• Fri. Apr 19th, 2024

ಸಂವಿಧಾನ ಜಾರಿಯಾಗಿ 74ವರ್ಷವಾದರೂ ದಲಿತರು PM,CM ಆಗಿಲ್ಲ:ಸೂಲಿಕುಂಟೆ ಆನಂದ್.

PLACE YOUR AD HERE AT LOWEST PRICE

ಭಾರತ ದೇಶದಲ್ಲಿ ಸಂವಿಧಾನ ಜಾರಿಯಾಗಿ 74ವರ್ಷಗಳು ಕಳೆದರೂ ದಲಿತರು ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಆಗದ ಸ್ಥಿತಿ ಇರುವುದು ದುರಂತದ ಸಂಗತಿ ಎಂದು ಕರ್ನಾಟಕ ದಲಿತ ಸಮಾಜ ಸೇನೆಯ ಸಂಸ್ಥಾಪಕ ಅದ್ಯಕ್ಷ ಸೂಲಿಕುಂಟೆ ಆನಂದ್ ಬೇಸರ ವ್ಯಕ್ತಪಡಿಸಿದರು.

ಗಣರಾಜ್ಯೋತ್ಸವದ ಅಂಗವಾಗಿ ಬಂಗಾರಪೇಟೆ ಪಟ್ಟಣದ ಕೋಲಾರ ಮುಖ್ಯರಸ್ತೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಈ ದೇಶದಲ್ಲಿ ದಲಿರಿಗೆ ರಾಜಕೀಯ ಅವಕಾಶಗಳನ್ನು ದೊರಕಿಸಿಕೊಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದರು.

ಚಹಾ ಮಾರುವವರು ಪ್ರಧಾನಿಯಾಗಬಹುದು, ಕುರಿ ಕಾಯುವವರು ಮುಖ್ಯ ಮಂತ್ರಿಗಳಾಗಬಹುದು, ದಲಿತರು ಆ ಸ್ಥಾನಗಳಿಗೆ ಹೋಗಲಾಗಿಲ್ಲ. ಈ ದೇಶದಲ್ಲಿ  ಸಂವಿಧಾನದ ಆಶಯದಂತೆ ಎಲ್ಲರಿಗೂ ಅವಕಾಶ ದೊರಕಿಸಿಕೊಡಲು ಪ್ರಯತ್ನಗಳು ನಡೆಯುತ್ತಿಲ್ಲ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ರವರು ಪ್ರಪಂಚಕ್ಕೇ ಮಾದರಿಯಾದ ಸಂವಿಧಾನವನ್ನು ನಮ್ಮ ದೇಶಕ್ಕೆ ಬರೆದುಕೊಟ್ಟಿದ್ದಾರೆ. ಸಂವಿದಾನದ ಆಶಯದಂತೆ ಈ ದೇಶದ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳಿವೆಯಾದರೂ ರಾಜಕೀಯ ಕ್ಷೇತ್ರದಲ್ಲಿ ದಲಿರ ಬೆಳವಣಿಗೆ ಆಗುತ್ತಿಲ್ಲ.

ದೇಶದಲ್ಲಿ ಬಹುಸಂಖ್ಯಾತರಾಗಿರುವ ದಲಿತರು ಶಾಸಕ ಸಂಸದ ಕೆಲವೇಳೆ ಮಂತ್ರಿ ಪದವಿಗೆ ತೃಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ಇದೆ. ಇದು ದೇಶದಲ್ಲಿ ಇನ್ನೂ ದಲಿತರಿಗೆ ಸಮಾನವಾದ ಅವಕಾಶಗಳಿಲ್ಲ ಎಂಬುದನ್ನು ತೋರಿಸುತ್ತಿದ್ದು ಇದಕ್ಕೆ ದೇಶದ ಪ್ರತಿಯೊಬ್ಬರೂ ಜವಾಬ್ದಾರರು ಎಂದರು.

ದೇಶದಲ್ಲಿ ಶೇ 35 ಭಾಗ ಮತ್ತು ಕರ್ನಾಟಕ ರಾಜ್ಯದಲ್ಲಿ 1.5ಕೋಟಿ ದಲಿತರಿದ್ದಾಗ್ಯೂ ಈ ತನಕ ಪ್ರಧಾನಿ, ಮುಖ್ಯಮಂತ್ರಿ ಆಗಲು ಅವಕಾಶಗಳು ಸಿಕ್ಕಿಲ್ಲ. ದೇಶದಲ್ಲಿ ದಲಿತರನ್ನು ನೋಡುವ, ನಡೆಸಿಕೊಳ್ಳುವ ಪದ್ದತಿ ಬೇರೆಯೇ ಇದೆ ಎನ್ನುವುದಕ್ಕೆ ಇದು ಉದಾಹರನೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಅದ್ಯಕ್ಷ ದೇವಗಾನಹಳ್ಳಿ ನಾಗೇಶ್, ಮುಖಂಡರಾದ ಅಯ್ಯಪ್ಪ, ಗೌತಮನಗರ ಮಂಜು, ಕೃಷ್ಣಮೂರ್ತಿ, ಮುನ್ನಾ, ಮುನಿರಾಜು ಮೊದಲಾದವರಿದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!