• Fri. Apr 19th, 2024

ಪತ್ರಕರ್ತರನ್ನು ದೂರವಿಟ್ಟ ಕಾಂಗ್ರೆಸ್ ಪ್ರಜಾಧ್ವನಿ!

PLACE YOUR AD HERE AT LOWEST PRICE

ನೂರು ವರ್ಷಕ್ಕೂ ಮಿಗಿಲು ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಜ.೨೩ ರಂದು ಸೋಮವಾರ ಕೋಲಾರದಲ್ಲಿ ಪತ್ರಕರ್ತರನ್ನು ದೂರವಿಟ್ಟು ಪ್ರಜಾಧ್ವನಿ ಕಾರ್ಯಕ್ರಮವನ್ನು ನಡೆಸುತ್ತಿದೆ.

ಕೋಲಾರ ನಗರದ ಹೊರವಲಯ ಜಾಲಪ್ಪ ಆಸ್ಪತ್ರೆ ಮುಂಭಾಗದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿರುವ ಜಿಲ್ಲಾ ಕಾಂಗ್ರೆಸ್‌ನ ಯಾವುದೇ ಮುಖಂಡರೂ ಪತ್ರಕರ್ತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಗೋಜಿಗೆ ಹೋಗಿಲ್ಲ.

ಸಾಮಾನ್ಯವಾಗಿ ಯಾವುದೇ ರಾಜಕೀಯ ಪಕ್ಷ ದೊಡ್ಡ ಮಟ್ಟದ ಸಮಾವೇಶ ಸಮ್ಮೇಳನ ನಡೆಸುವ ಸಂದರ್ಭದಲ್ಲಿ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಪ್ರಕಟಿಸುತ್ತದೆ. ಪತ್ರಕರ್ತರು ಮತ್ತು ಸಾರ್ವಜನಿಕರನ್ನು ಮಾಧ್ಯಮಗಳ ಮೂಲಕವೇ ಆಹ್ವಾನಿಸುವ ಪರಂಪರೆ ಇದೆ. ಸುದ್ದಿಗೋಷ್ಠಿ ನಡೆಸಲು ಸಮಯವಿಲ್ಲದಿದ್ದರೆ ಪತ್ರಿಕಾ ಹೇಳಿಕೆಯ ಮೂಲಕವಾದರೂ ಪತ್ರಕರ್ತರು ಮತ್ತು ಸಾರ್ವಜನಿಕರಿಗೆ ಈ ವಿಷಯವನ್ನು ತಿಳಿಸುವ ಪ್ರಯತ್ನ ಮಾಡುತ್ತದೆ.

ಆದರೆ, ಕೋಲಾರದಲ್ಲಿ ಪ್ರಜಾಧ್ವನಿ ನಡೆಯುತ್ತಿದೆಯೆಂದು ಈವರೆವಿಗೂ ಯಾವೊಬ್ಬ ಸ್ಥಳೀಯ ಮುಖಂಡರು ಪ್ರಕಟಣೆ ನೀಡಿಲ್ಲ. ಜ.೯ ರಂದು ಕೋಲಾರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಜ.೨೩ ಕೋಲಾರಕ್ಕೆ ಪ್ರಜಾಧ್ವನಿ ಬಸ್ ಯಾತ್ರೆ ಮೂಲಕ ಆಗಮಿಸುವೆ ಆಗ ಹೆಚ್ಚು ರಾಜಕೀಯ ಭಾಷಣ ಮಾಡುವೆ ಎನ್ನುವುದಷ್ಟೇ ಕೋಲಾರ ಜನತೆಗೆ ಇರುವ ಮಾಹಿತಿ.

ನ.೧೩ ಮತ್ತು ಜ.೯ ರಂದು ಸಿದ್ದರಾಮಯ್ಯಕೋಲಾರಕ್ಕೆ ಬಂದಾಗಲೂ ಸ್ಥಳೀಯ ಮುಖಂಡರು ಇದೇ ರೀತಿ ವರ್ತನೆ ತೋರಿದ್ದರು. ಆದರೂ, ಮಾಜಿ ಮುಖ್ಯಮಂತ್ರಿಯ ಭೇಟಿ ಎಂಬ ಕಾರಣಕ್ಕೋ ಅಥವಾ ಪತ್ರಿಕಾ ಕಚೇರಿಗಳ ಒತ್ತಡದ ಮೇರೆಗೂ ಪತ್ರಕರ್ತರು ಸುದ್ದಿಯನ್ನು ಮಾಡಲು ಇಡೀ ದಿನ ಸಿದ್ದರಾಮಯ್ಯ ಹಿಂದೆ ಸುತ್ತಾಡಿದ್ದರು.

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸುತ್ತಿದ್ದಂತೆಯೇ ಗೆದ್ದೇ ಬಿಟ್ಟಿವೆಂದು ಭಾವಿಸಿರುವ ಕಾಂಗ್ರೆಸ್ ನಾಯಕರು ಪತ್ರಕರ್ತರಿಗೂ ಆಹ್ವಾನ ನೀಡದೆ ಪ್ರಜಾಧ್ವನಿ ಮಾಡಲು ಮುಂದಾಗಿದ್ದಾರೆ.

ಕೋಲಾರ ಪತ್ರಕರ್ತರಿಗೆ ಪ್ರಜಾಧ್ವನಿಗೆ ಆಹ್ವಾನ ಇಲ್ಲ ವೆಂಬ ವಿಚಾರ ಕೋಲಾರ ಪತ್ರಕರ್ತರ ಸಂಘದ ಸಂದೇಶದ ಮೂಲಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಅಸಮಾಧಾನ ಹೊರ ಹಾಕಿದ್ದಾರೆ. ಇದಕ್ಕೆ ಇತರೇ ಪತ್ರಕರ್ತರು ಪ್ರತಿಕ್ರಿಯೆ ನೀಡುವ ಮೂಲಕ ಕಾಂಗ್ರೆಸ್‌ನ ಪತ್ರಕರ್ತರ ವಿರೋಧಿ ಧೋರಣೆಯನ್ನು ಟೀಕಿಸಿದ್ದಾರೆ.


ಪ್ರಜಾಧ್ವನಿಗೆ ಎರಡು ದಿನ ಮುಂಚಿತವರೆವಿಗೂ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಲ್ಲದೆ ಅನಾಥವಾಗಿತ್ತು. ಕಾಂಗ್ರೆಸ್‌ಗೆ ಈಗ ಮಾಲೂರಿನ ಲಕ್ಷ್ಮೀನಾರಾಯಣ ಅಧ್ಯಕ್ಷರಾಗಿದ್ದಾರೆ. ಹೊಸ ಅಧ್ಯಕ್ಷರಾದರೂ ಕಾಂಗ್ರೆಸ್‌ನ ಈ ಪತ್ರಕರ್ತರ ವಿರೋಧಿ ಧೋರಣೆಯನ್ನು ಬದಲಾಯಿಸುತ್ತಾರೋ ಇಲ್ಲ ಕೋಲಾರದಿಂದ ಸ್ಪರ್ಧಿಸಲು  ಮುಂದಾಗಿರುವ ಸಿದ್ದರಾಮಯ್ಯನವರೇ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಬುದ್ಧಿ ಹೇಳುತ್ತಾರೋ ಕಾದು ನೋಡಬೇಕು.

ನಾಡ ಕಟ್ಟಲು ಧ್ವನಿ ಏರಿಸಿ, ಕರುನಾಡಿಗಾಗಿ ಕೈಜೋಡಿಸಿ ಎಂಬುದು ಪ್ರಜಾಧ್ವನಿಯ ಘೋಷವಾಕ್ಯಆದರೆ, ಕೋಲಾರ ಕಾಂಗ್ರೆಸ್ ಮಹಾನ್ ನಾಯಕರು ಕನಿಷ್ಠ ಪತ್ರಕರ್ತರೊಂದಿಗೆ ಕೈಜೋಡಿಸಲು ಸಾಧ್ಯವಾಗುತ್ತಿಲ್ಲ ಇನ್ನೂ ಮತದಾರರೊಂದಿಗೆ ಹೇಗೆ ಕೈಜೋಡಿಸುತ್ತಾರೆ, ತಮ್ಮ ನಾಯಕ ಸಿದ್ದರಾಮಯ್ಯರನ್ನು ಹೇಗೆ ಗೆಲ್ಲಿಸಿಕೊಳ್ಳುತ್ತಾರೋ ಎಂಬುದು ಚರ್ಚೆಯ ವಿಚಾರವಾಗಿದೆ.

 

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!