• Fri. Apr 19th, 2024

ಶಾಸಕ ನಂಜೇಗೌಡ ಅಭಿವೃದ್ಧಿ ಮಾಡುವಲ್ಲಿ ವಿಫಲ: ಮಾಜಿ ಶಾಸಕ ಮಂಜುನಾಥಗೌಡ ಆರೋಪ.

PLACE YOUR AD HERE AT LOWEST PRICE

ನಂಜೇಗೌಡ  ಮಾಡುವಲ್ಲಿ : ಮಂಜುನಾಥಗೌಡ ಆರೋಪ.
 ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ತಾಲೂಕಿನ ಜನತೆ ಶಾಸಕರಾಗಿ ಆಯ್ಕೆ ಮಾಡಿ ಅವಕಾಶ
ಕಲ್ಪಿಸಿದ್ದರು, ಆದರೆ ಅವರು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಆರೋಪಿಸಿದರು.
ತಾಲೂಕಿನ ಮಾಲೂರು ಹೊಸಕೋಟೆ ರಸ್ತೆಯ
ಯಶವಂತಪುರ ಪ್ಲಾಂಟೇಶನ್ ಬಳಿ ಇರುವ ಆಂಜನೇಯ ಸ್ವಾಮಿ
ದೇವಾಲಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಆಂಜನೇಯ ಸ್ವಾಮಿಗೆ
ವಿಶೇಷ ಪೂಜೆ ಸಲ್ಲಿಸಿ ಇರಬನಹಳ್ಳಿ ಗೇಟ್ ಬಳಿ ಮನೆ ಹಾಗೂ ಕಚೇರಿ
ನಿರ್ಮಾಣಕ್ಕೆ ಖರೀದಿಸಿರುವ ಜಮೀನಿನ ತೋಟದ ಮನೆಯಲ್ಲಿ ಗೋಪೂಜೆ
ನೆರವೇರಿಸಿ ಮಾತನಾಡಿದರು.
ಜನಪ್ರತಿನಿಧಿಗಳಿಗೆ ಅಧಿಕಾರ ಶಾಶ್ವತವಲ್ಲ ಅವರ ಅವಧಿಯಲ್ಲಿ
ಮಾಡಿರುವ ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ
ಶಾಶ್ವತವಾಗಿರುತ್ತದೆ. ಜನಪ್ರತಿನಿಧಿಗಳು ಜನರ ಮನಸ್ಸಿನಲ್ಲಿ
ಮನೆ ಮಾಡಬೇಕು, ಕಳೆದ ವಿಧಾನಸಭಾ ಚುನಾವಣೆಯಲ್ಲಿ
ಸೋತರು ಸಹ ನನ್ನ ಬೆಂಬಲಿಗರ ಜೊತೆ ಇದ್ದೇನೆ.
 ಬೆಂಬಲಿಗರ
ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರ ಕಷ್ಟ
ಸುಖಗಳೊಂದಿಗೆ ಭಾಗಿಯಾಗಿದ್ದೇನೆ. ನಾಲ್ಕು ವರ್ಷಗಳ
ಅವಧಿಯಲ್ಲಿ ತಾಲೂಕು ಆಡಳಿತಕ್ಕೆ ಹಾಗೂ ಹಾಲಿ ಶಾಸಕರಿಗೆ
ಯಾವುದೇ ತೊಂದರೆ ನೀಡಿಲ್ಲ, ಹಾಲಿ ಶಾಸಕರನ್ನು ತಾಲೂಕಿನ ಜನತೆ
ಶಾಸಕರಾಗಿ ಆಯ್ಕೆ ಮಾಡಿ ಐದು ವರ್ಷಗಳ ಅವಕಾಶ ಕಲ್ಪಿಸಿದ್ದರು,
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ
ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಗಮಿಸಿದು,  ಅವರಿಗೆ
ಸ್ವಾಗತ ಬಯಸುತ್ತೇನೆ ಚುನಾವಣೆಗೆ ಎಲ್ಲಾ ಪಕ್ಷಗಳಲ್ಲಿ
ಸ್ಪರ್ಧಿಸುವಂತೆ ಅವರು ಸಹ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ.
ಮಾಜಿ ಸಚಿವ
ವರ್ತೂರ್ ಪ್ರಕಾಶ್ ಅವರು ಸಹ ಕೋಲಾರ ವಿಧಾನಸಭಾ
ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು ಅವರಲ್ಲಿ ಉಮ್ಮಸ್ಸು ಕಾಣುತ್ತಿದೆ,
ಈಗಾಗಲೇ ಅವರು ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸಿದ್ದಾರೆ.
ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಲ್ಲಿ ಯಾವುದೇ
ಗೊಂದಲಗಳಿಲ್ಲ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಪಕ್ಷದ
ಹೈಕಮಾಂಡ್ ಗೆಲ್ಲುವವರೆಗೆ ಬಿ ಫಾರಂ ನೀಡಲಿ ಪ್ರಜಾಪ್ರಭುತ್ವ  ಜನರ ಒಲವು
ಗೌರವ ಉಳಿಸಿಕೊಳ್ಳಬೇಕು ಜನಬೆಂಬಲ ಇದ್ದವರಿಗೆ ರಾಜಕೀಯವಾಗಿ
ಜನರು ಆಶೀರ್ವಾದ ಮಾಡುತ್ತಾರೆ.
ಇತ್ತೀಚಿಗೆ ಕೋಲಾರದ ಬಿಜೆಪಿ ಜಿಲ್ಲಾ
ಕಾರ್ಯಕಾರಿ ಸಮಿತಿ ಸಭೆಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ
ಕಾರ್ಯದರ್ಶಿ ಸಂತೋಷ್‌ಜಿ ಅವರು ಅರ್ಥಪೂರ್ಣವಾಗಿ ಪಕ್ಷವೆಂದರೆ
ಏನು ರಾಜಕೀಯಕ್ಕೆ ಏಕೆ ಬರಬೇಕು ಎಂಬುದು ಸ್ಪಷ್ಟವಾಗಿ ತಿಳಿಸಿದ್ದಾರೆ
ಇದು ಕೆಲವರಿಗೆ ಅರ್ಥವಾಗಬೇಕಾಗಿದೆ ಎಂದು ಮಾರ್ಮಿಕವಾಗಿ
ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಅವರ ಪತ್ನಿ
ಆರಿದ್ರ ಮಂಜುನಾಥ್, ಜಿ ಪಂ ಮಾಜಿ ಸದಸ್ಯ ಚಿನ್ನಸ್ವಾಮಿಗೌಡ, ಪುರಸಭಾ
ಮಾಜಿ ಅಧ್ಯಕ್ಷರಾದ ನೀಲಾಚಂದ್ರ, ವಿಜಯಲಕ್ಷ್ಮಿ, ವಕೀಲರ ಸಂಘದ
ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ಪುರಸಭಾ ಸದಸ್ಯ ಶ್ರೀನಿವಾಸ್,
ಮುಖಂಡರುಗಳಾದ ಪಂಚೆ ನಂಜುಂಡಪ್ಪ, ಕೂರಂಡಹಳ್ಳಿ ರಾಜು,
ಎಂ.ಪಿ.ಚಂದ್ರಶೇಖರ್, ಬೆಳ್ಳಾವಿ ಸೋಮಣ್ಣ, ಪಚ್ಚಪ್ಪ, ಆಲೂರಮೇಶ್,
ರಾಮಮೂರ್ತಿ, ಗೂಡು ದೇವರಾಜ್, ವಿನೋದ್, ಶಂಕರ್,
ಮುನಿಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಆನಂದ್ ರೆಡ್ಡಿ,
ಅಜ್ಮಲ್ ಖಾನ್, ಮಂಜು ತೇಜಸ್, ರಾಮಾಂಜಿ, ಜಗದೀಶ್, ಸೀನಪ್ಪ, ಸುರೇಶ್,
ವಿಜಯಕುಮಾರ್, ಇನ್ನಿತರರು ಹಾಜರಿದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!