• Thu. Apr 25th, 2024

ನನಗೂ ಅಭ್ಯರ್ಥಿಯಾಗುವ ಆಸೆ ಇದೆ:ವೈ.ಎ.ನಾರಾಯಣಸ್ವಾಮಿ

PLACE YOUR AD HERE AT LOWEST PRICE

ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ಧ ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ  ತಾಲ್ಲೂಕಿನ ಯಚ್ಚನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ನನಗೂ ಅಭ್ಯರ್ಥಿಯಾಗುವ ಆಸೆ ಇದೆ, ನಾನು ರಾಜಕೀಯ ಸನ್ಯಾಸಿಯಲ್ಲಾ ಜೆಡಿಎಸ್ ಪಕ್ಷ 110 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದ್ದಾರೆ.

ಜೆಡಿಎಸ್ ಪ್ರಾದೇಶಿಕ ಪಕ್ಷ, ಕುಟುಂಬ ರಾಜಕಾರಣದ ಪಕ್ಷ, ಅಪ್ಪ ಮಕ್ಕಳು ಸೇರಿ ಟಿಕೆಟ್ ಯಾರಿಗೆ ಕೊಡಬೇಕು ಅಂತ ನಿರ್ಧಾರ ಮಾಡಿದ್ದಾರೆ. ನಮ್ಮದು ಹಾಗೆ ಅಲ್ವಲ್ಲಾ ನಮ್ಮದು ರಾಷ್ಟ್ರಿಯ ಪಕ್ಷ, ಪಕ್ಷದ ಸಿದ್ದಾಂತದಲ್ಲಿ ಹೈಕಮಾಂಡ್ ನಾಯಕರ ನೇತೃತ್ವದಲ್ಲಿ ಟಿಕೆಟ್ ಹಂಚಿಕೆಯಾಗಲಿದೆ.

ಸರ್ಕಾರ ಪಡಿತರ ಅಕ್ಕಿ ಕಡಿಮೆ ಮಾಡಿರುವ ವಿಚಾರಕ್ಕೆ ಮಾತನಾಡಿ ಕಾಂಗ್ರೇಸ್ ಜನರನ್ನು ಮೋಸ ಮಾಡುವುದರಲ್ಲಿ ಕಾಂಗ್ರೇಸ್ ನಂಬರ್ ಒನ್. 29 ರೂಪಾಯಿ ಕೊಟ್ಟು ಬಿಜೆಪಿ ಪಕ್ಷ ಅಕ್ಕಿ ಕೊಟ್ಟರೆ ಕಾಂಗ್ರೇಸ್ 3 ರೂಪಾಯಿ ಚೀಲದಲ್ಲಿ ಹಾಕಿ ಸಿದ್ದರಾಮಯ್ಯ ಫೋಟೋ ಹಾಕಿ ಕೊಟ್ಟಿದ್ದಾರೆ.

ಹೆಣ್ಣು ಮಕ್ಕಳ ಬಗ್ಗೆ ಕಾಂಗ್ರೆಸ್ ನವರಿಗೆ ಕಾಲಜಿಯೇ ಇರಲಿಲ್ಲಾ ಪ್ರಿಯಾಂಕ ಗಾಂಧಿ ಬಂದು ನೀರು ತಂದು ಒಳೆ ಊದಿ ಕಣ್ಣಲ್ಲಿ ನೀರು ಬರುಸ್ಕೊಂಡ ಮೇಲೆ ಹೆಣ್ಣು ಮಕ್ಕಳ ಮೇಲೆ ಕಾಳಜಿ ಹುಟ್ಟಿದ್ದು 2000 ಕೊಡಬೇಕು ಅಂತ ಹೇಳುತ್ತಾರೆ.

ಕಾಂಗ್ರೇಸ್ ನಾಯಕರು ಜೆಡಿಎಸ್ ಹಾಗೂ ಕಾಂಗ್ರೇಸ್ ನಾಯಕರು ಮುಂದೆ ಅಧಿಕಾರಕ್ಕೆ ಬಂದರೆ ಡಿಸಿಸಿ ಬ್ಯಾಂಕ್ ಸಾಲ ಮನ್ನಾ ಮಾಡುತ್ತೇವೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಸಾಲ ಮನ್ನಾ ಸ್ಕೀಮ್ ಬೋಗಸ್ ಸ್ಕೀಮ್ ನಿಜವಾದ ರೈತರಿಗೆ ಸಾಲ ಸಿಗುತ್ತಿರುವುದು ಬಾರೀ ಅಪುರೂಪ.

ಮದ್ಯವರ್ತಿಗಳು ಏಜಂಟ್ ಗಳು ಬ್ಯಾಂಕ್ ಡೈರೆಕ್ಟರ್ ಗಳು ಸೇರಿ ರೈತರಿಗೆ ಮೋಸ ಮಾಡಿ ರೈತರ ಹೆಸರು ಬರೆಸಿ ರೈತರಿಗೆ ಸ್ವಲ್ಪ ಹಣ ಕೊಟ್ಟು ಉಳಿದಿದ್ದೆಲ್ಲ ಇವರೇ ತಿಂದು ಬಿಡುತ್ತಿದ್ದರು ಸಾಲ ಮರುಪಾವತಿ ಮಾಡದೇ ಸರ್ಕಾರಗಳು ಸಾಲ ಮನ್ನಾ ಮಾಡುವುದಕ್ಕೆ ಎದುರು ನೋಡುತ್ತಿದ್ದರು.

ಆದರೇ ಬಿಜೆಪಿ ಸರ್ಕಾರ ನಿಜವಾದ ಜನಪರ ಆಡಳಿತ ನೀಡುತ್ತಿದ್ದು, ಕಿಸಾನ್ ಸನ್ಮಾನ್ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರ ಖಾತೆಗೆ ನೇರವಾಗಿ 10 ಸಾವಿರ ಹಾಕುತ್ತಿದ್ದೇವೆಂದು ಹೇಳಿದರು.

Related Post

ಸರ್ಕಾರದಿಂದ ಪರೀಕ್ಷೆ ವೇಳೆಯಲ್ಲಿ ಹಿಂದೂ ಮಹಿಳೆಯರ ಮಾಂಗಲ್ಯ-ಕಾಲುಂಗುರ ತೆಗೆಸುವ ದುಸ್ಸಾಹಸ: ಡಾ.ವೇಣುಗೋಪಾಲ್ ಆಕ್ರೋಶ
ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ
ಐತಿಹಾಸಿಕ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಪಂಚರಾಜ್ಯಗಳ ಸಾಂಸ್ಕೃತಿಕ ಸಂಗಮಕ್ಕೆ  ಆದಿಮ ಸಜ್ಜು.

Leave a Reply

Your email address will not be published. Required fields are marked *

You missed

error: Content is protected !!