• Sat. Apr 20th, 2024

ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್.ಪಿ.ಓ)ಬಲಪಡಿಸಲು ಮಾರಾಟಗಾರರು ಮತ್ತು ಖರೀಧಿದಾರರ ಸಮಾವೇಶ

PLACE YOUR AD HERE AT LOWEST PRICE

ರೈತ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸೆಹಗಲ್ ಫೌಂಡೇಶನ್ ಮತ್ತು ವಾಲ್‌ಮಾರ್ಟ್ ಸಹಯೋಗದೊಂದಿಗೆ ಮಾರಾಟಗಾರರು ಮತ್ತು ಖರೀಧಿದಾರರ ಸಮಾವೇಶ ಕೋಲಾರ ಜಿಲ್ಲಾ ಕೇಂದ್ರದಲ್ಲಿ ನೆರವೇರಿತು.

ಮಂಗಳವಾರ ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ರೈತ ಉತ್ಪಾದಕರ ಸಂಸ್ಥೆಗಳನ್ನು ಬಲಪಡಿಸುವ ಯೋಜನೆಯ ಭಾಗವಾಗಿ ಇಂದು ಕೋಲಾರ ಜಿಲ್ಲೆಯ ವಿವಿಧ ತಾಲ್ಲೂಕುಗಳ ಎಫ್.ಪಿ.ಓಗಳು ಹಾಗೂ ಕಂಪನಿಗಳು ಭಾಗವವಹಿಸಿದ್ದವು. ಸಭೆಯಲ್ಲಿ ಮುಖ್ಯವಾಗಿ ರೈತರು ಮತ್ತು ಕಂಪನಿಗಳ ನಡುವ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ, ಕೋಲಾರ ಜಿಲ್ಲೆಯ ಕಾಮಸಮುದ್ರ, ಬೂದಿಕೋಟೆ, ಗುಡಿಪಲ್ಲಿ, ರಾಜೇನಹಳ್ಳಿ, ತಾಯಿಲೂರು ಸೇರಿ ಒಟ್ಟು ೫ ರೈತ ಉತ್ಪಾದಕ ಕೇಂದ್ರಗಳಿಂದ ತಲಾ ೧೦೦ ರೈತರು ಸಮಾವೇಶಕ್ಕೆ ಆಗಮಿಸಿದ್ದರು.

ಬದಲಾದ ಮಾರುಕಟ್ಟೆ ವ್ಯವಸ್ಥೆಯಲ್ಲಿ, ರೈತರು ರಸಗೊಬ್ಬರ, ಕೃಷಿ ಉಪಕರಣಗಳು, ಔಷಧಿಗಳು, ಸಲಕರಣೆಗಳು, ಸಸಿಗಳು ಇತ್ಯಾದಿಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದು, ರೈತರ ಅನುಕೂಲಕ್ಕಾಗಿ ಮದ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ನೇರವಾಗಿ ರೈತರು ಮತ್ತು ಖರೀದಿದಾರರ ಮದ್ಯೆ ಸಂಪರ್ಕ ಕಲ್ಪಿಸಲಾಗುತ್ತದೆ. ಇಲ್ಲಿ ರೈತರು ತಾವು ಬೆಳೆಯುವ ಉತ್ಪನ್ನಗಳ ಬಗ್ಗೆ ಖರೀದಿದಾರರಿಗೆ ಮಾಹಿತಿ ನೀಡುತ್ತಾರೆ, ಅದೇ ರೀತಿ ಕಂಪನಿಗಳು ರೈತರಿಗೆ ಅಗತ್ಯವಿರುವ ಸಲಕರಣೆಗಳು, ಔಷಧಿಗಳು, ರಸಗೊಬ್ಬರಗಳು, ಸಸಿಗಳು, ಯಂತ್ರಗಳನ್ನು ರೈತರಿಗೆ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಇರುವುದನ್ನ ತಿಳಿಸುತ್ತಾರೆ.

ಪ್ರತಿ ಹೋಬಳಿಗೊಂದು ರೈತ ಸಂಪರ್ಕ ಸಂಸ್ಥೆ ಇದ್ದು, ಒಂದು ಸಾವಿರ ಷೇರುದಾರ ರೈತರು ಇರುತ್ತಾರೆ, ಪ್ರತಿ ಷೇರುದಾರ ಒಂದು ಸಾವಿರ ರೂಪಾಯಿ ಷೇರು ಕಟ್ಟಿದರೆ ರಾಜ್ಯ ಸರ್ಕಾರ ಒಂದು ಸಾವಿರ ಹಾಗೂ ಕೇಂದ್ರ ಸರ್ಕಾರ ಒಂದು ಸಾವಿರ ರೂಪಾಯಿ ಷೇರುದಾರನ ಪರವಾಗಿ ನೀಡುತ್ತದೆ. ಒಟ್ಟು ಒಂದು ರೈತ ಉತ್ಪನ್ನ ಕೇಂದ್ರಕ್ಕೆ ೩೦ ಲಕ್ಷ ರೂಪಾಯಿ ಸಂಗ್ರಹವಾಗುತ್ತದೆ. ಇದನ್ನೇ ಬಂಡವಾಳವಾಗಿ ಬಳಸಿಕೊಂಡು ರೈತರಿಗೆ ಕನಿಷ್ಠ ಬೆಲೆಯಲ್ಲಿ ಕೃಷಿಗೆ ಬೇಕಾದ ಅಗತ್ಯಗಳನ್ನು ಪೂರೈಸುವ ಮೂಲಕ ಹೆಚ್ಚು ಉತ್ಪಾದನೆಗೆ ಸಹಕರಿಸುವುದು ಮತ್ತು ಬೆಳೆದ ಬೆಳೆಗಳನ್ನು ನೇರವಾಗಿ ಮಾರಾಟ ಮಾರಾಟ ಮಾಡಲು ಅವಕಶ ಕಲ್ಪಿಸುತ್ತದೆ. ಪ್ರತಿ ಸಮಾವೇಶದಲ್ಲಿ ಎಫ್.ಪಿ.ಓ ಹಾಗೂ ಕಂಪನಿಗಳ ನಡುವೆ ಸಂಪರ್ಕ ಕಲ್ಪಿಸಲು ಬಹುರಾಷ್ಟ್ರೀಯ ಕಂಪನಿಗಳು, ಸಂಬಂಧಪಟ್ಟ ಇಲಾಖೆಗಳ ಉಪಸ್ಥಿತಿಯಲ್ಲಿ ಮಾರಾಟಗಾರರ ಹಾಗೂ ಖರೀದಿದಾರರ ಸಮಾವೇಶ ನಡೆಸಲಾಗುತ್ತದೆ.

ಇಂದಿನ ಸಮಾವೇಶದಲ್ಲಿ ಕೋಲಾರ ಜಿಲ್ಲಾ ಜಂಟಿ ಕೃಷಿ ನಿದೇರ್ಶಕಿ ವಿ.ಡಿ.ರೂಪಾದೇವಿ. ತೋಟಗಾರಿಕಾ ಉಪನಿರ್ದೇಶಕ ಕುಮಾರಸ್ವಾಮಿ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ತುಳಸೀರಾಮ್, ಎಸ್.ಎಂ.ಎಫ್ ಅಧಿಕಾರಿ ಶೃಚಿಸಿಂಗ್, ಮೈರಾಡ ಸಂಸ್ಥೆಯ ಶಿವಶಂಕರ್, ಎಫ್.ಪಿ.ಓ ಉಸ್ತುವಾರಿ ಅಧಿಕಾರಿ ಡಿ.ಪರಮೇಶ್, ಬಂಗಾರಪೇಟೆ ಸಹಾಯಕ ತೋಟಗಾರಿಕಾ ನಿರ್ದೇಶಕ ಶಿವಾರೆಡ್ಡಿ, ಮುಳಬಾಗಿಲು ಸಹಾಯಕ ನಿರ್ದೇಶಕಿ ಶಿವಕುಮಾರಿ, ಮಾಲೂರು ಸಹಾಯಕ ನಿರ್ದೇಶಕಿ ದಿವ್ಯ. ಸಹಾಯಕ ಕೃಷಿ ನಿದೇರ್ಶಕ ಚಂದ್ರಪ್ಪ ಬಿ.ಪಿ. ಸೆಹಗಲ್ ಫೌಂಡೇಶನ್ ಯೋಜನಾಧಿಕಾರಿ ಇಮ್ರಾನ್‌ಖಾನ್, ರಾಮುಜೋಗಿಹಳ್ಳಿ, ವೆಂಕಟೇಶಪ್ಪ, ಜನಾರ್ಧನ್, ರವಿ, ಗಜೇಂದ್ರ, ನಾರಾಯಣಸ್ವಾಮಿ, ವೇಣು ಇದ್ದರು.

Related Post

2024ರ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ – ಎಂ.ಎಲ್.ಸಿ. ಸುಧಾಮದಾಸ್
ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,

Leave a Reply

Your email address will not be published. Required fields are marked *

You missed

error: Content is protected !!