• Tue. Jun 18th, 2024

ಬಂಗಾರಪೇಟೆಯಲ್ಲಿ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶಾಸಕ ಎಸ್ ಎನ್.

PLACE YOUR AD HERE AT LOWEST PRICE

ಸರ್ಕಾರಿ ನೌಕರರ ಸಂಘ ಎಂದರೆ ಕೆಲ ಕಡೆ ಎರಡು ಮೂರು ಗುಂಪುಗಳಿದ್ದು, ಈ ಬಾರಿ ನೀವೆಲ್ಲಾ ನನ್ನ ಮಾತಿಗೆ ಗೌರವ ಕೊಟ್ಟು ಸಿ.ಅಪ್ಪಯ್ಯಗೌಡರನ್ನ ಅವಿರೋಧವಾಗಿ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಲು ಸಹಕರಿಸಿದಿರಿ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಅವರು ಬಂಗಾರಪೇಟೆ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 2022-23 ನೇ ಸಾಲಿನ ತಾಲ್ಲೂಕು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ವಾರ್ಷಿಕ ಸಭೆ ಹಾಗೂ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.

ಸರ್ಕಾರಿ ನೌಕರರ ಸಂಘಕ್ಕೆ ಸಿ.ಅಪ್ಪಯ್ಯಗೌಡರು ಅಧ್ಯಕ್ಷರಾದ ಮೇಲೆ ಯಾವುದೆ ರೀತಿಯ ಗೊಂದಲಗಳಿಗೆ ಅವಕಾಶಗಳನ್ನ ಕೊಡದೆ ಅಧ್ಯಕ್ಷರ ಆದಿಯಾಗಿ ಎಲ್ಲರೂ ಸೇರಿ ಬಹಳ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿಕೊಂಡು ಮುಂದುವರೆಯುತ್ತಿದ್ದು ಇದು ಮಾದರಿ ಸಂಘ ಎನಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ನೌಕರರಿಗೆ ಸಮಸ್ಯೆಗಳು ಬಂದಾಗ ಆ ಸಮಸ್ಯೆಗಳಿಗೆ ಸ್ಪಂದಿಸುವಂತ ಕೆಲಸ ಪದಾಧಿಕಾರಿಗಳ ಮತ್ತು ತಂಡ ಉತ್ತಮ ರೀತಿಯಲ್ಲಿ ಮಾಡುತ್ತಿದೆ. ಸರ್ಕಾರಿ ನೌಕರರಿಗೆ ಕಛೇರಿ ಕಟ್ಟಡ ಮತ್ತು ನಿವೇಶನ ಬೇಕು ಎಂದು ನನ್ನ ಬಳಿ ಹಲವು ಬಾರಿ ಬೇಡಿಕೆಯನ್ನು ಇಟ್ಟಿದ್ದು, ಈ ಬಗ್ಗೆ ಒಂದು ಸಭೆಯನ್ನ ಕರೆದು ಚರ್ಚಿಸುತ್ತೇನೆ.

ಸದ್ಯಕ್ಕೆ ನಮ್ಮ ಹಳೆಯ ಪುರಸಭೆ ಕಟ್ಟಡದಲ್ಲಿ ನಿಮಗೂ ಮತ್ತು ಪ್ರಥಾಮಿಕ ಶಾಲಾ ಶಿಕ್ಕಷಕರ ಸಂಘಕ್ಕೂ ಸೇರಿ ತಾತ್ಕಾಲಿಕವಾಗಿ ವ್ಯವಸ್ಧೆ ಮಾಡಲಿಕ್ಕೆ ಸಭೆಯಲ್ಲಿ ಮಂಡಿಸಿ ಸದಸ್ಯರ ಮತ್ತು ಅಧ್ಯಕ್ಷರ ಅನುಮತಿಯನ್ನ ಪಡೆದು ಮಾಡಿಕೊಡುತ್ತೇನೆ ಎಂದು ನೌಕರರ ಸಂಘಕ್ಕೆ ಭರವಸೆ ನೀಡಿದರು.

ಬಸ್ ನಿಲ್ದಾಣದ ಪಕ್ಕದಲ್ಲಿ ಒಂದು ಲೇಔಟ್ ಇದೆ. ಅಲ್ಲಿ ಪತ್ರಕರ್ತರಿಗೆ ಮತ್ತು ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ಬಿಡ್ಲಿಂಗ್ ಕೊಡುವುದಾಗಿ ಭರವಸೆ ನೀಡಿದ್ದೇನೆ. ಪುರಸಭೆಯ ಮುಂದಿನ ಸಭೆಯಲ್ಲಿ ಮಂಡಿಸಿ ನಿಮಗೂ ಕೂಡ 30*40 ಜಾಗವನ್ನು ಕೂಡುವುದಕ್ಕೆ ಪ್ರಯತ್ನ ಮಾಡುತ್ತೇನೆ ಎಂದರು.

ಕಾರಹಳ್ಳಿ ಸರ್ವೆ ನಂ.197, ಮತ್ತು ದೇಶೀಹಳ್ಳಿ ಸರ್ವೆ ನಂ 15 ರಲ್ಲಿ ನಿಮಗೆ ಭವನ ಮಾಡಿಕೊಡಬೇಕು ಎಂಬ ಉದ್ದೇಶ ಇದೆ. ಆದರೆ ಸದ್ಯಕ್ಕೆ ಸಾಧ್ಯವಿಲ್ಲ. ನಾನು ಶಾಸಕನಾಗಿ ಈ ಹತ್ತು ವರ್ಷಗಳಲ್ಲಿ ನಿಮ್ಮೊಟ್ಟಿಗೆ ಕೆಲಸ ಮಾಡುತ್ತಿದ್ದು ನನ್ನಿಂದ ಯಾರಿಗಾದರೂ ತೊಂದರೆಯಾಗಿದೆಯಾ ಎಂದು ಪ್ರಶ್ನಿಸಿದರು.

ಕೋಪ ಬಂದಾಗ ಗಟ್ಟಿಯಾಗಿ ಮಾತನಾಡಿರುತ್ತೀನಿ ಅದು ಬಿಟ್ಟರೆ ನೌಕರರಿಗೆ ತೊಂದರೆ ಕೊಟ್ಟಿಲ್ಲ.ನನ್ನ ಕೋಪ ಸಹ ಹತ್ತು ನಿಮಿಷದ್ದು. ನಾನಂತು ನಿಮ್ಮೂಟ್ಟಿಗೆ ಇದ್ದೇನೆ ನೀವುಗಳು ಸಹ ನನ್ನೊಟ್ಟಿಗೆ ಇದ್ದೀರಾ ಎಂದು ಭಾವಿಸಿದ್ದೇನೆಂದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಅಪ್ಪಯ್ಯ ಗೌಡ ಮಾತನಾಡಿ,ಈ ಒಂದು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಸ್ವಲ್ಪ ತಡವಾಯ್ತು.ಆದರೂ ಇವತ್ತಿನ ನೌಕರರ ಸಂಘದ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಬಂದಿರುವುದು ಸಂತೋಷದ ವಿಚಾರ.

ನೌಕರರ ಕುಂದು ಕೊರತೆಗಳು ಎಂದು ಬಂದಾಗ ಎಂದೂ ಸಹ ಕುಂಟು ನೆಪಗಳನ್ನ ಹೇಳದೆ ಅವರೊಂದಿಗೆ ಬೆರತು ಸಮಸ್ಯೆಗಳನ್ನ ಆಲಿಸಿ ಬಗೆಹರಿಸುವ ಪ್ರಯತ್ನವನ್ನ ನಮ್ಮ ೆಲ್ಲಾ ಪದಾಧಿಕಾರಿಗಳು ಮತ್ತು ತಂಡ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಶಾಸಕರಲ್ಲಿ ಆನೇಕ ವರ್ಷಗಳಿಂದ ಒಂದು ಬೇಡಿಕೆಯನ್ನ ಮಾಡುತ್ತಿದ್ದೇವೆ ನಮ್ಮ ನೌಕರರ ಸಂಘಕ್ಕೆ ಒಂದು ಕಛೇರಿ ಇಲ್ಲ. ನಾಲ್ಕು ಜನ ಒಂದೆಡೆ ಸೇರಿ ಸಭೆ ಮತ್ತು ಚರ್ಚೆ ಮಾಡಲು ಸರಿಯಾದ ಕಛೇರಿ ಇಲ್ಲದ ಸ್ಧಿತಿಯಲ್ಲಿ ನಾವುಗಳು ಇದ್ದೇವೆ. ನೌಕರರ ಭವನಕ್ಕೂ ಸ್ಧಳ ಅವಕಾಶವಿಲ್ಲ.

ಶಾಸಕರು ಮತ್ತು ಪುರಸಭೆಯ ಮುಖ್ಯಾಧಿಕಾರಿ ಚಲಪತಿ ಅವರಲ್ಲಿ ಮನವಿಯನ್ನ ಮಾಡುತ್ತಿದ್ದೇವೆ ಪಟ್ಟಣದ ವ್ಯಾಪ್ತಿಯಲ್ಲಿ ಎಲ್ಲಿಯಾದರು 30*40 ನಿವೇಶನ ನೀಡಿದರೆ ನೌಕರರ ಸಂಘಕ್ಕೆ ಬಹಳಷ್ಟು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪಿ. ನಾರಾಯಣಪ್ಪ, ಜಯಪ್ರಕಾಶ್, ಇಒ ವೆಂಕಟೇಶಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ಧೇಶಕಿ ಅಂಜಲಿದೇವಿ, ಸಿ.ಒ.ಚಲಪತಿ, ಆರ್.ಐ ಅಜಯ್ ಹಾಗೂ ಎಲ್ ರಾಜಪ್ಪ ತಾಲೂಕು ಮಟ್ಟದ ಎಲ್ಲಾ ಪದಾಧಿಕಾರಿಗಳು ಅಧಿಕಾರಿಗಳು ಭಾಹವಹಸಿದ್ದರು.

Related Post

ಜನ್ಮದಿನಕ್ಕೊಂದು ಸಸಿ ನೆಟ್ಟು ಹಸಿರನ್ನು ಉಸಿರಾಗಿಸಿ – ಹೆಚ್.ಎನ್.ಮೂರ್ತಿ
ಅಂಧಕಾರದಲ್ಲಿ ಮುಳುಗಿದ ವಿಶ್ವವನ್ನು ಸಮ-ಸಮಾಜದ ಬೆಳಕೆಂಬ ಜ್ಞಾನದ ಕಡೆ ಕೊಂಡೊಯ್ಯುವ ನವಯುಗವನ್ನು ಪ್ರತಿಷ್ಠಾಪನೆ ಮಾಡಿದ ಚೇತನ  ಗೌತಮಬುದ್ದ: ಕಲಾವಿದ ಯಲ್ಲಪ್ಪ
ಎಂಎಲ್ಸಿ ಸ್ಥಾನಕ್ಕೆ ನನ್ನ ಸೇವಾ ಹಿರಿತನವನ್ನು ಪರಿಗಣಿಸುವಂತೆ ಸಿಎಂಗೆ ಮನವಿ ಮಾಡಿದ ಊರಬಾಗಿಲು ಶ್ರೀನಿವಾಸ್

Leave a Reply

Your email address will not be published. Required fields are marked *

You missed

error: Content is protected !!