• Wed. Apr 24th, 2024

ಬೇತಮಂಗಲ ಗ್ರಾಪಂನಿಂದ ಜ-25ಕ್ಕೆ ಕಟ್ಟಡದ ಸಲಕರಣೆ ಹರಾಜು.

PLACE YOUR AD HERE AT LOWEST PRICE

ಹಳೇ ಮದ್ರಾಸ್ ರಸ್ತೆ ಅಗಲೀಕರಣ ಮಾಡುತ್ತಿದ್ದು, ಹಳೇ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿನ ಹಲವು ಸಾಮಗ್ರಿಗಳನ್ನು ಜ.25ರ  ಬೆಳಗ್ಗೆ 11 ಗಂಟೆಗೆ ಹರಾಜು ಪ್ರಕ್ರಿಯೆ ಇದ್ದು, ಬಿಡ್‍ದಾರರು ಭಾಗವಹಿಸಲು ಗ್ರಾಪಂ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹಳೇ ಗ್ರಾಪಂ ಕಟ್ಟಡದಲ್ಲಿ ಬಾಡಿಗೆಗೆ ಇದ್ದ ವಾಣಿಜ್ಯ ಮಳಿಗೆಗಳನ್ನು ಸಹ ಖಾಲಿ ಮಾಡಲು ಗ್ರಾಪಂಯಿಂದ ನೋಟೀಸ್ ಜಾರಿ ಮಾಡಿದರು. ಸುಮಾರು ದಶಕಗಳ ಹಳೆ ಮದ್ರಾಸ್ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯಿಂದ ಒತ್ತುವರಿದಾರರಿಗೂ ನೋಟಿಸ್ ನೀಡಿ ತೆರವುಗೋಳಿಸಲಾಗಿದೆ.
ಕಾಮಗಾರಿಯೂ ಸಹ ಅರ್ಧ ನಡೆದಿದ್ದು, ಇನ್ನು ಕೆಲವು ಅಂಗಡಿಗಳನ್ನು ತೆರವುಗೊಳಿಸಬೇಕಿದ್ದು, ಶೀಘ್ರದಲ್ಲೇ ರಸ್ತೆ ಡಾಂಬರೀಕರಣ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಮತಾ ಗಣೇಶ್, ಪಿಡಿಒ ಮಂಜುನಾಥ್, ಕಾರ್ಯದರ್ಶಿ ವೆಂಕಟೇಶ್, ಸದಸ್ಯರಾದ ವಿನೂ ಕಾರ್ತಿಕ್, ಗಣೇಶ, ರಾಧಮ್ಮ, ಶ್ರೀರಾಮ್, ಸಂದ್ಯಾ ಮೊದಲಾದವರಿದ್ದರು.

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!