• Thu. Apr 25th, 2024

ಖಾವಿಗೆ ಮೆರಗು ತಂದಕೊಟ್ಟ ತ್ರಿವಿದ ದಾಸೋಹಿ ಶ್ರೀ ಶಿವಕುಮಾರ್‌ಸ್ವಾಮೀಜಿ – ನಾಗಾನಂದ ಕೆಂಪರಾಜು

PLACE YOUR AD HERE AT LOWEST PRICE

ಖಾವಿಗೆ ಮೆರಗು ತಂದಕೊಟ್ಟ ತ್ರಿವಿದ ದಾಸೋಹಿ ಶ್ರೀಶ್ರೀಶ್ರೀ ಶಿವಕುಮಾರ್‌ಸ್ವಾಮೀಜಿ ಅದರ್ಶ ವ್ಯಕ್ತಿಗಳಿಗೆ ಎಂದಿಗೂ ಸಾವಿಲ್ಲ ಎಂಬುವುದನ್ನು ನಿರೂಪಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜು ತಿಳಿಸಿದರು.

ನಗರದ ಗಾಂಧಿವನದಲ್ಲಿ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ೪ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಆಯೋಜಿಸಿದ್ದ ಪುಷ್ಪನಮನ ಮತ್ತು ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿವಕುಮಾರಸ್ವಾಮೀಜಿಯವರು ತಮ್ಮ ಇಡೀ ಜೀವನದಲ್ಲಿ ಅನ್ನ, ಅಕ್ಷರ, ಅಶ್ರಯ ಕ್ರಾಂತಿ ಮಾಡುವ ಮೂಲಕ ಕೈಲಾಸವನ್ನು ಕಾಯಕದಲ್ಲಿ ಕಾಣು ಎಂಬುವುದನ್ನು ಸಮಾಜಕ್ಕೆ ತೋರಿಸಿ ಕೊಟ್ಟರು. ಬಸವಣ್ಣನವರ ವಚನಗಳನ್ನು ನಿಜರೂಪಕ್ಕೆ ತಂದು ಕೊಟ್ಟಂತಹ ಮಹಾನ್ ದೈವ ಪುರುಷರು. ಇವರಿಗೆ ಸರ್ಕಾರವು ಅಧುನಿಕ ಬಸವಣ್ಣ, ಪದ್ಮವಿಭೂಣ, ಕರ್ನಾಟಕ ರತ್ನ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಿರುವುದು ಸೇವೆಗೆ ಸಿಕ್ಕ ಗೌರವಾಗಿದೆ ಎಂದರು.

ಇದೇ ರೀತಿ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ಅವರು ನಮ್ಮ ಕಣ್ಣಿಗೆ ಕಂಡ0ತ ಮತ್ತೊಬ್ಬ ನಡೆದಾಡುವ ದೇವರು, ಸಿದ್ದೇಶ್ವರಸ್ವಾಮೀಜಿಯವರು ಅಗಲಿದ ನಂತರ ಅವರ ಪ್ರವಚನಗಳು ಎಷ್ಟು ಶ್ರೀಮಂತವಾಗಿತ್ತು ಎಂಬ ಅರಿವು ಸಮಾಜಕ್ಕೆ ತಿಳಿಯಿತು. ಸಮಾಜದಲ್ಲಿಂದು ಖಾವಿ ಪರಂಪರೆಯನ್ನು ದುರ್ಬಳಸಿಕೊಳ್ಳುವ ಕಾಲಘಟ್ಟದಲ್ಲಿ ಇಬ್ಬರು ಮಹನೀಯರು ಸಮಾಜಕ್ಕೆ ಸಲ್ಲಿಸಿರುವಂತಹ ಮಹಾನ್ ಸೇವೆಗಳು, ವಿಶ್ವದಲ್ಲಿಯೇ ಖಾವಿಗೆ ಮೆರಗು ತಂದು ಕೊಟ್ಟಿದೆ. “ಧರ್ಮ ಮುಖ್ಯವಲ್ಲ ದಯೆ ಮುಖ್ಯ-ಕೈಲಾಸ ಮುಖ್ಯವಲ್ಲ ಕಾಯಕ ಮುಖ್ಯ” ಎಂಬುವುದನ್ನು ತೋರಿಸಿ ಕೊಟ್ಟಂತಹ ಮಹನೀಯರ ಆಚಾರ,ವಿಚಾರಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಆಳವಡಿಸಿ ಕೊಳ್ಳುವುದು ಅದ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕೆ.ಯು.ಡಿ.ಎ. ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ನಡೆದಾಡುವ ದೇವರು ಎಂದೇ ಪ್ರಚಲಿತರಾಗಿರುವ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶಿವಕುಮಾರಸ್ವಾಮೀಜಿಗಳು ಕೋಲಾರದ ಬಿ.ಆರ್.ಮುನಿಯಪ್ಪ ಅವರ ಮನೆಗೆ ಪಾದಪೂಜೆಗೆ ಬಂದಿದ್ದಾಗ ನನಗೂ ಆಹ್ವಾನವಿತ್ತು. ಈ ಸಂದರ್ಭದಲ್ಲಿ ನನಗೆ ಶ್ರೀಗಳ ಪಾದಸ್ವರ್ಶವನ್ನು ಮಾಡುವ ಅವಕಾಶ ಸಿಕ್ಕಿದ್ದು ನನ್ನ ಜೀವನ ಪಾವನ ಮಾಡಿಕೊಂಡ0ತ ತೃಪ್ತಿ ನನಗಿದೆ. ಇದೇ ರೀತಿ ಸಿದ್ದೇಶ್ವರಸ್ವಾಮಿಗಳು ಸಹ ಯಾವೂದೇ ಆಡಂಬರಗಳಿoದ ಸರಳತೆ ಸ್ವಾಮೀಜಿಗಳಾಗಿದ್ದು ಅವರ ನೀಡುತ್ತಿದ್ದ ಪ್ರವಚನವು ವಿಶ್ವ ಪ್ರಸಿದ್ದಿಯಾಗಿತ್ತು, ಶಿವಕುಮಾರ ಸ್ವಾಮೀಜಿ ಹಾಗೂ ಸಿದ್ಧೇಶ್ವರ ಸ್ವಾಮಿಜಿಗಳ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಪ್ರಾಂಶುಪಾಲ ರುದ್ರಪ್ಪ ಅವರು ಸ್ವಾಗತಿಸಿ ಮಾತನಾಡಿ, ಇ.ಟಿ.ಸಿ.ಎಂ. ಪಕ್ಕದ ರಸ್ತೆಗೆ ಶಿವಕುಮಾರಸ್ವಾಮಿಜೀ ರಸ್ತೆಯೆಂದು ಹಾಗೂ ಗಾಂಧಿವನದ ಹಿಂಭಾಗದ ರಸ್ತೆಯಿಂದ ಪ್ರವಾಸಿ ಮಂದಿರದ ವೃತ್ತದವರೆಗೆ ಬಸವೇಶ್ವರ ರಸ್ತೆ ಎಂದು ನಾಮಕರಣ ಮಾಡಬೇಕೆಂದು ಈ ಸಂದರ್ಭದಲ್ಲಿ ನಗರಸಭೆಗೆ ಒತ್ತಾಯಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ಸಚ್ಚಿದಾನಂದ ಹಾಗೂ ಚಂದನ್ ವಹಿಸಿದ್ದರು.ಶ್ರೀ. ಶಿವಶಂಕರ್‌ಶಾಸ್ತಿç ಮತ್ತು ಶ್ರೀ.ಮಹೇಶ್ ಸ್ವಾಮೀಜಿಗಳಿಂದ ಪೂಜೆ ನೆರವೇರಿಸಲಾಯಿತು.ಕಾರ್ಯಕ್ರಮದ ಕೊನೆಯ ಭಾಗವಾಗಿ ದಾಸೋಹ ನೆರವೇರಿತು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಿ.ಸುರೇಶ್, ಕೆ.ಬಿ.ಬೈಲಪ್ಪ, ಅಬ್ಬಣಿ ಶಂಕರ್, ವೆಂಕಟಕೃಷ್ಣಪ್ಪ, ನಿವೃತ್ತ ಎ.ಎಸ್.ಐ.ಅಶ್ವಥ್‌ನಾರಾಯಣ್, ಬಸವರಾಜ್. ಎ.ಎಸ್.ಐ.ಶೇಖರಪ್ಪ, ವಕೀಲರಾದ ಕಂಜನೇತ್ರಿ, ವರ್ಷ ಕಿತ್ತೂರ್, ನಂದೀಶ್, ಯಲವಾರ ಪ್ರಕಾಶ್, ಶಿವಕುಮಾರ್, ಪುಟ್ಟಣ್ಣ, ನಂಜೇದೇವರು, ಸಾ.ಮ.ಬಾಬು ಮುಂತಾದವರು ಭಾಗವಹಿಸಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!