PLACE YOUR AD HERE AT LOWEST PRICE
ಕೆಜಿಏಫ್ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ 6 ತಿಂಗಳ ಬೆಳವಣಿಗೆ ನೋಡಿ ಭಯದಿಂದ ವಿರೋಧಿ ಪಕ್ಷದವರು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆಂದು ಕೆಜಿಏಫ್ ಕ್ಷೇತ್ರದ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಡಾ.ರಮೇಶ್ ಬಾಬು ಆರೋಪಿಸಿದರು.
ಬೇತಮಂಗಲದಲ್ಲಿ ಜೆಡಿಎಸ್ ಪಕ್ಷದ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ, ಕೆಜಿಎಫ್ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಯಾವ ಮಟ್ಟಕ್ಕೆ ಭಯಗೊಂಡಿದ್ದಾರೆಂದರೆ ಅವರಿಗೆ ನಮ್ಮ ಪಕ್ಷದಲ್ಲಿ ಗೊಂದಲ ಸೃಷ್ಠಿಸುವಷ್ಟು ಭಯ ಸೃಷ್ಠಿಯಾಗಿದೆ ಎಂದರು.
ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳನ್ನು ಮುಂದಿಟ್ಟುಕೊಂಡು ಕ್ಷೇತ್ರದ ಪ್ರತಿಯೊಂದು ಮನೆ- ಮನೆಗೂ ತೆರಳಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ ಎಂದರು.
ಕೆಜಿಎಫ್ ನಗರ ಸಭೆ ಮಾಜಿ ಅಧ್ಯಕ್ಷ ದಯನಂದ್ ಮಾತನಾಡಿ, ಚುನಾವಣೆಗೆ ಕಡಿಮೆ ಸಮಯ ಇರುವುದರಿಂದ ಕಾರ್ಯಕರ್ತರನ್ನು ಹಾಗೂ ಮುಖಂಡರು ಒಗ್ಗಟಿನಿಂದ ಪಕ್ಷದ ಸಂಘಟನೆಗೆ ತೋಡಗಿಸಿಕೊಂಡು ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ, ಪಕ್ಷದ ಯೋಜನೆಗಳ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ರಾಷ್ಟ್ರೀಯ ಪಕ್ಷಗಳ ಮದ್ಯ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಪಕ್ಕಾಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇದ್ದರೆ, ಅದನ್ನು ಬದಿಗೊತ್ತಿ ಪಕ್ಷಕ್ಕಾಗಿ ಒಗ್ಗಟಿನಿಂದ ಶ್ರಮಿಸಿ ಪಕ್ಷವನ್ನು ಬಲ ಪಡಿಸಿಬೇಕು ಎಂದು ಅದೇ ರೀತಿಯಲ್ಲಿ ಪಕ್ಷದ ಅಭ್ಯರ್ಥಿಯೂ ಸಹ
ಕಾರ್ಯಕರ್ತರನ್ನು ಸಹ ಜತೆಗೆ ಸೇರಿಸಿಕೊಂಡು ಪಕ್ಷ ಸಂಘಟಿಸಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ನಲ್ಲೂರು ಚಂಗೇಗೌಡ, ಲಕ್ಷ್ಮೀನಾರಾಯಣ್, ಗ್ರಾಪಂ
ಮಾಜಿ ಉಪಾಧ್ಯಕ್ಷ ಯೋಗೇಶ್, ಗ್ರಾಪಂ ಮಾಜಿ ಸದಸ್ಯರಾದ ಶಿವಣ್ಣ, ಮುಖಂಡರಾದ ಸೀನಪ್ಪ, ಮಂಜುನಾಥ್,
ಬಾಬು, ಸಂತೋಷ್, ಪ್ರಕಾಶಂ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.