• Thu. Apr 25th, 2024

PLACE YOUR AD HERE AT LOWEST PRICE

ಪಕ್ಷದ ನೀತಿ, ನಿಯಮ, ನಿಷ್ಠೇ, ಪ್ರಾಮಾಣಿಕತೆ, ತತ್ವ ಸಿದ್ಧಾಂತಗಳನ್ನು ಅವಲೋಕಿಸಿ ನೋಡಿದಾಗ ಯುವಕ ಬಿ.ವಿ. ಮಹೇಶ್ ಬಿಜೆಪಿ ಟಿಕೆಟ್ ಪಡೆಯುವ ರೇಸ್ ನಲ್ಲಿದ್ದು ಮೇಲುಗೈ ಸಾಧಿಸಲಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪನವರ ಮಗನಾದ ಬಿ.ವಿ. ಮಹೇಶ್ ಪಕ್ಷದ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಯಾಗಿ, ಹಾಲಿ ಜಿಲ್ಲಾ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

2015ನೇ ಸಾಲನಲ್ಲಿ ನಡೆದ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೊಂದಾಯಿಸಿ ರಾಜ್ಯ ವರಿಷ್ಟರ ಕೃಪೆಗೆ ಪಾತ್ರರಾಗುದ್ದು, ಎಪಿಎಂಸಿ ಅಧ್ಯಕ್ಷರಾಗಿ ನೂತನ ಮಳಿಗೆಗಳ ನಿರ್ಮಾಣ, ನೂತನ ತರಕಾರಿ ಮಾರುಕಟ್ಟೆ, ಗೋದಾಮುಗಳನ್ನು ನಿರ್ಮಿಸಿ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಅನುವು ಮಾಡಿಕೊಟ್ಟಿದ್ದು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ತನ್ನ ರಾಜಕೀಯ ಚಾಣಾಕ್ಷತನದ ಮೂಲಕ ಕಾಂಗ್ರೆಸ್ ಭದ್ರಕೋಟೆಯಂತಿದ್ದ ಡಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ಮೊದಲಾದ ಕಾರಣಗಳು ಇವರಿಗೆ ಟಿಕೆಟ್ ಖಾತ್ರಿಪಡಿಸಿವೆ ಎನ್ನಲಾಗುತ್ತಿದೆ.

ಜೊತೆಗೆ ಹಲವು ವರ್ಷಗಳಿಂದ ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ತನ್ನ ಸ್ವಂತ ಹಣದಿಂದ ಬಿಜೆಪಿ ಪಕ್ಷವನ್ನು ಸಂಘಟಿಸುವ ಜೊತೆಗೆ ಸದಾ ಯುವಕರಿಗೆ ಪಕ್ಷದ ಪರವಾಗಿ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಾ ಬಡವರ, ರೈತರ,  ಶ್ರಮಿಕವರ್ಗದವರ ಒಡನಾಡಿಯಾಗಿ ಸೇವೆ ಮಾಡುತ್ತಾ ಜನಪ್ರಿಯತೆಯನ್ನು ಗಳಿಸುವಲ್ಲಿ ಸದಾ ನಿರತರಾಗಿದ್ದಾರೆ.

ಮಾಜಿ ಶಾಸಕ ಎಂ ನಾರಾಯಣಸ್ವಾಮಿ ತಮ್ಮದೇ ಆದ ವರ್ಚಸ್ಸು ಹಾಗೂ ಮತ ಬ್ಯಾಂಕನ್ನು ಹೊಂದಿದ್ದಾರೆ. ಇವರು ಮೂಲತಃ ಜನತಾದಳದವರಾಗಿ ಶಾಸಕರಾಗಿದ್ದರು. ತದನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ ಶಾಸಕರಾಗಿದ್ದರು. ತದನಂತರ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಶಾಸಕರಾಗಿದ್ದರು.

ವಿಪರ್ಯಾಸವೆಂದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರಿ ಪ್ರತ್ಯಕ್ಷವಾಗಿ ಮಲ್ಲೇಶ್ ಬಾಬುರನ್ನು ಬೆಂಬಲಿಸಿ ಬಿಜೆಪಿ ಪಕ್ಷದ ಸೋಲಿಗೆ ಕಾರಣರಾಗಿದ್ದು ಮತ್ತು ಸದಾ ಜನರ ಜೊತೆ ಬೆರೆಯದೆ ಚುನಾವಣೆ ಸಂದರ್ಭದಲ್ಲಿ ಜೋರಾಗಿ ಓಡಾಡುತ್ತಿದ್ದಾರೆ ಎಂಬ ಆಪಾದನೆ ಇದೆ ಎನ್ನಲಾಗುತ್ತಿದೆ.

ಇವರು ಪದೇ ಪದೇ ಪಕ್ಷ ಬದಲಾವಣೆ ಮಾಡುತ್ತಿರುವುದು ಕ್ಷೇತ್ರದ ಮತದಾರರಲ್ಲಿ ಜನಪ್ರಿಯತೆ ಕಡಿಮೆಯಾಗಲು ಕಾರಣವಾಗಿದೆ ಎನ್ನಲಾಗಿದೆ. ಬಿಜೆಪಿ ಪಕ್ಷದ ನಿಯಮದಂತೆ 70 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ನೀಡಲ್ಲ ಎಂಬ ಮಾತಿದೆ. ಈ ಹಿನ್ನೆಲೆಯಲ್ಲಿ ಬಿ.ವಿ. ಮಹೇಶ್ ರಿಗೆ ಟಿಕೆಟ್ ನೀಡುವ ಸಂಭವ  ಹೆಚ್ಚಾಗಿದೆ ಎಂದು ರಾಜಕೀಯ ಕ್ಷೇತ್ರದಲ್ಲಿ ಬಿಸಿ ಬಿಸಿ ಚರ್ಚೆಗಳಾಗುತ್ತಿವೆ.

ಒಂದು ವೇಳೆ ಮಹೇಶ್ ರಿಗೆ ಟಿಕೆಟ್ ನೀಡಿದ್ದೆಯಾದ್ದಲ್ಲಿ  ಬಂಗಾರಪೇಟೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟು ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಲಿದೆಯಾದರೂ ಪ್ರಸ್ತುತ ಕ್ಷೇತ್ರದಲ್ಲಿ ಬಿಜೆಪಿ ಪ್ರಧಾನಿ ಮೋದಿ ಅವರ ವರ್ಚಸ್ಸು, ಮುಖ್ಯಮಂತ್ರಿ ಕಾರ್ಯಗಳು ಹಾಗೂ ಸಂಸದರನ್ನು ಅವಲಂಬಿಸಿದೆ. ಪಕ್ಷ ಸಂಘಟನೆ ಸಮರ್ಪಕವಾಗಿ ಮಾಡದೇ ಇರುವುದು ಕಂಡುಬರುತ್ತಿದೆ.

ಬಿಜೆಪಿಯ ನಾಯಕರ ಆಂತರಿಕ ಭಿನ್ನಮತ ಹಾಗೂ ಗುಂಪುಗಾರಿಕೆಯ ಪರಿಣಾಮದಿಂದಾಗಿ ಬೇಸತ್ತು ಅನೇಕ ಕಾರ್ಯಕರ್ತರು ಮೌನ ವಹಿಸಿರುವುದು. ನಿಷ್ಠಾವಂತ ಕಾರ್ಯಕರ್ತರ ಕಡೆಗಣಿ ಹಾಗೂ ವಲಸಿಗ ಕಾರ್ಯಕರ್ತರಿಗೆ ಆದ್ಯತೆ ನೀಡಿರುವುದು ಪಕ್ಷ ಮಂಕಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.

ಸ್ಥಳೀಯ ಬಿಜೆಪಿ ನಾಯಕರಿಗೆ ಸಂಧಾನ ಆಣೆ ಪ್ರಮಾಣಗಳು ಹೊಸದೇನಲ್ಲ ಈ ಹಿಂದೆಯೂ ಕೂಡ ಇದೇ ರೀತಿ ಮಾಡಲಾಗಿತ್ತು, ಆದರೆ ಟಿಕೆಟ್ ವಂಚಿತರು ಬಂಡಾಯ ಏಳುವುದು ಹೊಸದೇನಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವುದು ಬಿಜೆಪಿ ಪಾಲಿಗೆ ಕಂಟಕ ಪ್ರಾಯವಾಗಲಿದೆ.

. 10ವರ್ಷಗಳು ಶಾಸಕರಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಎಲ್ಲರನ್ನೂ ಸರಿದೂಗಿಸಿಕೊಂಡು  ಕ್ಷೇತ್ರದಲ್ಲಿ ಕೆಲಸ ಮಾಡಿರುವುದಾಗಿ ಶಾಸಕ ಕಾಂಗ್ರೇಸ್ ಅಭ್ಯರ್ಥಿ ಎಸ್.ಎನ್.ನಾರಾಯಣಸ್ವಾಮಿ ಜನರ ಮುಂದೆ ಹೋಗುತ್ತಿದ್ದರೆ, ಕಳೆದ ಬಾರಿಯ ಸೋಲಿನ ಸೆಂಟಿಮೆಂಟ್ ಮತ್ತು ಜೆಡಿಎಸ್ ಪಂಚರತ್ನ ಕಾರ್ಯಕ್ರಮಗಳನ್ನಿಟ್ಟುಕೊಂಡು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಪ್ರಚಾರಕ್ಕಿಳಿದಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ತನ್ನದೇ ಸರ್ಕಾರಗಳಿದ್ದರೂ ಬಿಜೆಪಿ ತಡವಾಗಿ ಟೇಕಾಪ್ ತೆಗೆದುಕೊಂಡಿದ್ದು, ಸಂದಾನದಿಂದ ಹುರುಪು ಬಂದಿದ್ದು ಪ್ರಚಾರ ಚುರುಕಿನಿಂದ ನಡೆಸಲು ಸಜ್ಜುಗೊಳ್ಳುತ್ತಿದೆ. ಇದು ಫಲಪ್ರದವಾದರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ವಾತಾವರಣ ಇದ್ದು, ಕ್ಷೇತ್ರದಲ್ಲಿ ರಾಜಕೀಯ ರಂಗೇರುವ ಲಕ್ಷಣಗಳು ಕಾಣಿಸುತ್ತಿವೆ.

ಕೆ.ರಾಮಮೂರ್ತಿ.

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!