• Sat. Apr 20th, 2024

ಮೆಥೋಡಿಸ್ಟ್ ಕ್ರೈಸ್ತ ಸಭಿಕರಿಂದ ಕರಾಳ ದಿನಾಚರಣೆ

PLACE YOUR AD HERE AT LOWEST PRICE

ಕೋಲಾರ ನಗರ ಭಾರತೀಯ ಮೆಥೋಡಿಸ್ಟ್ ದೇವಾಲಯದ ಕೆಲವು ಕ್ರೈಸ್ತ ಸಭಿಕರು ಭಾನುವಾರ ಕರಾಳ ದಿನಾಚರಣೆಯನ್ನು ಆಚರಿಸಿದರು.

ಮೆಥೋಡಿಸ್ಟ್ ಚರ್ಚ್ ಮೇಲ್ವಿಚಾರಕ ಹುದ್ದೆಯನ್ನು ರೆವರೆಂಡ್ ಪಿ.ಶಾಂತಕುಮಾರ್ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.

ಇದು ಪರಿಶುದ್ಧ ದೇವಾಲಯ, ಕಳ್ಳರಗವಿಯಲ್ಲ, ಇದು ಪರಿಶುದ್ಧ ದೇವಾಲಯ ವ್ಯಾಪಾರ ಸ್ಥಳವಲ್ಲ, ಮೆಥೋಡಿಸ್ಟ್ ಸಭೆಗೆ ಸಂಬಂಧಪಟ್ಟ ಆಸ್ತಿಗಳಾದ ಟ್ಯಾಬ್ಲೆಟ್ ಇಂಡಸ್ಟ್ರಿಸ್ ಸ್ಥಳ, ಇಟಿಸಿಎಂ ಆಸ್ಪತ್ರೆ, ಮೆಥೋಡಿಸ್ಟ್ ಶಾಲೆ, ಹಾಲಿಸ್ಟರ್ ಸಮುದಾಯ ಭವನ, ಬಾಲ್ಡ್‌ವಿನ್ ಶಾಲೆ ಮತ್ತು ಸಭೆಯಿಂದ ಬರುವ ಕಾಣಿಕೆಗಳನು ದುರುಪಯೋಗಿಸಿಕೊಳ್ಳಲಾಗುತ್ತಿದೆಯೆಂದು ಪ್ರತಿಭಟನಾಕಾರ ಕ್ರೈಸ್ತರು ಆರೋಪಿಸಿದರು.

ಕಳೆದ ೧೧೨ ದಿನಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದಕಾರಣದಿಂದ ಜ.೨೨ ರ ಭಾನುವಾರ ಕರಾಳದಿನಾಚರಣೆ ಆಚರಿಸಲಾಗುತ್ತಿದೆಯೆಂದು ಪ್ರತಿಭಟನಾಕಾರರು ವಿವರಿಸಿದರು.

ಚರ್ಚ್ ಆವರಣದಲ್ಲಿಯೇ ಕುಳಿತು ಪ್ರತ್ಯೇಕವಾಗಿ ಪ್ರಾರ್ಥನೆ ನಡೆಸುವ ಮೂಲಕ ರೆವರೆಂಡ್ ಶಾಂತಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಚರ್ಚ್‌ನ ಪ್ರಾರ್ಥನಾ ಕೂಟವನ್ನು ಪ್ರತಿಭಟನಾಕರರು ಬಹಿಷ್ಕರಿಸಿ ಹಲವಾರು ವಾರಗಳಿಂದಲೂ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ನ್ಯಾಯ ಸಿಗುವವರೆವಿಗೂ ಹೋರಾಟ ಮುಂದುವರೆಸುವುದಾಗಿ ಪ್ರತಿಭಟನಾನಿರತ ಕುಟುಂಬಗಳು ಎಚ್ಚರಿಸಿವೆ.

 

 

Related Post

2024ರ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ – ಎಂ.ಎಲ್.ಸಿ. ಸುಧಾಮದಾಸ್
ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,

Leave a Reply

Your email address will not be published. Required fields are marked *

You missed

error: Content is protected !!