• Thu. Sep 28th, 2023

ಕೆಜಿಎಫ್‌ನಲ್ಲಿ ಒಪನ್ ಕಾಸ್ಟ್ ಮೈನ್ಸ್ ಗೆ ನಿವೃತ್ತ ಹಿರಿಯ ನೌಕರರ ಸಲಹೆ ನೀಡಿದ್ದಾರೆ:MP ಎಸ್. ಮುನಿಸ್ವಾಮಿ.

PLACE YOUR AD HERE AT LOWEST PRICE

 ಕೆಜಿಎಫ್‌ನಲ್ಲಿ ಒಪನ್ ಕಾಸ್ಟ್ ಮೈನ್ಸ್‌ಗೆ   ಸಂಸದ ಎಸ್. ಮುನಿಸ್ವಾಮಿ ಒಲವು ವ್ಯಕ್ತಪಡಿಸಿದ್ದು ಒಪನ್ ಕಾಸ್ಟ್ ಮೈನ್ಸ್ ಮಾಡಲು ಹಿರಿಯ ಬಿಜಿಎಂಎಲ್ ಕಾಮಿ೯ಕರು ಅಭಿಪ್ರಾಯ ವ್ಯಕ್ತಪಡಿಸಿದ್ದು ಅದರಂತೆ ಅಧಿಕಾರಿಗಳು ಪ್ರಸ್ಥಾವನೆ ಸಲ್ಲಿಸಲಾಗಿದೆ ಎಂದರು.
ಕಮ್ಮಸಂದ್ರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅಂದಾಜು 75 ಲಕ್ಷ ವೆಚ್ಚದಲ್ಲಿ ನಿಮೀ೯ಸಲಾಗಿರುವ ನೂತನ ಕಟ್ಟಡ,ಕಲ್ಯಾಣಿ,ರಾಜೀವ್ ಗಾಂದಿ ಸೇವಾ ಕೇಂದ್ರ,ಸಫಲಮ್ಮ,ಓಂಶಕ್ತಿ ದೇವಾಲಯ ಲೋಕಾ೯ಪಣೆ ಕಾಯ೯ಕ್ರಮದಲ್ಲಿ ಭಾಗವಹಿಸಿ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
 ಕೆಜಿಎಫ್‌ನಲ್ಲಿ ಓಪನ್ ಕಾಸ್ಟ್ ಮೈನ್ಸ್ ಮಾಡಲಾಗುವುದು ಎಂದು ಇತ್ತೀಚೆಗೆ ಸಂಸದರು ಹೇಳಿಕೆ ನೀಡಿದ್ದು ಅದರ ವಿರುದ್ದ ಕೆಜಿಎಫ್‌ನ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಂಸದ ಎಸ್.ಮುನಿಸ್ವಾಮಿ ನಿವೃತ್ತ ಹಿರಿಯ ಕಾರ್ಮಿಕರು ಈ ಬಗ್ಗೆ ಸಲಹೆ ನೀಡಿದ್ದಾರೆ.
ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಲು ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!