• Thu. Mar 28th, 2024

ಆಲೂರು ವೆಂಕಟರಾಯರ ಭಾಷಾ ಕೌಶಲ್ಯ ತರಬೇತಿಸಂಸ್ಥೆಯಿ0ದ ಪ್ರಬಂಧ ಸ್ಪರ್ಧೆ ಸಾಹಿತಿಗಳ ಕುರಿತು ಅರಿವು ಪಡೆದು ಕನ್ನಡ ಜ್ಞಾನ ಹೆಚ್ಚಿಸಿಕೊಳ್ಳಿ-ಪ್ರವೀಣ್ ಕರೆ

PLACE YOUR AD HERE AT LOWEST PRICE

ನಾಡು,ನುಡಿಗೆ ಅಪಾರ ಕೊಡುಗೆ ನೀಡಿರುವ ಸಾಹಿತಿಗಳು,ಕಲಾವಿದರ ಕುರಿತು ತಿಳಿದುಕೊಳ್ಳುವ ಮೂಲಕ ಮಕ್ಕಳು ಕನ್ನಡ ಜ್ಞಾನವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್ ಕರೆ ನೀಡಿದರು.

ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಆಲೂರು ವೆಂಕಟರಾಯರ ಭಾಷಾ ಕೌಶಲ್ಯ ತರಬೇತಿ ಸಂಸ್ಥೆ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗಾಗಿ ನಡೆದ `ಕನ್ನಡ ಸಾಹಿತ್ಯಲೋಕಕ್ಕೆ ರಾಷ್ಟçಕವಿ ಕುವೆಂಪು ಅವರ ಕೊಡುಗೆಗಳು’ ವಿಷಯದ ಕುರಿತ ಪ್ರಬಂಧ ಸ್ಪರ್ಧೆ, ಕೈಬರಹ ಮತ್ತು ಧ್ಚನಿಮುದ್ರಿತ ಬರವಣಿಗೆ ಸ್ವರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.

ಕುವೆಂಪು ಅವರು ಕವಿಯಾಗಿ ಕನ್ನಡ ನಾಡು,ನುಡಿಗೆ ನೀಡಿರುವ ಕೊಡುಗೆ ಅಪಾರವಾಗಿದೆ, ಅವರ ವಿಶ್ವಮಾನವ ಸಂದೇಶ ಎಂದೆ0ದಿಗೂ ಸರ್ವಮಾನ್ಯವಾಗಿದ್ದು, ಅವರ ಕುರಿತು ಮಕ್ಕಳು ಹೆಚ್ಚಿನ ಅಭ್ಯಾಸ ಮಾಡಬೇಕು, ಅವರ ಸಾಹಿತ್ಯವನ್ನು ಓದಬೇಕು ಎಂದರು.

ಕನ್ನಡ ಭಾಷೆ ಶ್ರೀಮಂತವಾಗಿದೆ, ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ನಮ್ಮ ಕನ್ನಡಕ್ಕಿದೆ ಎಂದ ಅವರು, ಇತರೆ ಭಾಷೆ ಕಲಿಯುವುದು ತಪ್ಪಲ್ಲ ಆದರೆ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸುವ ಹೊಣೆಯನ್ನು ಈ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಹೊರಬೇಕು ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿ.ಆರ್.ರಶ್ಮಿ ಮಾತನಾಡಿ, ಪ್ರಬಂಧ ಸ್ಪರ್ಧೆಯಿಂದಾಗಿ ಮಕ್ಕಳಲ್ಲಿ ಬರವಣಿಗೆ ಕೌಶಲ್ಯ ವೃದ್ದಿ, ಕನ್ನಡ ಸಾಹಿತಿಗಳ ಕುರಿತಾತ ಜ್ಞಾನ ಹೆಚ್ಚಲು ಸಹಕಾರಿಯಾಗಿದೆ, ತಾಲ್ಲೂಕುಮಟ್ಟದಲ್ಲಿ ಗೆದ್ದವರು ಜಿಲ್ಲಾಮಟ್ಟದಲ್ಲೂ ಭಾಗವಹಿಸಿ ಕೀರ್ತಿ ತನ್ನಿ ಎಂದು ಕಿವಿಮಾತು ಹೇಳಿದರು.

ಪ್ರಬಂಧ ಸ್ಪರ್ಧೆಯ
ವಿಜೇತರ ಪಟ್ಟಿ:

ಪ್ರಬಂಧ ಸ್ಪರ್ಧೆಯನ್ನು ೬ರಿಂದ ೮ನೇ ತರಗತಿವರೆಗೂ ಒಂದು ಹಂತ ಹಾಗೂ ೯ರಿಂದ ೧೦ನೇ ತರಗತಿ ವರೆಗೂ ಸೇರಿದಂತೆ ಎರಡು ಹಂತಗಳಲ್ಲಿ ನಡೆಸಲಾಯಿತು. ಪ್ರಾಥಮಿಕ ಹಂತದಲ್ಲಿ ನಗರದ ಬಾಲಕಿಯರ ಪಿಯು ಕಾಲೇಜಿನ ೮ನೇ ತರಗತಿಯ ಎಂ.ಸ್ಪೂರ್ತಿ ಪ್ರಥಮ, ಕೆಂಬೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ದೀಪ್ತಿ ದ್ವಿತೀಯ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮದ್ದೇರಿಯ ದೀಪ್ತಿ ತೃತೀಯ ಸ್ಥಾನ ಪಡೆದುಕೊಂಡರು.

೯ ಮತ್ತು ೧೦ನೇ ತರಗತಿ ವಿಭಾಗದಲ್ಲಿ ಮದ್ದೇರಿ ಸರ್ಕಾರಿ ಪ್ರೌಢಶಾಲೆಯ ಎಂ.ವೇದ ಪ್ರಥಮ, ಕೋಲಾರದ ಬಾಲಕಿಯರ ಪಿಯು ಕಾಲೇಜಿನ ಹೆಚ್.ಎಂ.ಶ್ವೇತಾ ದ್ವಿತೀಯ ಹಾಗೂ ತ್ಯಾವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಟಿ.ಕೆ.ಸರಿತಾ ತೃತೀಯ ಸ್ಥಾನ ಪಡೆದುಕೊಂಡಿದ್ದು, ಎಲ್ಲರಿಗೂ ಪ್ರಮಾಣಪತ್ರ ಹಾಗೂನಗದು ಪುರಸ್ಕಾರ ನೀಡಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕರಾದ ಶರಣಪ್ಪ ಜಮಾದಾರ್, ಸಣ್ಣರಂಗಪ್ಪ, ಪಿ.ಎನ್.ಪ್ರಮೀಳಾ, ಜಿ.ವಿ.ಸುನಂದ, ಕೋಟೇಶ್ವರರಾವ್, ರಾಮಪ್ಪ ಮತ್ತಿತರರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

 

Leave a Reply

Your email address will not be published. Required fields are marked *

You missed

error: Content is protected !!