• Wed. Apr 24th, 2024

ನುಡಿದಂತೆ ನಡೆಯುತ್ತೇವೆ ಕಾಂಗ್ರೆಸ್ ಗೆಲ್ಲಿಸಿ – ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

PLACE YOUR AD HERE AT LOWEST PRICE

ನುಡಿದಂತೆನಡೆಯುತ್ತೇವೆ, ೨೦೦ ಯೂನಿಟ್ ವಿದ್ಯುತ್ ಉಚಿತ, ೨ ಸಾವಿರ ಪ್ರತಿ ಮಹಿಳೆಗೆ ನೀಡುತ್ತೇವೆ, ಸಿದ್ದರಾಮಯ್ಯ ಘೋಷಿಸಿದಂತೆ ಪ್ರತಿ ಕುಟುಂಬಕ್ಕೆ ೧೦ ಕೆಜಿ ಅಕ್ಕಿ ನೀಡುತ್ತೇವೆ, ಜನರಿಗೆ ಸಹಾಯಮಾಡಲು ನಿಂತಿದ್ದೇವೆ ಬಿಜೆಪಿಗೆ ಸಹಿಸಲು ಆಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೋಲಾರದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಪ್ರಚಾರ ಮಾಡುತ್ತಿದ್ದೇವೆ, ಕೋಲಾರಚಿಕ್ಕಬಳ್ಳಾಪುರ ೧೧ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.

ಕೋಲಾರ ಇತಿಹಾಸ ಇಡೀ ದೇಶಕ್ಕೆ ಒಂದು ಮಾದರಿ, ನೀವೆಲ್ಲಾ ಶ್ರಮ ಜೀವಿಗಳು, ಬೆಂಗಳೂರು ಕರ್ನಾಟಕಕ್ಕೆ ಹಾಲು, ತರಕಾರಿ, ರೇಷ್ಮೆ ಕೊಡುತ್ತಿದ್ದೀರಿ. ಇಡೀ ರಾಜ್ಯಕ್ಕೆ ದೇಶಕ್ಕೆ ಚಿನ್ನ ಕೊಟ್ಟ ಜಿಲ್ಲೆ. ಹಿರಿಯರ ತ್ಯಾಗ, ಹೋರಾಟ ಮರೆಯಲು ಸಾಧ್ಯವಿಲ್ಲ.

ಲಕ್ಷಾಂತರ ಮಂದಿ ಬೆಂಗಳೂರಿಗೆ ಬಂದು ಉದ್ಯೋಗ ಮಾಡುತ್ತಿದ್ದೀರಿ, ಕೋಲಾರ ಜಿಲ್ಲೆ ಹಸಿರು ಕಂಗೊಳಿಸುತ್ತಿದೆ. ಕಾರಣ ನೀವೆ ಅರ್ಥ ಮಾಡಿಕೊಳ್ಳಿ, ಸಮಸ್ಯೆ ಅರಿತು ಅಭಿಪ್ರಾಯ ತಿಳಿದು ನೋವು ನಲಿವು ಆಚಾರವಿಚಾರ ಅರಿಯಲು
ಡಬಲ್ ಇಂಜಿನ್ ಸರಕಾರ ಇದೆ, ಕೇಂದ್ರದಲ್ಲಿ ಬಲಿಷ್ಠ ಸರಕಾರ, ಇಲ್ಲಿ ಆಪರೇಷನ್ ಲೋಟಸ್ ಸರಕಾರದಿಂದ ಅಭಿವೃದ್ಧಿಯಾಗಿದೆಯೇ, ವಿಮರ್ಶೆ ಮಾಡಲು ರಾಜ್ಯ ಪ್ರವಾಸ ಮಾಡುತ್ತಿದ್ದೇವೆ.

ಜನ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ, ನೋವು ತಿಳಿಸಿದ್ದಾರೆ. ಆಡಳಿತದ ವೈ-ಲ್ಯಗಳನ್ನು ಗಮನಕ್ಕೆ ತಂದಿದ್ದಾರೆ. ಬಲಿಷ್ಠ ಸರಕಾರ, ಅಚ್ಛೇ ದಿನ ಸರಕಾರ ಬಂದಿದೆಯೇ ಕೇಳುತ್ತಿದ್ದೇವೆ, ೧೫ ಜಿಲ್ಲೆ ಪ್ರವಾಸ ಮಾಡಿದ್ದೇವೆ. ಎಲ್ಲಿ ಹೋದರೂ ಜನ ಭಾರೀ ಪ್ರಮಾಣದಲ್ಲಿ ಸೇರುತ್ತಿದ್ದಾರೆ, ಹಾಸನದಲ್ಲಿ ಶಾಸಕರಿಲ್ಲದಿದ್ದರೂ ೧ ಲಕ್ಷ ಮಂದಿ ಬಲ ಪ್ರದರ್ಶನ ಮಾಡಿ ಬದಲಾವಣೆ ಬಯಸುತ್ತಿದ್ದಾರೆ. ಜನ ಸಂತೋಷವಾಗಿಲ್ಲ, ಬಿಜೆಪಿ ೬೦೦ ಭರವಸೆ ನೀಡಿತ್ತು. ೫೦ ಈಡೇರಿಸಿದ್ದಾರೆ. ೫೫೦ ಈಡೇರಿಸಿಲ್ಲ. ಹಿಂದೆ ನಾವು ೧೬೯ ರಲ್ಲಿ ೧೬೫ ಭರವಸೆಯನ್ನು ಸಿದ್ದರಾಮಯ್ಯ ಈಡೇರಿಸಿದ್ದಾರೆ.

ಮುಖ್ಯಮಂತ್ರಿಗೆ ದಿನಕ್ಕೊಂದು ಪ್ರಶ್ನೆ, ಒಂದಕ್ಕೂ ಉತ್ತರ ನೀಡಿಲ್ಲ, ಜೆಡಿಎಸ್ ಬಗ್ಗೆ ಮಾತನಾಡಲ್ಲ, ಜೆಡಿಎಸ್‌ನವರನ್ನು ಕೇಳಿ, ಕೆರೆತುಂಬಿಸುವ ಯೋಜನೆ ಎತ್ತಿನ ಹೊಳೆ ವಿರೋಽಸಿ ರೈತರ ಪರ ಎಷ್ಟು ಪ್ರೀತಿ ಎಂದು ತೋರಿಸಿದ್ದಾರೆ. ಜನರಿಗೆ ಶಕ್ತಿತುಂಬಿ, ಉತ್ತರ ನೀಡಿ ಬಲ ತುಂಬುವುದೇ ಪ್ರಜಾಧ್ವನಿ.

ಡಬಲ್ ಇಂಜಿನ್ ಸರಕಾರದ್ದು ಪಾಪದ ಪುರಾಣವನ್ನು ಭ್ರಷ್ಟಾಚಾರ ಕಳಂಕಿತ ಇತಿಹಾಸವನ್ನು ಕರಪತ್ರ ಮಾಡಿದ್ದೇವೆ ಪ್ರತಿ ಮನೆಗೂ ತಲುಪಿಸಿ, ಶೇ.೪೦ ಪರ್ಸೆಂಟ್ ಕಮೀಷನ್ ರಾಜ್ಯ ಎಂಬ ಹೆಸರು ಬಂದಿದೆ, ಕಳಂಕಿತ ರಾಜ್ಯವಾಗಿದೆ.

ಕೊರೊನಾ ಪರಿಹಾರವಾಗಿ ೨೦ ಲಕ್ಷ ಕೋಟಿ ನಿರ್ಮಲ ಸೀತಾರಾಮ್ ೧೯ ಸಾವಿರ ಕೋಟಿ ಯಡಿಯೂರಪ್ಪ ಘೋಷಣೆ ಯಾರಿಗೂ ಅನುಕೂಲವಾಗಿಲ್ಲ, ೨ ಕೋಟಿ ಉದ್ಯೋಗ ಕೊಡುತ್ತೀವಿ ಎಂದರು ಇಲ್ಲ, ಜೆಡಿಎಸ್ ಬದುಕು ಹಸನುಮಾಡುತ್ತೀವಿ ಎಂದು ಭರವಸೆ ನೀಡಿತ್ತು. ೧೯ತಿಂಗಳು ಅಽಕಾರ ಕೊಟ್ಟರೂ ನಡೆಸಲು ಆಗಲಿಲ್ಲ, ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿ ಮಾಡಿತು, ಎರಡು ಬಾರಿ ಮುಖ್ಯಮಂತ್ರಿ ಮಾಡಿತ್ತು. ನಾವು ಅಂತರ್ಜಲ ಹೆಚ್ಚಿಸಿದ್ದೇವೆ, ಬದುಕು ಬದಲಾವಣೆ ತಂದಿದ್ದೇವೆ.

ನಾ ನಾಯಕಿ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಜನರನ್ನುಸಂಘಟಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರನ್ನು ಅಭಿನಂದಿಸಿದರು.

 

Related Post

ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್
ಬಲಗೈ ಸಮುದಾಯದ ಬಹುಸಂಖ್ಯಾತ ಚಿಕ್ಕತಾಳಿ ಸಮಾಜವನ್ನು ಕಾಂಗ್ರೆಸ್ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ : ಸಮುದಾಯ ಮುಖಂಡರ ಆರೋಪ
ಕೆ.ಹೆಚ್.ಮುನಿಯಪ್ಪ ಬಲಗೈಭಂಟ ಜಿಪಂ ಮಾಜಿ ಸದಸ್ಯ ಎಂ.ರಾಮಚ0ದ್ರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

Leave a Reply

Your email address will not be published. Required fields are marked *

You missed

error: Content is protected !!