• Thu. Mar 28th, 2024

PLACE YOUR AD HERE AT LOWEST PRICE

ಸವಿತಾ ಮಹರ್ಷಿ ಜಯಂತಿಗೆ ಅಧಿಕಾರಿಗಳ ಗೈರು ಹಾಜರಿಯನ್ನು ಸವಿತಾ ಸಮಾಜದ ಮುಖಂಡರು ತೀವ್ರವಾಗಿ ಖಂಡಿಸಿ ಜಯಂತಿ ಆಚರಣೆ ಬಹಿಷ್ಕರಿಸಲು ಮುಂದಾದಾಗ ತಹಸೀಲ್ದಾರ್ ದಯಾನಂದ್ ಮಧ್ಯಸ್ಥಿಕೆಯಿಂದ ಗೊಂದಲ ತಿಳಿಯಾಯಿತು.
ಸರ್ಕಾರ ಸಮುದಾಯದ ಜನರನ್ನು ಒಂದುಗೂಡಿಸಲು ಜಯಂತಿಗಳನ್ನು ಆಚರಣೆಗೆ ಆದೇಶಿಸಿದೆ, ಆದರಂತೆ ಇಂದು ಸವಿತಾ ಮಹರ್ಷಿ ಜಯಂತಿ ಆಚರಣೆಗೆ ಸರ್ಕಾರ ಸುತ್ತೋಲೆ ನೀಡಿ 5ವರ್ಷ ಕಳೆದರೂ ತಾಲೂಕು ಆಡಳಿತದಿಂದ ಮಾಡುವ ಜಯಂತಿಗೆ ಅಧಿಕಾರಿಗಳು ಗೈರಾಗುವ ಮೂಲಕ ಕಡೆಗಣಿಸಿದ್ದಾರೆ ಇಷ್ಟಕ್ಕೆ ಜಯಂತಿ ಯಾಕೆ ಆಚರಣೆ ಮಾಡಬೇಕು ಅಧಿಕಾರಿಗಳು ಬರುವ ತನಕ ಜಯಂತಿ ಆಚರಣೆ ಬೇಡ ಎಂದು ಸವಿತಾ ಸಮಾಜದ ಮುಖಂಡರು ಸವಿತಾ ಮಹರ್ಷಿ ಜಯಂತಿ ಆಚರಣೆ ಬಹಿಷ್ಕಾರ ಹಾಕಲು ಯತ್ನಿಸಿದರು.
ತಹಸೀಲ್ದಾರ್ ದಯಾನಂದ್ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಜಯಂತಿ ಹಾಜರಾಗುವಂತೆ ಸೂಚಿಸಲಾಗಿದ್ದರೂ ಗೈರಾಗಿದ್ದಾರೆ ಅವರಿಗೆ ನೊಟೀಸ್ ನೀಡಲಾಗುವುದು ಸವಿತಾ ಸಮಾಜದ ಮುಖಂಡರು ಅನ್ಯತಾ ಭಾವಿಸದೆ ಮುಂದಿನ ವರ್ಷ ನಡೆಯುವ ಜಯಂತಿಗೆ ಎಲ್ಲಾ ಅಧಿಕಾರಿಗಳು ತಪ್ಪದೆ ಬರುವಂತೆ ಮಾಡುವೆ ಇಂದಿನ ಜಯಂತಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಂಜಲಿದೇವಿ ಮಾತ್ರ ಬಂದಿರುವುದು ಅತ್ಯಂತ ಶೋಚನೀಯವಾಗಿದೆ ಎಂದು ಸಮಾಜದ ಮುಖಂಡರಲ್ಲಿ ಕ್ಷಮಾಪಣೆ ಕೋರಿ ಸಭೆಗೆ ಆಗಮಿಸುವಂತೆ ಮನವಿ ಮಾಡಿದ ಬಳಿಕ ಮುಖಂಡರು ಭಾಗವಹಿಸಿದರು.
ನಂತರ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಸವಿತಾ ಸಮಾಜದ ತಾಲೂಕು ಅಧ್ಯಕ್ಷ
ಬಿ.ನಾರಾಯಣಸ್ವಾಮಿ ಸವಿತಾ ಸಮಾಜದವರೆಂದರೆ ಸಮಾಜದಲ್ಲಿ ಕೀಳು ಭಾವಣೆ ಬೀರೂರಿದೆ ಎಲ್ಲಾ ಶುಭ ಸಮಾರಂಭಗಳಿಗೆ ನಾವು ಬೇಕು ನಮ್ಮ ಸಮಾಜದ ಜಯಂತಿ ಆಚರಣೆ ಎಂದರೆ ಯಾರೂ ಬರುವುದಿಲ್ಲ, ಅಧಿಕಾರಿಗಳ ವಿರುದ್ದ ಅಸಮಾಧಾನವ್ಯಕ್ತಪಡಿಸಿದರು.
ತಹಸೀಲ್ದಾರ್ ದಯಾನಂದ್ ಮಾತನಾಡಿ ಪ್ರತಿಯೊಂದು ಸಮಾಜಕ್ಕೂ ಅವರದೇ ಆದ ಇತಿಹಾಸವಿದೆ ಅಂಬೇಡ್ಕರ್, ಬುದ್ದರಂತೆ ಸವಿತಾ ಮಹರ್ಷಿರವರೂ ಸಮಾಜ ಉದ್ದಾರಕ್ಕೆ ಕೊಡುವೆ ನೀಡಿದ್ದಾರೆ. ಇಂತಹ ಮಹಾನೀಯರ ಜಯಂತಿ ನಾಲ್ಕು ಗೋಡೆಗಳ ನಡುವೆ ಆಚರಣೆ ಸರಿಯಿಲ್ಲ ಹಾಗೂ ಅಧಿಕಾರಿಗಳೂ ಅಸಡ್ಡೆ ತೋರುವುದು ಸಲ್ಲದುಎಂದರಲ್ಲದೆ ಸವಿತಾ ಸಮಾಜದವರು ಸಮಾಜಕ್ಕೆ ತನ್ನದೇ ಕೊಡುವೆ ನೀಡುತ್ತಿರುವರು.
ಅವರು ತಮ್ಮ ಕುಲ ಕಸುಬಿಗೆ ತಮ್ಮ ಮಕ್ಕಳನ್ನು ಬಿಡದೆ ಉನ್ನತ ಶಿಕ್ಷಣ ನೀಡಿ ಐಎಎಸ್ ಅಧಿಕಾರಿಗಳಾಗುವಂತೆ ಮಾಡಬೇಕು ಮತ್ತು ಸಮಾಜದ ಆಗು ಹೋಗುಗಳಲ್ಲಿ ಭಾಗಿಯಾಗುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ಧೇಶಕಿ ಅಂಜಲಿದೇವಿ, ಸವಿತಾ ಸಮಾಜದ ಗೌರವಾಧ್ಯಕ್ಷ ಕೇಶವಮೂರ್ತಿ, ರಾಜ್ಯ ಸಂಘದ ನಿರ್ದೇಶಕ ಬಿ.ಟಿ.ಆನಂದ್ ಕುಮಾರ್, ಜನಾಧಿಕಾರ ಸಂಘಟನೆಯ ಹೂವರಸನಹಳ್ಳಿ ರಾಜಪ್ಪ, ದಲಿತ ಮುಖಂಡ ರಮಣ್ ಕುಮಾರ್, ಸವಿತಾ ಸಮಾಜದ ನಾಗರಾಜ್, ಗುರಪ್ಪ, ಶ್ಯಾಮಪ್ಪ, ಹನುಮಪ್ಪ, ಪಿ.ಸಿ.ರಾಮಣ್ಣ,  ಗಂಟ್ಲಪ್ಪ, ಶಿವಕುಮಾರ್, ಜಯರಾಂ, ಮುರಳಿ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!