PLACE YOUR AD HERE AT LOWEST PRICE
ಚಿಂತಾಮಣಿ ತಾಲೂಕಿನ ಪುರಾಣ ಪ್ರಸಿದ್ದ ಕ್ಷೇತ್ರವಾದ ಆಲಂಬಗಿರಿ ಶ್ರೀ ಕಲ್ಕಿ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ರಥ ಸಪ್ತಮಿ ಪ್ರಯುಕ್ತ ವಿಶೇಷ ಸೂರ್ಯಪ್ರಭಾ ಉತ್ಸವವು ಶ್ರದ್ಧಾ ಭಕ್ತಿಗಳಿಂದ ನೆರವೇರಿತು.
ಸೂರ್ಯಪ್ರಭಾ ಉತ್ಸವದ ಪೀಠವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅಲಂಕೃತ ಉತ್ಸವದಲ್ಲಿ ಶ್ರೀದೇವಿ ಭೂದೇವಿ ಸಮೇತ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿಯ ಉತ್ಸವವು ಮಂಗಳವಾದ್ಯದೊಂದಿಗೆ ಆಲಂಬಗಿರಿ ಕ್ಷೇತ್ರದ ಪ್ರಮುಖ ಬೀದಿಯಲ್ಲಿ ಪ್ರಾಕಾರೋತ್ಸವವು ನಡೆಯಿತು.
ರಥ ಸಪ್ತಮಿ ಪ್ರಯುಕ್ತ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಗರ್ಭಗುಡಿಯಲ್ಲಿನ ಮೂಲ ವಿಗ್ರಹವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಉತ್ಸವದ ನಂತರ ಸ್ವಾಮಿಗೆ ಅಷ್ಟಾವಧಾನ ಸೇವೆಯನ್ನು ಸಲ್ಲಿಸಿ, ಮಹಾಮಂಗಳಾರತಿಯನ್ನು ಬೆಳಗಲಾಯಿತು. ಭಾಗವಹಿಸಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಕ್ತರು ರಥಸಪ್ತಮಿ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.