• Fri. Mar 29th, 2024

ನಾಗಪುರದ ಸಂವಿಧಾನ ಬೇಕೋ ಭಾರತದ ಅಂಬೇಡ್ಕರ್ ಸಂವಿಧಾನ ಬೇಕೋ-ಸುದರ್ಶನ್

PLACE YOUR AD HERE AT LOWEST PRICE

ನಾಗಪುರದ ಸಂವಿಧಾನ ಬೇಕೋ ಭಾರತದ ಅಂಬೇಡ್ಕರ್ ಸಂವಿಧಾನ ಬೇಕೋ ಎಂಬುದನ್ನು ಜನತೆ ನಿರ್ಧರಿಸಬೇಕಿದೆ. ಜನತೆ ಇತಿಹಾಸವನ್ನು ನೆನಪಿನಲ್ಲಿಟ್ಟುಕೊಂಡಿದ್ದರೆ ಬಿಜೆಪಿಯ ಅಧ್ವಾನದ ಆಡಳಿತ ಬರುತ್ತಿರಲಿಲ್ಲ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್‌ ಹೇಳಿದರು.

 

ಕೋಲಾರದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು, ರಾಜ್ಯ ಮತ್ತು ಕೇಂದ್ರ ಸರಕಾರಗಳ ವೈ-ಲ್ಯಗಳ ವಿರುದ್ಧ ಧ್ವನಿಯಾಗಿ ಕೆಲಸ ಮಾಡಲು ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಪ್ರಜಾಧ್ವನಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ದೂರಿದರು.

ಬಿಜೆಪಿಯಿಂದ ಸಂವಿಧಾನದ ಮೇಲೆ ಸವಾರಿ – ಎಚ್.ಸಿ.ಮಹದೇವಪ್ಪ

ಬಿಜೆಪಿ ವೈ-ಲ್ಯ ಹೇಳಲು ಮಾತ್ರ ಪ್ರಜಾಧ್ವನಿ ಸೀಮಿತವಾಗಿಲ್ಲ, ಸಮೃದ್ಧ ಭಾರತದ ನಿರ್ಮಾಣಕ್ಕಾಗಿ ಸ್ವಾತಂತ್ರ್ಯತಂದು ಕೊಟ್ಟ ಪಕ್ಷ ಕಾಂಗ್ರೆಸ್, ಅಸ್ಪೃಶ್ಯತೆ ನಿವಾರಣೆಯಾಗಬೇಕು, ಕೋಮು ಸೌಹಾರ್ದತೆ ಬೆಳೆಯಬೇಕು, ಸಮಾನತೆ ಮತ್ತು ಸಮಾನ ಅವಕಾಶಗಳ ಸಂವಿಧಾನ ಆಶಯಗಳಡಿ ಸಮೃದ್ಧ ಭಾರತ ನಿರ್ಮಾಣವಾಗಬೇಕು ಎಂದು ಪ್ರತಿಪಾದಿಸಲು ಪ್ರಜಾಧ್ವನಿ ಯಾತ್ರೆ. ೬೦ ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ದೇಶ ಮುಕ್ಕಾಲು ಭಾಗ ಅಭಿವೃದ್ಧಿಯಾಗಿದೆ, ಆದರೆ, ಬಿಜೆಪಿ ಕೋಮುವಾದದ ನಿಲುವಿನ ಮೂಲಕ ಸಂವಿಧಾನದ ಮೂಲಕ ಸವಾರಿ ಮಾಡುತ್ತಿದೆ. ಕಾಂಗ್ರೆಸ್ ೨೦೧೩ ರಿಂದ ೨೦೧೮ ರ ಆಡಳಿತ ಸುಭದ್ರ ಮತ್ತು ಸುಸ್ಥಿರ ಆಡಳಿತ. ಬಿಜೆಪಿ ಪ್ರಜಾಪ್ರಭುತ್ವದ ಕತ್ತು ಹಿಸುಕಿ ಅಧಿಕಾರಕ್ಕೆ ಬಂದಿದೆ ಎಂದು ಟೀಕಿಸಿದರು.

ದಲಿತರ ಶ್ರೇಯಸ್ಸಿಗೆ ಶ್ರಮಿಸಿದ ಸಿದ್ದರಾಮಯ್ಯ ವಿರುದ್ಧ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ, ದಲಿತರು ಕಿವಿಗೊಡುತ್ತಿಲ್ಲ, ಕಾಂಗ್ರೆಸ್‌ ದಲಿತ, ಅಲ್ಪಸಂಖ್ಯಾತ, ಮಹಿಳೆಯರ ಪರವಾಗಿದೆ.

ಕೋಲಾರ ಜಿಲ್ಲೆ ಅಭಿವೃದ್ಧಿಗೆ ಪ್ರಜಾಯಾತ್ರೆ – ಕೊತ್ತೂರು ಮಂಜುನಾಥ್

ಮಾತನಾಡಿ, ಬಿಜೆಪಿ ಸರಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನೋಡಿದರೆ ನೋವಾಗುತ್ತದೆ, ಕೋಲಾರ ಜಿಲ್ಲೆ ಬರ ಪೀಡಿತವಾಗಿದ್ದು, ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಜಾಯಾತ್ರೆ ನಡೆಸಲಾಗುತ್ತಿದೆಯೆಂದು ಬಣ್ಣಿಸಿದರು.

 

Leave a Reply

Your email address will not be published. Required fields are marked *

You missed

error: Content is protected !!