• Thu. Mar 28th, 2024

ಪರಿಸರವಾದಿ ಕೆ ಎನ್ ತ್ಯಾಗರಾಜ್ ರ ಮೊದಲನೇ ವರ್ಷದ ಪುಣ್ಯ ಸ್ಮರಣೆ.

PLACE YOUR AD HERE AT LOWEST PRICE

ಪರಿಸರವಾದಿ ಕೆ ಎನ್ ತ್ಯಾಗರಾಜ್ ರವರ ಹೆಸರಿನಲ್ಲಿ ಚಿಟ್ಟೆ ಉದ್ಯಾನವನ ಮೊದಲನೇ ವರ್ಷದ ಪುಣ್ಯ ಸ್ಮರಣೆಯನ್ನು ಮುಳಬಾಗಿಲು ತಾಲ್ಲೂಕಿನ ದೇವರಾಯ ಸಮುದ್ರ ಪಂಚಾಯತಿಯ ವೃಷಭಾದ್ರಿ ಬೆಟ್ಟದ ತಪ್ಪಲಿನ ಪರಿಸರ ಪ್ರವಾಸೋದ್ಯಮ ಕ್ಯಾಂಪ್ ಸೈಟ್ ಪರಿಸರದಲ್ಲಿ ಉದ್ಘಾಟಿಸಲಾಯಿತು.

ಪರಿಸರ ಹಿರಕ್ಷಣಾ ಸಮಿತಿ ಹಾಗೂ ಪರ್ಯಾವರಣ ಸಂರಕ್ಷಣಾ ಗತಿವಿಧಿ ಸಹಯೋಗದೊಂದಿಗೆ ಚಿಟ್ಟೆ ಉದ್ಯಾನವನ್ನು ಉದ್ಘಾಟಿಸಿ,ಮಾತನಾಡಿದ ಪುರುಷೋತ್ತಮ ರಾವ್ ರವರು ಮಾತನಾಡಿದರು. ಪರಿಸರವಾದಿ ಎನ್.ತ್ಯಾಗರಾಜು ರವರ ಬಾಲ್ಯದ ನೆನಪು, ಜೊತೆಗಿನ ಬಾಂಧವ್ಯ ಕಾಲೇಜಿನ ಸಂಘಟನೆ ,ಪರಿಸರದಲ್ಲಿ ತೊಡಗಿಸಿಕೊಂಡ ನಿಸ್ವಾರ್ಥ, ಸೀಡ್ ಬಾಲ್ ಯೋಚನೆ, ಸಮಯ, ಸೇವೆಯ ಮೆಲುಕುಗಳನ್ನು ಸ್ಮರಿಸಿದರು,

ಇತ್ತಿಚಿನ ದಿನಗಳಲ್ಲಿ ಯರಗೋಳ್ ಅಣ್ಣೆಕಟ್ಟಿನ ಯೋಜನೆಯ ರೂವಾರಿ ಮೊದಲ ವ್ಯಕ್ತಿ ಎಂದು ಸ್ಮರಿಸಿ, ಕೆಜಿಎಫ್ ಸೈನೈಡ್ ಗುಡ್ಡದ ಮೇಲೆ ಗಿಡಗಳನ್ನು ಬೆಳೆಸುವ ಯೋಚನೆ ಹಾಗೂ ದೂರದೃಷ್ಟಿ ಮಹತ್ತಕಾರ್ಯ ತ್ಯಾಗರಾಜುರವರದ್ದೆಂದು ಸ್ಮರಿಸಿದರು,  ಗ್ರಾಮ ವಿಕಾಸ ಎಂ.ವಿ.ಎನ್ ರಾವ್ ರವರು ಮಾತನಾಡಿ, ಕೆ ಎನ್ ತ್ಯಾಗರಾಜ್  ಸಮಾಜದಲ್ಲಿ ಒಬ್ಬ ಯುವಕನಂತೆ ಕಾರ್ಯಚಟುವಟಿಕೆ ನಡೆಸುತ್ತಿದ್ದರು, ಯುವಕರಿಗೆ ಮಾದರಿ ಹಾಗೂ ಪ್ರೇರಣೆಯಾಗಿದ್ದರು.

ಅನೇಕ ದಾನಿಗಳಿಂದ ಸಮಾಜದ ಶಾಲಾ ಕಾಲೇಜುಗಳಿಗೆ ಹೆಚ್ ಪಿ ಕಂಪನಿಗಳಿಂದ ಮೂಲಭೂತ ಸೌಕರ್ಯಗಳನ್ನು ಓದಗಿಸಿಕೊಡುತ್ತಿದ್ದರು. ಅಪಾರವಾದ ಪರಿಸರದ ಮೇಲೆ ಕಾಳಜಿವಹಿಸಿದ್ದರು ಎಂದರು. ಇವರ ಪ್ರೇರಣೆಯಿಂದ ಮುಂದಿನ ವರ್ಷದೊಳಗೆ ಇವರ ಹೆಸರಿನಲ್ಲಿ ಟ್ರಸ್ಟ್ ನಿರ್ಮಾಣ ಮಾಡಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಅರಣ್ಯಧಿಕಾರಿ ಹಾಗೂ ಸಾಹಿತ್ಯ, ಅಂಕಣಕಾರರಾದ ಪುರುಷೋತ್ತಮ, ಶ್ರೀಮತಿ ಕುಮಾರಿ ತ್ಯಾಗರಾಜು, ರೀತೇಶ್ ತ್ಯಾಗರಾಜು ತೋರದೇವಂಡಹಳ್ಳಿ ನಿಕಟಪೂರ್ವ ಗ್ರಾಪಂಚಾಯತ್ ಸದಸ್ಯರು ನಾಗರಾಜು, ಪರಿಸರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿ ರಮೇಶ್ , ಕ್ಯಾನ್ ಅಧ್ಯಕ್ಷೆ ಮಲ್ಲಮ್ಮ, ಕೋಲಾರ ಲೇಕ್ ಸೈಡ್ ಅಧ್ಯಕ್ಷರಾದ ಶಿಲ್ಪ, ಗ್ರಾಮವಿಕಾಸ ಸಂಸ್ಥೆಯ ಗಿರಿಜಾ, ನಾರಾಯಣಸ್ವಾಮಿ , ಕೃಷ್ಣಮೂರ್ತಿ, ಪರ್ಯಾವರಣ ಸಂರಕ್ಷಣಾ ಗತಿವಿಧಿಯ ಮಹೇಶ್ ರಾವ್ ಕದಂ ಉಪಸ್ಥಿತಿರಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!