• Sat. Apr 20th, 2024

PLACE YOUR AD HERE AT LOWEST PRICE

ರೈತರು ದೇಶದ ಬೆನ್ನೆಲುಬು, ರೈತರಿಲ್ಲದೆ ದೇಶವಿಲ್ಲ ಎಂದು ಉದ್ದುದ್ದ ಭಾಷಣಗಳನ್ನು ಬೀಗಿದರೆ ಸಾಲದು, ಇಂದು ರೈತರನ್ನು ಕಡೆಗಣಿಸಿದರೆ ಮುಂದಿನ ದಿನಮಾನಗಳಲ್ಲಿ ದೇಶದಲ್ಲಿ ಆಹಾರ ಅಭದ್ರತೆ ಕಾಡಲಿದೆ ಎಂದು ಬಿಜಿಎಸ್ ಚಿಕ್ಕಬಳ್ಳಾಪುರ ಮತ್ತು ಕೋಲಾರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು.

ನಗರದ ಕಿಂಗ್ ಜಾರ್ಜ್ ಹಾಲ್‍ನಲ್ಲಿ ಕೆಜಿಎಫ್ ತಾಲ್ಲೂಕು ಕೋಳಿ ಸಾಕಾಣಿಕೆದಾರರ ರೈತರ ಕ್ಷೇಮಾಭಿವೃದ್ದಿ ಸಂಘದವರು ಹಮ್ಮಿಕೊಂಡಿದ್ದ ಕೆಜಿಎಫ್ ತಾಲ್ಲೂಕು ಸಮಾವೇಶದಲ್ಲಿ ಅವರು ಮಾತನಾಡಿದರು.
ರೈತರು ಬೆಳೆದ ಧಾನ್ಯಗಳಿಗೆ ಸರ್ಕಾರ ಬೆಲೆಯನ್ನು ನಿಗದಿ ಮಾಡಿದಾಗ ಮಾತ್ರ ರೈತರನ್ನು ರಕ್ಷಣೆ ಮಾಡಲು ಸಾಧ್ಯ, ರೈತರು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
 ಅಧಿಕಾರಕ್ಕೆ ಬಂದ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಾ ಬಂದಿರುವುದರಿಂದ ಶೇ 70-80 ರಷ್ಟು ದುಡಿಮೆಯನ್ನು ಮಾಡುತ್ತಿದ್ದ ರೈತರು ಇಂದು ಶೇ 50 ರಷ್ಟು ದುಡಿಮೆಯನ್ನು ಬಿಟ್ಟಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲ, ರೈತರು ಬೆಳೆದ ಪದಾರ್ಥಗಳಿಗೆ ಬೆಲೆ ನಿಗದಿ ಇಲ್ಲ, ಹಾಕಿದ ಬಂಡವಾಳ ಸಹ ವಾಪಸ್ಸು ಬಾರದೆ ಇದ್ದರೆ, ರೈತ ಹೇಗೆ ತಾನೆ ಜೀವನ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು.
ಸರ್ಕಾರಿ ನೌಕರಿ ಮಾಡುವವರಿಗೆ ತಿಂಗಳಿಗೆ ಒಂದಿಷ್ಟು ಸಂಬಳ ನಿಗದಿ ಮಾಡುತ್ತಾರೆ. ಆದರೆ ರೈತನಿಗೆ ಯಾವ ಸಂಬಳವು ಬರುವುದಿಲ್ಲ, ಸರ್ಕಾರಗಳು ರೈತರ ಪರ ನಿಂತು ರೈತರು ಉತ್ಪಾದನೆ ಮಾಡುವ ಪದಾರ್ಥಗಳಿಗೆ ಸರಿಯಾದ ಬೆಲೆಯನ್ನು ನಿಗದಿ ಮಾಡಬೇಕಿದೆ ಎಂದರು.
ರಾಜ್ಯ ಕೋಳಿ ಸಾಕಾಣಿಕೆದಾರರ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಸಣ್ಣ ಮಟ್ಟದಲ್ಲಿ ಕೋಳಿ ಸಾಕಾಣಿಕೆ ಮಾಡುವ ರೈತರಿಗೆ ಸರ್ಕಾರ ಉಚಿತ ವಿದ್ಯತ್ ನೀಡಬೇಕಿದೆ. ಸರ್ಕಾರದಿಂದ ಒಂದು ಕೋಳಿಗೆ 2 ರೂಪಾಯಿಗಳ  ಸಹಾಯ ಧನವನ್ನು ನೀಡಬೇಕು ಕೋಳಿ ಸಾಕಾಣಿಕೆಗೆ ಅಗತ್ಯ ಸಲಕರಣೆಗಳನ್ನು ಸರ್ಕಾರ ರಿಯಾಯಿತಿ ದರದಲ್ಲಿ ನೀಡಬೇಕೆಂದು ಆಗ್ರಹಿಸಿದರು.
ಕೋಳಿ ಸಾಕಾಣಿಕೆದಾರರ ರಾಜ್ಯ ಗೌರವಾಧ್ಯಕ್ಷ ಬೈಯ್ಯಾರೆಡ್ಡಿ ಮಾತನಾಡಿ, ರೈತರು ಸಹಕಾರ ಸಂಘಗಳ ಮೂಲಕ ಹಾಲು ಮಾರಾಟ ಮಾಡುತ್ತಿದ್ದಾರೆ, ಹಸುಗಳ ಸಾಕಾಣಿಕೆ ವೆಚ್ಚವು ಹೆಚ್ಚಾಗಿರುವುದರಿಂದ ಹಾಲು ಉತ್ಪಾದನೆ ಮೇಲೆ ಕರಿನೆರಳು ಆವರಿಸಿದೆ.
ಆದ್ದರಿಂದ ಸರ್ಕಾರ ಒಂದು ಲೀಟರ್ ಹಾಲಿಗೆ 5 ರೂಪಾಯಿಗಳ ಪ್ರೋತ್ಸಾಹಧನ ನೀಡಬೇಕು. ನಮ್ಮ ದೇಶ ಶೇ
80 ರಷ್ಟು ಕೃಷಿ ಆಧಾರಿತ ದೇಶ, ಸರ್ಕಾರಗಳು ರೈತರನ್ನು ಕಡೆಗಣಿಸುತ್ತಿವೆ, ಮನುಷ್ಯನಿಗೆ ಹಸಿವಾದಾಗ ಅನ್ನ ಬೇಕೆ ಹೊರತು, ಕಾರ್ಖಾನೆಗಳು ತಯಾರಿಸುವ ಕಬ್ಬಿಣ ತಿನ್ನಲು ಅಗುವುದಿಲ್ಲ.
ರೈತರು ಬೆಳೆ ಬೆಳೆಯಲು ರಸಗೊಬ್ಬರ, ಬಿತ್ತನೆ ಬೀಜ, ಔಷಧಿಗಳನ್ನು ಸರ್ಕಾರ ರಿಯಾಯಿತಿ ದರದಲ್ಲಿ ಸಹಕಾರ ಸಂಘಗಳ ಮೂಲಕ ತಲುಪುವ ವ್ಯವಸ್ಥೆಯನ್ನು ಮಾಡಬೇಕೆಂದರು.
ಕಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಸಮಾಜ ಸೇವಕ ಬಾಲಕೃಷ್ಣ, ವಕೀಲರ ಸಂಘದ ಅಧ್ಯಕ್ಷ
ಎಸ್.ಎನ್.ರಾಜಗೋಪಾಲಗೌಡ, ಸಿ.ಎಂ.ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಪ್ರಮೋದ್, ಕೆ.ವಿ.ಚಲಪತಿ, ವೇಣುಗೋಪಾಲ್, ಪ್ರದೀಪ್‍ಗೌಡ ಮೊದಲಾದವರಿದ್ದರು.

Related Post

2024ರ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ – ಎಂ.ಎಲ್.ಸಿ. ಸುಧಾಮದಾಸ್
ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,

Leave a Reply

Your email address will not be published. Required fields are marked *

You missed

error: Content is protected !!