರೂ ಸಮಾವೇಶದಲ್ಲಿ ಭಾಗವಹಿಸಲು ಅತ್ಯಂತ ಉತ್ಸುಕರಾಗಿದ್ದಾರೆ ಎಂದರು.

ಕೋಲಾರ ನಗರಸಭಾ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಮುಬಾರಕ್ ಮಾತನಾಡಿ, ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದ ರಾಷ್ಟಿçÃಯ ನಾಯಕರು, ಬಹುಶಃ ಅವರಿಗೆ ಹಿಂದಿ ಮಾತನಾಡು ಬಂದಿದ್ದರೆ ಇಂದು ಅವರೇ ಪ್ರಧಾನಮಂತ್ರಿ ಅಭ್ಯರ್ಥಿಯಾಗಿರುತ್ತಿದ್ದರು. ಅವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದೇ ಒಂದು ಸಂತೋಷದ ವಿಷಯ. ಸಿದ್ಧರಾಮಯ್ಯ ವಿರುದ್ಧ ಯಾರೇ ನಿಂತರೂ ಸೋಲುತ್ತಾರೆ ಎಂದು ತಿಳಿಸಿದರು. ಮಾಜಿ ಶಾಸಕ ವರ್ತೂರ್ ಪ್ರಕಾಶ್ ಕೋಲಾರದಲ್ಲಿ ಎರಡು ಬಾರಿ ಚುನಾವಣೆ ಗೆದ್ದಾಗಲೂ ಸಿದ್ಧರಾಮಯ್ಯನವರ ಫೋಟೋ ಇಟ್ಟುಕೊಂಡೇ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರು. ಇಂದು ಸಿದ್ಧರಾಮಯ್ಯ ಖುದ್ದು ಸ್ಪರ್ಧೆ ಮಾಡುತ್ತಿದ್ದಾರೆಂದರೆ ವರ್ತೂರು ಹೇಳಲು ಹೆಸರಿಲ್ಲದೆ ಹೋಗುತ್ತಾರೆ ಎಂದರು.

ಮಾತೆತ್ತಿದರೆ ಅಲ್ಪಸಂಖ್ಯಾತರ ಮತ ಬೇಡ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ, ಎರಡು ಬಾರಿ ಗೆದ್ದಾಗಲೂ ಮುಸಲ್ಮಾನರು ಕಡಿಮೆ ಸಂಖ್ಯೆಯಲ್ಲಿ ಮತ ಚಲಾವಣೆ ಮಾಡಿದ್ದರು, ಈಗ ಬಿಜೆಪಿ ಪಕ್ಷಕ್ಕೆ ಹೋಗಿದ್ದಾರೆ ಇವರಿಗೆ ಯಾವ ಮುಸಲ್ಮಾನ ಮತ ಹಾಕುತ್ತನೆ, ಮೊದಲಿಗೆ ಅವರಿಗೆ ಬಿಜೆಪಿ ಪಕ್ಷ ಟಿಕೆಟು ಕೊಡೋದೆ ಗ್ಯಾರಂಟಿ ಇಲ್ಲಾ, ಅವರ ಟಿಕೆಟ್ ವಿಚಾರ ತ್ರಿಶಂಕು ಸ್ಥಿತಿಯಲ್ಲಿರುವಾಗಲೇ ಅವರನ್ನು ಬೆಂಬಲಿಸುತ್ತಾರಾ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಅಬ್ದುಲ್ ಖಯ್ಯುಂ, ಇಕ್ಬಾಲ್ ಅಹ್ಮದ್, ಅಥಾವುಲ್ಲಾ, ವಕ್ಫ್ ಬೋರ್ಡ್ ಅಧ್ಯಕ್ಷ ಇದಾಯತ್, ಅಸ್ಲಂ, ಅಯ್ಯೂಬ್, ಹನೀಫ್, ಬಾಬ್‌ಜಾನ್, ಖದೀರ್, ಸಚಿನ್, ಅಪ್ರೋಜ್ ಪಾಷಾ ಮೊದಲಾದವರು ಇದ್ದರು.

ಕಾಂಗ್ರೆಸ್ ಪಕ್ಷದಲ್ಲೂ ಒಳಗೂ ಆರ್.ಎಸ್.ಎಸ್. ಇದೆ:
ಕಾಂಗ್ರೆಸ್ ಪಕ್ಷದಲ್ಲೂ ಮೇಮೇಲೆ ಬಿಳಿ ಶರ್ಟು ಪ್ಯಾಂಟು ಹಾಕಿಕೊಂಡoತೆ ಕಾಣಿಸಿದರೂ, ಒಳಗೆ ಬನಿಯನ್ ಮತ್ತು ಚಡ್ಡಿ ಆರ್.ಎಸ್.ಎಸ್.ದು ಹಾಕಿಕೊಂಡಿದ್ದಾರೆ. ಆದಷ್ಟು ಬೇಗ ಅವುಗಳನ್ನು ಪಕ್ಷದ ಹಿರಿಯರು ಕಳುಚುತ್ತಾರೆ

– ಬಿ.ಎಂ.ಮುಬಾರಕ್, ಹಾಲಿ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು. ನಗರಸಭೆ, ಕೋಲಾರ.

ಸಿ.ಎಂ. ಇಬ್ರಾಹೀಂ ಅಲ್ಪಸಂಖ್ಯಾತರ ನಾಯಕರು ಅಲ್ಲಾ :
ಸಿ.ಎಂ. ಇಬ್ರಾಹೀಂ ಅಲ್ಪಸಂಖ್ಯಾತರ ನಾಯಕರಲ್ಲಾ, ಅವರು, ಹೇಳುವ ಪ್ರಕಾರ ಜೆಡಿಎಸ್ ಪಕ್ಷಕ್ಕೇ ಅಲ್ಪಸಂಖ್ಯಾರು ಬೆಂಬಲ ಸೂಚಿಸುತ್ತಾರೆ ಎಂಬುದಲ್ಲಾ ಊಹಾಪೋಹಗಳು ಅಷ್ಟೇ. ಇಬ್ರಾಹೀಂ ನಿಜವಾಗಲೂ ಅಲ್ಪಸಂಖ್ಯಾತರ ನಾಯಕರಾಗಿದ್ದರೆ, ಅವರ ಸ್ವಕ್ಷೇತ್ರವಾದ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ೨೦೧೩ರಲ್ಲಿ ನಡೆದ ಚುನಾವಣೆಯಲ್ಲಿ ಅಲ್ಲಿನ ೬೦ ಸಾವಿರ ಮತದಾರರಲ್ಲಿ ಕೇವಲ ೨೦ ಸಾವಿರ ಮತಗಳು ಮಾತ್ರ ಅವರಿಗೆ ಬಂದವು. ಇನ್ನುಳಿದ ೪೦ ಸಾವಿರ ಅಲ್ಪಸಂಖ್ಯಾತರ ಮತಗಳು ಅವರ ವಿರುದ್ಧ ಚಲಾವಣೆಗೊಂಡಿದ್ದು ಯಾಕೆ. ತಮ್ಮ ಸ್ವಂತ ಊರಿನಲ್ಲೇ ಅಲ್ಪಸಂಖ್ಯಾತರ ನಾಯಕರಾಗದ ಅವರು, ಕೋಲಾರದ ಅಲ್ಪಸಂಖ್ಯಾತರಿಗೆ ಹೇಗೆ ನಾಯಕರಾಗುತ್ತಾರೆ ಎಂದು ಪ್ರಶ್ನಿಸಿದ ಅವರು, ಬಾಯಿ ಇದೆ ಅಂತ ಏನೆಂದರೆ ಅದು ಮಾತನಾಡಬಾರದು, ಗ್ರೌಂಡ್‌ನಲ್ಲಿ ರಿಯಾಲಿಟಿಯನ್ನು ತೋರಿಸಬೇಕು.

ನಸೀರ್ ಅಹಮದ್, ವಿಧಾನ ಪರಿಷತ್ ಸದಸ್ಯರು.

 

 

Leave a Reply

Your email address will not be published. Required fields are marked *

You missed

error: Content is protected !!